ವಾರಾಂತ್ಯ ಕಫ್ರ್ಯೂ; ಅಗತ್ಯ ವಸ್ತುಗಳ ವಹಿವಾಟಿಗೆ ಅನುಮತಿ  ಇದ್ದರೂ ಗ್ರಾಹಕರೇ ಇಲ್ಲದೇ ವ್ಯಾಪಾರಸ್ಥರಲ್ಲಿ ನಿರಾಸೆ
ಮೈಸೂರು

ವಾರಾಂತ್ಯ ಕಫ್ರ್ಯೂ; ಅಗತ್ಯ ವಸ್ತುಗಳ ವಹಿವಾಟಿಗೆ ಅನುಮತಿ ಇದ್ದರೂ ಗ್ರಾಹಕರೇ ಇಲ್ಲದೇ ವ್ಯಾಪಾರಸ್ಥರಲ್ಲಿ ನಿರಾಸೆ

January 9, 2022

ಮೈಸೂರು, ಜ.8 (ಪಿಎಂ)- ಕೋವಿಡ್ ವಾರಾಂತ್ಯ ಕಫ್ರ್ಯೂನಿಂದ ವಿನಾಯಿತಿ ನೀಡಿ ತರಕಾರಿ, ಹಣ್ಣು ಸೇರಿದಂತೆ ಅಗತ್ಯ ವಸ್ತುಗಳ ವಹಿವಾಟಿಗೆ ಅನುಮತಿ ನೀಡಿದ್ದರೂ ಗ್ರಾಹಕರಿಲ್ಲದೇ ವ್ಯಾಪಾರಿಗಳು ನಿರಾಸೆಗೊಂಡರು.

ಮೈಸೂರು ನಗರದ ಹೃದಯ ಭಾಗ ದಲ್ಲಿರುವ ದೇವರಾಜ ಮಾರುಕಟ್ಟೆ ಸೇರಿ ದಂತೆ ಮಂಡಿ ಮತ್ತು ವಾಣಿವಿಲಾಸ ಮಾರು ಕಟ್ಟೆಗಳು ಹಾಗೂ ವಿವಿಧ ಬಡಾವಣೆಗಳಲ್ಲಿ ಅಗತ್ಯ ವಸ್ತುಗಳ ವಹಿವಾಟು ಇಂದು ಇಳಿಮುಖಗೊಂಡಿತ್ತು. ಬಡಾವಣೆಗಳ ವ್ಯಾಪ್ತಿಗೆ ಹೋಲಿಸಿದರೆ, ನಗರದ ಮೂರು ಪ್ರಮುಖ ಮಾರುಕಟ್ಟೆಗಳಾದ ದೇವರಾಜ, ಮಂಡಿ ಮತ್ತು ವಾಣಿವಿಲಾಸದಲ್ಲಿ ಗ್ರಾಹಕರು ಅತ್ಯಂತ ವಿರಳ ಸಂಖ್ಯೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಿದರು.

ಕಫ್ರ್ಯೂ ಮಾಹಿತಿ ಇದ್ದ ಜನತೆ ಮಾರು ಕಟ್ಟೆಗಳತ್ತ ಹೆಚ್ಚು ಸುಳಿಯಲಿಲ್ಲ. ಹೀಗಾಗಿ ಈ ಮೂರೂ ಮಾರುಕಟ್ಟೆಗಳಲ್ಲಿ ಹೆಚ್ಚಿನ ಗ್ರಾಹಕರು ಕಂಡು ಬರಲಿಲ್ಲ. ದೇವರಾಜ ಮಾರುಕಟ್ಟೆಯಲ್ಲಿ ಮಾಸಿಕ ಬಾಡಿಗೆಯ 822 ಹಾಗೂ ದಿನವಹಿ ಬಾಡಿಗೆಯ 250 ಮಳಿಗೆಗಳು ಇದ್ದು, ಈ ಪೈಕಿ ಬಹುತೇಕ ಅಗತ್ಯ ವಸ್ತುಗಳ ಮಾರಾಟ ಮಳಿಗೆ ಗಳಾಗಿವೆ. ಇಲ್ಲಿನ ದಿನಸಿ, ತರಕಾರಿ, ಹಣ್ಣು-ಹಂಪಲು ಸೇರಿದಂತೆ ಅಗತ್ಯ ವಸ್ತುಗಳ ಮಳಿಗೆಗಳು ಎಂದಿನಂತೆ ವಹಿವಾಟು ನಡೆಸಿದರೂ ವ್ಯಾಪಾರ ಮಾತ್ರ ಚುರುಕಾಗಲಿಲ್ಲ.

ಔಷಧ, ಬೇಕರಿ ಮಳಿಗೆಗಳ ಹೊರ ತಾಗಿ ದೇವರಾಜ ಮಾರುಕಟ್ಟೆಯ ಹೊರ ಆವರಣದ ಉಳಿದೆಲ್ಲಾ ಮಳಿಗೆಗಳು ಬಂದ್ ಆಗಿದ್ದವು. ಮುಂದಿನವಾರ ಸಂಕ್ರಾಂತಿ ಹಬ್ಬ ಇರುವ ಹಿನ್ನೆಲೆಯಲ್ಲಿ ಇಂದು ಈ ವೇಳೆಗೆ ಗ್ರಾಹಕರ ಸಂಖ್ಯೆ ಮಾರುಕಟ್ಟೆಯಲ್ಲಿ ಹೆಚ್ಚಿರುತ್ತಿತ್ತು. ಆದರೆ ಕಫ್ರ್ಯೂ ಹಿನ್ನೆಲೆಯಲ್ಲಿ ಗ್ರಾಹಕರೇ ಇಲ್ಲ ವಾಗಿದ್ದಾರೆ ಎಂದು ದೇವರಾಜ ಮಾರು ಕಟ್ಟೆ ವ್ಯಾಪಾರಸ್ಥರು ನಿರಾಸೆ ವ್ಯಕ್ತಪಡಿ ಸಿದರೆ, ಇನ್ನು ಅರ್ಧ ಗಂಟೆ ನೋಡಿ ಬಾಗಿಲು ಮುಚ್ಚಿ ಮನೆಗೆ ಹೋಗುವು ದಾಗಿ ಎಳ್ಳು, ಬೆಲ್ಲ ಸೇರಿದಂತೆ ಸಂಕ್ರಾಂತಿ ಹಬ್ಬದ ಸಾಮಗ್ರಿಗಳ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದರು.
`ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ದೇವರಾಜ ಮಾರುಕಟ್ಟೆ ತರಕಾರಿ ವ್ಯಾಪಾರಿ ಆರ್.ಎಸ್.ನವೀನ್‍ಕುಮಾರ್, ಇಂದು ಇಡೀ ದಿನ ದೇವರಾಜ ಮಾರು ಕಟ್ಟೆಯಲ್ಲಿ ಶೇ.10ರಷ್ಟು ವ್ಯಾಪಾರ ಆಗಿರು ವುದೂ ಅನುಮಾನ. ವಾರಾಂತ್ಯದಲ್ಲೇ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಯುತ್ತದೆ. ಈ ಸಂದರ್ಭದಲ್ಲಿ ಕಫ್ರ್ಯೂ ವಿಧಿಸುವುದರಿಂದ ನಮ್ಮ ವಹಿ ವಾಟಿಗೆ ಭಾರೀ ಹೊಡೆತ ತಪ್ಪಿದ್ದಲ್ಲ. ಇಂದು ಗ್ರಾಹಕರ ಬರುವಿಕೆಯನ್ನೇ ಕಾದು ಸಾಕಾಯಿತು ಎಂದು ಬೇಸರ ವ್ಯಕ್ತ ಪಡಿಸಿದರು.

ಈಗಾಗಲೇ ಎರಡೂವರೆ ವರ್ಷದಿಂದ ನಿರ್ಬಂಧಗಳ ನಡುವೆ ನಷ್ಟಕ್ಕೆ ತುತ್ತಾಗಿ ದ್ದೇವೆ. ಇನ್ನೇನು ಸುಧಾರಣೆ ಕಾಣ ಬಹುದು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಈ ರೀತಿ ನಿರ್ಬಂಧ ವಿಧಿಸಿದರೆ, ನಾವು ಚೇತರಿಸಿಕೊಳ್ಳಲು ಖಂಡಿತ ಸಾಧ್ಯವಿಲ್ಲ. ಬರೀ ಶನಿವಾರ ಮತ್ತು ಭಾನುವಾರ ಮಾತ್ರ ಕೋವಿಡ್ ಮತ್ತು ರೂಪಾಂತರಿ ಒಮಿಕ್ರಾನ್ ಬರುತ್ತದೆಯೇ? ಎಂದು ಬೇಸರದಿಂದ ಪ್ರಶ್ನಿಸಿದರು.

ಈ ಪ್ರಶ್ನೆ ಕೇವಲ ನನ್ನೊಬ್ಬನದಲ್ಲ. ಇಡೀ ವರ್ತಕರ ಪ್ರಶ್ನೆ ಇದಾಗಿದೆ. ನಮ್ಮಂ ತಹ ವ್ಯಾಪಾರಸ್ಥರಿಗೆ ಸಾವಿರಾರು ರೂಪಾ ಯಿಯೇ ದೊಡ್ಡದು. ಸಾವಿರಾರು ರೂಪಾಯಿ ಬಂಡವಾಳ ಹಾಕಿ ಹೀಗಾ ದರೆ, ನಮ್ಮ ಕಥೆಯೇನು? ನಮ್ಮ ಕುಟುಂಬಸ್ಥರ ಪರಿಸ್ಥಿತಿ ಏನಾಗಬೇಡ. ಮುಂದಿನ ಶನಿವಾರ ಸಂಕ್ರಾಂತಿ ಹಬ್ಬ ವಿದ್ದು, ಇದು ಉತ್ತಮ ವ್ಯಾಪಾರವಾಗುವ ಸಮಯ. ಆಗ ಯಾವ ನಿರ್ಬಂಧ ವಿಧಿಸುತ್ತಾರೋ ಗೊತ್ತಿಲ್ಲ. ಸಣ್ಣಪುಟ್ಟ ವ್ಯಾಪಾರಸ್ಥರು ಈಗ ತಾನೆ ಚೇತರಿಸಿ ಕೊಳ್ಳುತ್ತಿದ್ದೇವೆ. ಕೋವಿಡ್ ಬಂದು ಸತ್ತರೂ ಸರಿ. ಹೀಗೆ ಹಸಿದು ಜೀವನ ಸಾಗಿಸಬಾರದು ಎಂಬ ಮನಸ್ಥಿತಿ ನಮ್ಮೆಲ್ಲ ರದಾಗಿದೆ. ಸರ್ಕಾರಿ ಆದೇಶ ಪಾಲಿ ಸೋಣ. ಆದರೆ ಪದೇ ಪದೆ ಇಂತಹ ಅತಿಯಾದ ನಿರ್ಬಂಧದಿಂದ ಜನಜೀವನ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ನೋವಿನಿಂದ ನುಡಿದರು.

ದೇವರಾಜ ಅರಸು ರಸ್ತೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಅಗತ್ಯ ವಸ್ತುಗಳ ಮಳಿಗೆಗಳು ತೆರೆದು ವ್ಯಾಪಾರ ನಡೆಸಿದರೂ ಎಂದಿನಂತೆ ವಹಿವಾಟು ಚುರುಕು ಇಲ್ಲದಿರುವುದು ವ್ಯಾಪಾರಸ್ಥರಲ್ಲಿ ನಿರಾಸೆ ತಂದಿತ್ತು.

Translate »