ಮತದಾರರ ಪಟ್ಟಿ ಪರಿಷ್ಕರಣೆ: 2021, ಜನವರಿ 1ಕ್ಕೆ   18 ವರ್ಷ ಪೂರೈಸಿದವರ ಹೆಸರು ಸೇರ್ಪಡೆಗೆ ಅವಕಾಶ
ಮೈಸೂರು

ಮತದಾರರ ಪಟ್ಟಿ ಪರಿಷ್ಕರಣೆ: 2021, ಜನವರಿ 1ಕ್ಕೆ  18 ವರ್ಷ ಪೂರೈಸಿದವರ ಹೆಸರು ಸೇರ್ಪಡೆಗೆ ಅವಕಾಶ

August 25, 2020

ಮೈಸೂರು, ಆ.24- ಮತದಾರರ ಪಟ್ಟಿ ಪರಿ ಷ್ಕರಣೆ-01.01.2021ಕ್ಕೆ ಸಂಬಂ ಧಿಸಿದಂತೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜನವರಿ 1, 2021ಕ್ಕೆ ಅನ್ವಯ ವಾಗುವಂತೆ 18 ವರ್ಷಗಳನ್ನು ಪೂರೈಸಿದ ಯುವ ಹಾಗೂ ಭವಿ ಷ್ಯದ ಮತದಾರರು ನಮೂನೆ-6ನ್ನು ಅಂತರ್ಜಾಲದಲ್ಲಿ ಅಥವಾ ನೇರವಾಗಿ ಭರ್ತಿ ಮಾಡಿ ಪೂರಕ ದಾಖಲೆಗಳೊಂದಿಗೆ ಕಡ್ಡಾಯವಾಗಿ ಹತ್ತಿರದ ಮತಗಟ್ಟೆ ಅಧಿಕಾರಿಗಳ (ಬಿ.ಎಲ್.ಒ) ಮೂಲಕ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಯವರ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಮತದಾರರ ಪಟ್ಟಿಯ ಹೆಸರು ನೋಂದಾವಣಿ, ತಿದ್ದುಪಡಿ ಮತ್ತು ತೆಗೆದು ಹಾಕಲು ಅಕ್ಟೋಬರ್ 31 ರವರೆಗೆ ಅವಕಾಶ ನೀಡಲಾಗಿದೆ. ನವೆಂಬರ್ 16 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನವೆಂಬರ್ 16ರಿಂದ ಡಿಸೆಂಬರ್ 15ರವರೆಗೆ ಅವಕಾಶ ನೀಡ ಲಾಗಿದೆ. ಮತದಾರರು ಓಗಿSP ಠಿoಡಿಣಚಿಟ ಗಳಲ್ಲಿ, ಸಾಮಾನ್ಯ ಸೇವಾ ಕೇಂದ್ರಗಳು (ಅommoಟಿ Seಡಿviಛಿe ಅeಟಿಣeಡಿs) ಗಳಲ್ಲಿ ಮತ್ತು ಃಐಔ ಇಂದ ಇಖಔವರೆವಿಗೆ ಯಾವು ದಾದರೂ ಚುನಾವಣಾ ಅಧಿಕಾರಿ/ನೌಕರರಿಗೆ ಅರ್ಜಿ ಯನ್ನು ಸಲ್ಲಿಸಿ ತಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳ ಬಹುದು. ವಿಳಾಸ ಬದಲಾವಣೆ ಹಾಗೂ ತಿದ್ದುಪಡಿಗೆ ಸಂಬಂಧಿಸಿದಂತೆ ಯಾವುದಾದರೂ ವ್ಯತ್ಯಾಸಗಳು ಕಂಡುಬಂದಲ್ಲಿ ನಮೂನೆ-8 ಹಾಗೂ ನಮೂನೆ-8ಎ (ವಿಧಾನಸಭಾ ಕ್ಷೇತ್ರದೊಳಗೆ)ರಲ್ಲಿ ಅರ್ಜಿಯನ್ನು (ಅರ್ಜಿಯನ್ನು ಮತದಾರರಿಂದ ಪಡೆದು) ದಾಖಲಿಸಿ ವಿವರಗಳನ್ನು ತಿದ್ದುಪಡಿ ಮಾಡಿಕೊಳ್ಳಬಹುದಾಗಿ ರುತ್ತದೆ. ಮೃತ/ಸ್ಥಳಾಂತರಗೊಂಡ ಮತದಾರರು ಕಂಡು ಬಂದಲ್ಲಿ ನಮೂನೆ-7ರಲ್ಲಿ ಅರ್ಜಿಯನ್ನು (ಸ್ವಯಂ ಸ್ಥಳಾಂತರಗೊಂಡ ಮತದಾರರ/ಕುಟುಂಬದ ಸದಸ್ಯ ರಿಂದ/ಹತ್ತಿರದ ಸಂಬಂಧಿಕರಿಂದ ಅರ್ಜಿಯನ್ನು ಪಡೆದು) ದಾಖಲಿಸಿ ಮತದಾರರ ಪಟ್ಟಿಯಿಂದ ಕೈ ಬಿಡಬಹು ದಾಗಿರುತ್ತದೆ. ಅರ್ಹ, ನೋಂದಣಿಯಾಗದ ಮತ ದಾರರು/ಪ್ರಜೆಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ನಮೂನೆ-6ರಲ್ಲಿ ಅರ್ಜಿಯನ್ನು ದಾಖಲಿ ಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಪಿರಿಯಾ ಪಟ್ಟಣ, ಕೆ.ಆರ್.ನಗರ, ಹುಣಸೂರು ಹಾಗೂ ಹೆಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಮತದಾರರು ಉಪ ವಿಭಾಗಾಧಿಕಾರಿಗಳು, ಹುಣಸೂರು ಕಚೇರಿ ಸಂಖ್ಯೆ 08222-252073 ಅಥವಾ ಆಯಾ ತಾಲೂಕಿನ ತಹಸೀಲ್ದಾರ್ ಕಚೇರಿಯನ್ನು ಭೇಟಿ ಮಾಡುವುದು.

 

 

 

Translate »