ಕೌಟಿಲ್ಯ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಅಂಡ್   ಗೈಡ್ಸ್‍ನ ‘ರಾಜ್ಯ ಪುರಸ್ಕಾರ್’ ಪ್ರಶಸ್ತಿ
ಮೈಸೂರು

ಕೌಟಿಲ್ಯ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಅಂಡ್  ಗೈಡ್ಸ್‍ನ ‘ರಾಜ್ಯ ಪುರಸ್ಕಾರ್’ ಪ್ರಶಸ್ತಿ

August 25, 2020

ಮೈಸೂರು,ಆ.24-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಡೆಯುವ ಪ್ರವೇಶ, ಪ್ರಥಮ, ದ್ವಿತೀಯ ಮತ್ತು ತೃತೀಯ ಸೋಪಾನ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ, 9 ತಿಂಗಳುಗಳ ಕಾಲ ಸಾಮಾಜಿಕ ಕಾರ್ಯ ಗಳಲ್ಲಿ ತೊಡಗಿಸಿಕೊಂಡ ಕೌಟಿಲ್ಯ ವಿದ್ಯಾ ಲಯದ ವಿದ್ಯಾರ್ಥಿಗಳು, ರಾಜ್ಯ ಸರ್ಕಾ ರದ ವತಿಯಿಂದ ನಡೆಸಲಾಗುವ ಪರೀಕ್ಷೆ ಯಲ್ಲಿ ತೇರ್ಗಡೆ ಹೊಂದಿ, ‘ರಾಜ್ಯ ಪುರಸ್ಕಾರ್ ಪ್ರಶಸ್ತಿ’ಯನ್ನು ಪಡೆದಿದ್ದಾರೆ. ಗೈಡ್ಸ್‍ಗಳಾದ ಶುಭಾಂಗಿ, ಅಮೂಲ್ಯ, ಜಾನ್ವಿ ಚೇತನ್ ಪಟೇಲ್, ಸ್ಕೌಟ್ಸ್‍ಗಳಾದ ಧ್ಯಾನ್ ಕೆ.ಎನ್., ನಿತಿನ್ ಕೃಷ್ಣ, ಸಾಯಿತ್ ಪ್ರಕಾಶ್, ಶ್ರೇಯಸ್ ಕುಮಾರ್, ಲಿಖಿತ್ ಜಿ. ಪ್ರತೀಕ್ ಚೋಪ್ರ, ಅತೀಶ್ ರಾಜ್ ಸೇರಿ ಹತ್ತು ವಿದ್ಯಾರ್ಥಿಗಳು ಈ ಪುರಸ್ಕಾರಕ್ಕೆ ಭಾಜನರಾಗಿ ದ್ದಾರೆ. ಇವರನ್ನು ಕೌಟಿಲ್ಯ ವಿದ್ಯಾಲಯದ ಆಡಳಿತ ಮಂಡಳಿ ಅಭಿನಂದಿಸಿದೆ.

Translate »