ಮೈಸೂರಲ್ಲಿ ಹಿಡಿತಕ್ಕೆ ಸಿಗುತ್ತಿಲ್ಲ ಮಹಾಮಾರಿ ಕೊರೊನಾ
ಮೈಸೂರು

ಮೈಸೂರಲ್ಲಿ ಹಿಡಿತಕ್ಕೆ ಸಿಗುತ್ತಿಲ್ಲ ಮಹಾಮಾರಿ ಕೊರೊನಾ

July 8, 2020

ಮೈಸೂರು, ಜು.7(ಎಸ್‍ಬಿಡಿ)- ಬೆಂಗಳೂರಿನಲ್ಲಿ ಕೊರೊನಾ ಸೋಂಕು ಎಲ್ಲೆ ಮೀರುತ್ತಿದ್ದು, ನಿತ್ಯ ಸಾವಿರಕ್ಕೂ ಹೆಚ್ಚು ಪ್ರಕ ರಣಗಳು ದಾಖಲಾಗುತ್ತಿವೆ. ಇದರಿಂದ ಆತಂಕಗೊಂಡಿರುವ ಜನ ತಮ್ಮ ಹುಟ್ಟೂರ ಹಾದಿ ಹಿಡಿದಿದ್ದಾರೆ. ಪರಿಣಾಮ ರಾಜ್ಯ ದೆಲ್ಲೆಡೆ `ಬೆಂಗಳೂರು ಭಯ’ ಸೃಷ್ಟಿಯಾ ಗಿದೆ. ಅದರಲ್ಲೂ ಬೆಂಗಳೂರಿನೊಂದಿಗೆ ನಿಕಟ ನಂಟು ಹೊಂದಿರುವ ಮೈಸೂರಿಗೆ ದೊಡ್ಡ ಸವಾಲು ಎದುರಾಗಿದೆ.

ಲಾಕ್‍ಡೌನ್ ಸಂದರ್ಭದಲ್ಲಿ ಸೋಂಕಿತ 94 ಮಂದಿಯೂ ಗುಣಮುಖರಾಗಿದ್ದರು. ಪ್ರಕರಣ ಸಂಖ್ಯೆ ಶೂನ್ಯವಾದಾಗ ಮೈಸೂ ರಿನ ಜನ ನಿಟ್ಟುಸಿರು ಬಿಟ್ಟಿದ್ದರು. ನಂತರ ದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿ, ಅಂತಾ ರಾಜ್ಯ ಪ್ರಯಾಣಕ್ಕೆ ಅವಕಾಶ ನೀಡುತ್ತಿ ದ್ದಂತೆ 2ನೇ ಹಂತದ ಹೋರಾಟ ಆರಂಭ ವಾಯಿತು. ತಮಿಳುನಾಡು, ಮಹಾರಾಷ್ಟ್ರ, ರಾಜಸ್ತಾನ ಇನ್ನಿತರ ರಾಜ್ಯಗಳಿಂದ ಬಂದ ವರಲ್ಲಿ ಶಂಕಿತರಿಗೆ ಮಾತ್ರ ಕೋವಿಡ್ ಪರೀಕ್ಷೆ ಮಾಡಿಸಲಾಯಿತು. ಆಗ ದಿನೇ ದಿನೆ ಪ್ರಕ ರಣಗಳ ಸಂಖ್ಯೆ ಹೆಚ್ಚಿತು. ಅವರೆಲ್ಲಾ ಕ್ವಾರಂ ಟೇನ್‍ನಲ್ಲಿ ಇದ್ದವರಾದ್ದರಿಂದ ಸೋಂಕು ಹರಡುವಿಕೆಗೆ ಅವಕಾಶವಿರಲಿಲ್ಲ. ಆದರೀಗ ಅಂತಾರಾಜ್ಯದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೇನ್ ಇಲ್ಲ. ಮನೆಯಲ್ಲೇ ಉಳಿಯಲು ಅವಕಾಶವಿದೆ. ಇದರಿಂದ ಸಹಜವಾಗಿ ಜನ ರಲ್ಲಿ ಭೀತಿ ಹೆಚ್ಚಿದೆ. ಅದರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿರುವವರಲ್ಲಿ ಅಂತಾರಾಜ್ಯ ಪ್ರಯಾಣಿಕರಿಗಿಂತ ಬೆಂಗಳೂರಿನಿಂದ ಬಂದ ವರೇ ಹೆಚ್ಚಾಗಿರುವುದು ಆತಂಕ ಮೂಡಿಸಿದೆ.

ಬೆಂಗಳೂರು ಪಾಠವಾಗಬೇಕು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ದಿನೇ ದಿನೆ ಮಿತಿ ಮೀರುತ್ತಿದೆ. 10 ದಿನಗಳ ಹಿಂದಷ್ಟೇ ನೂರರ ಲೆಕ್ಕದಲ್ಲಿದ್ದ ಪ್ರಕರಣಗಳ ಸಂಖ್ಯೆ ನಿತ್ಯ ಸಾವಿರ ಮೀರುತ್ತಿವೆ. ಕೆಲ ದಿನಗಳಿಂದ ನಿತ್ಯವೂ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆ ಗಳಲ್ಲಿ ಹಾಸಿಗೆ ಖಾಲಿ ಇಲ್ಲ, ಆಂಬುಲೆನ್ಸ್ ಬರುತ್ತಿಲ್ಲ, ಮೃತದೇಹಗಳನ್ನು ಬೇಕಾಬಿಟ್ಟಿ ಮಣ್ಣು ಮಾಡುತ್ತಿದ್ದಾರೆ ಎಂದೆಲ್ಲಾ ಆರೋಪಗಳು ಕೇಳಿಬರುತ್ತಿವೆ. ಒಟ್ಟಾರೆ ಬೆಂಗಳೂರಿನ ಪರಿಸ್ಥಿತಿ ಮೈಸೂರಿಗೆ ಪಾಠವಾಗಬೇಕಿದೆ. ಕೊರೊನಾ ನಿಯಂತ್ರಣ ಕಾರ್ಯ, ಸೋಂಕಿತರಿಗೆ ಚಿಕಿತ್ಸೆ ಸೇರಿದಂತೆ ಇಡೀ ನಿರ್ವಹಣೆ ಸಮರ್ಪಕವಾಗಿದ್ದರೂ ಮುಂದೆ ಎದುರಾಗಬಹುದಾದ ಸವಾಲುಗಳಿಗೆ ಸಜ್ಜಾಗಬೇಕಿದೆ. ಈಗಾಗಲೇ ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿ ಸಲು, ಇಎಸ್‍ಐ ಆಸ್ಪತ್ರೆಯಲ್ಲಿ 100 ಬೆಡ್, ವಿಕ್ರಮ್ ಆಸ್ಪತ್ರೆ ಹಾಗೂ ಮಂಡಕಳ್ಳಿ ವಿಮಾನ ನಿಲ್ದಾಣದ ಸಮೀಪ ಇರುವ ಕೆಎಸ್ ಒಯು ವಿಸ್ತರಣಾ ಕಟ್ಟಡದಲ್ಲಿ 500 ಬೆಡ್ ಆಸ್ಪತ್ರೆ ಸಜ್ಜುಗೊಳಿಸಲಾಗುತ್ತಿದೆ. ಕೆಲ ಖಾಸಗಿ ಆಸ್ಪತ್ರೆ ಗಳಲ್ಲೂ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧರಾಗಿದ್ದಾರೆ. ಸರ್ಕಾರಿ ಆಸ್ಪತ್ರೆ ಯಲ್ಲಿರುವ 17ರಲ್ಲಿ 14 ವೆಂಟಿಲೇಟರ್ ಬಳಕೆ ಮಾಡಲಾಗುತ್ತಿದೆ. ಹಾಗಾಗಿ ಹಾಸಿಗೆ ಸಂಖ್ಯೆಯ ಜೊತೆಗೆ ವೆಂಟಿಲೇಟರ್, ಆಂಬುಲೆನ್ಸ್ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳಬೇಕು. ಅಗತ್ಯ ಸಿಬ್ಬಂದಿಯನ್ನೂ ಸಜ್ಜುಗೊಳಿಸಬೇಕು. ಮುಂಜಾಗ್ರತಾ ಕ್ರಮವಾಗಿ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಸೂಕ್ತ ಜಾಗ ನಿಗದಿ ಪಡಿಸಿ, ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ಇದೀಗ ಹೋಮ್ ಐಸೋಲೇಷನ್‍ಗೆ ಅವಕಾಶವಿರುವುದರಿಂದ ಈ ವ್ಯವಸ್ಥೆ ಯಲ್ಲೂ ಯಾವುದೇ ಗೊಂದಲವಾಗ ದಂತೆ ನೋಡಿಕೊಳ್ಳಬೇಕಿದೆ.

ನಮ್ಮ ರಕ್ಷಣೆ ನಮ್ಮ ಹೊಣೆ: ಕೊರೊನಾ ಪ್ರಕರಣ ಹೆಚ್ಚುತ್ತಿರುವುವುದರಿಂದ ಆತಂಕ ವಾಗುವುದು ಸಹಜ. ಆದರೆ ಮನೋ ಸ್ಥೈರ್ಯವೇ ಕೊರೊನಾಗೆ ಮದ್ದು. ಹಾಗಾಗಿ ಆತಂಕಪಡುವುದಕ್ಕಿಂತ ಎಚ್ಚರಿಕೆಯಿಂದ ಇರಬೇಕು. ನಮ್ಮ ರಕ್ಷಣೆ ನಮ್ಮ ಹೊಣೆ ಎಂಬು ದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಜೊತೆಗೆ ಮುನ್ನೆಚ್ಚರಿಕೆ ವಹಿಸುವ ಮೂಲಕ ಸಾಮಾ ಜಿಕ ಜವಾಬ್ದಾರಿಯನ್ನೂ ನಿರ್ವಹಿಸಬೇಕು. ಎಲ್ಲೆಂದರಲ್ಲಿ ಉಗುಳಬಾರದು. ಸೀನುವಾಗ ಹಾಗೂ ಕೆಮ್ಮುವಾಗ ಕರವಸ್ತ್ರ ಅಡ್ಡ ಹಿಡಿದು ಕೊಳ್ಳಬೇಕು. ಅನಗತ್ಯವಾಗಿ ಓಡಾಡಬಾರದು. ಅನಿವಾರ್ಯವಾಗಿ ಹೋಗಬೇಕಾದಾಗ ಮಾಸ್ಕ್ ಧರಿಸಲೇಬೇಕು. ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಬಿಸಿ ನೀರು, ರೋಗ ನಿರೋಧಕ ಹೆಚ್ಚಿಸುವ ಆಹಾರ ಪದಾರ್ಥ ಸೇವಿಸಬೇಕು. ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು.

ಕೆಲ ಜಿಲ್ಲೆಗಳಲ್ಲಿ ಬೆಂಗಳೂರು ಪ್ರಯಾಣಿಕರಿಗೆ ಕ್ವಾರಂಟೇನ್ ಮಾಡುತ್ತಿದ್ದಾರೆ. ಕೆಲವು ಗ್ರಾಮಗಳಿಗೆ ಪ್ರವೇಶವನ್ನೇ ನೀಡದೆ ಜನರೇ ಅಡ್ಡಹಾಕುತ್ತಿದ್ದಾರೆ. ಆದರೆ ಬೆಂಗ ಳೂರಿನಿಂದ ಬರದಂತೆ ನಿಷೇಧಿಸುವುದು ಹಾಗೂ ಎಲ್ಲರನ್ನೂ ತಪಾಸಣೆ ನಡೆಸುವುದು ಕಷ್ಟಸಾಧ್ಯ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿದ್ದಾರೆ. ಹಾಗಾಗಿ ಬೆಂಗಳೂರಿನಿಂದ ಮೈಸೂರಿಗೆ ಬರುವವರು ಸ್ವಯಂಪ್ರೇರಣೆಯಿಂದ ಕೆಲ ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿರಬೇಕು. ರೋಗ ಲಕ್ಷಣಗಳು ಇಲ್ಲದಿದ್ದರೂ ಹೊರಗಡೆ ಓಡಾಡಬಾರದು. ಮನೆಯವರೂ ಈ ಬಗ್ಗೆ ನಿಗಾ ವಹಿಸಬೇಕು.

Translate »