ಗಾಳಿಯಲ್ಲಿ ಕೊರೊನಾ ಹರಡಲಿದೆ ಎಂಬ ವಾದ ತಳ್ಳಿ ಹಾಕುವುದಿಲ್ಲ: ವಿಶ್ವ ಆರೋಗ್ಯ ಸಂಸ್ಥೆ
ಮೈಸೂರು

ಗಾಳಿಯಲ್ಲಿ ಕೊರೊನಾ ಹರಡಲಿದೆ ಎಂಬ ವಾದ ತಳ್ಳಿ ಹಾಕುವುದಿಲ್ಲ: ವಿಶ್ವ ಆರೋಗ್ಯ ಸಂಸ್ಥೆ

July 9, 2020

ಜಿನಿವಾ, ಜು. 8- ಕೊರೊನಾ ವೈರಸ್ ಗಾಳಿಯ ಮೂಲಕ ಹರಡುತ್ತದೆ ಎಂಬ ವಾದವನ್ನು ತಳ್ಳಿಹಾಕಲಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಎಚ್‍ಒಒ) ಹೇಳಿದೆ. ವಿಶ್ವದಾದ್ಯಂತ 200ಕ್ಕೂ ಹೆಚ್ಚು ವಿಜ್ಞಾನಿಗಳು ಕೊರೊನಾ ವೈರಸ್ ಗಾಳಿಯ ಮೂಲಕ ಹರಡುತ್ತದೆ ಎಂದು ಪ್ರತಿಪಾದಿಸಿದ್ದರು. ಇದಕ್ಕೆ ಸಂಬಂಧಿಸಿದ ಆಧಾರ ಗಳನ್ನು ಪರಿಗಣಿಸಿರುವ ಡಬ್ಲ್ಯುಎಚ್‍ಒ ಅವರ ವಾದವನ್ನು ಬೆಂಬಲಿಸಿದೆ. ಈ ಹಿನ್ನೆಲೆ ಕೊರೊನಾ ವೈರಸ್‍ಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳನ್ನು ಜಾರಿ ಗೊಳಿಸಬೇಕು ಎಂದು ವಿಜ್ಞಾನಿಗಳ ತಂಡ ವಿಶ್ವ ಆರೋಗ್ಯ ಸಂಸ್ಥೆಯನ್ನು ಕೋರಿದೆ.

Translate »