ನಂಜನಗೂಡು ತಾಲೂಕು ನೂತನ ಆರೋಗ್ಯಾಧಿಕಾರಿ ಡಾ.ಈಶ್ವರ್ ಬಿ.ಕಾನಟ್ಕಿ
ಮೈಸೂರು

ನಂಜನಗೂಡು ತಾಲೂಕು ನೂತನ ಆರೋಗ್ಯಾಧಿಕಾರಿ ಡಾ.ಈಶ್ವರ್ ಬಿ.ಕಾನಟ್ಕಿ

August 25, 2020

ಮೈಸೂರು, ಆ. 24(ಆರ್‍ಕೆ)-ಡಾ.ನಾಗೇಂದ್ರ ಅವರ ಆತ್ಮ ಹತ್ಯೆಯಿಂದ ತೆರವಾಗಿದ್ದ ನಂಜನ ಗೂಡು ತಾಲೂಕು ಆರೋಗ್ಯಾಧಿ ಕಾರಿ ಸ್ಥಾನಕ್ಕೆ ಮೂಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಈಶ್ವರ್ ಬಿ. ಕಾನಟ್ಕಿ ಅವರನ್ನು ನಿಯೋಜಿಸ ಲಾಗಿದೆ. ನಂಜನಗೂಡು ತಾಲೂಕು ಪ್ರಭಾರ ತಾಲೂಕು ಆರೋಗ್ಯಾಧಿ ಕಾರಿಯಾಗಿ ಡಾ. ಈಶ್ವರ್ ಬಿ. ಕಾನಟ್ಕಿ ಅವರನ್ನು ನಿಯೋಜಿಸಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆದೇಶ ಹೊರಡಿಸಿದ್ದು, ಅವರು ನಾಳೆ (ಆ. 25) ಅಧಿಕಾರ ವಹಿಸಿಕೊಳ್ಳುವರು. ನಂಜನಗೂಡು ತಾಲೂಕು ಪ್ರಭಾರ ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ನಾಗೇಂದ್ರ, ಮೈಸೂರಿನ ಆಲನ ಹಳ್ಳಿಯ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಅವರ ಸಾವಿಗೆ ಜಿಲ್ಲಾ ಪಂಚಾಯ್ತಿ ಸಿಇಓ ಪ್ರಶಾಂತ್‍ಕುಮಾರ್ ಮಿಶ್ರಾ ಅವರು ಒತ್ತಡವೇ ಕಾರಣ ಎಂದು ಆರೋಪಿಸಿ ವೈದ್ಯರು ಮುಷ್ಕರ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣ ಸಂಬಂಧ ಸಿಇಓ ಅವ ರನ್ನು ವರ್ಗಾವಣೆ ಮಾಡಲಾಗಿದ್ದು, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರೇ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

Translate »