ವಾರಾಂತ್ಯ ಕಫ್ರ್ಯೂ  ಮೈಸೂರಲ್ಲಿ ಮಾಂಸ ವ್ಯಾಪಾರದಲ್ಲಿ ಭಾರೀ ಕುಸಿತ
ಮೈಸೂರು

ವಾರಾಂತ್ಯ ಕಫ್ರ್ಯೂ ಮೈಸೂರಲ್ಲಿ ಮಾಂಸ ವ್ಯಾಪಾರದಲ್ಲಿ ಭಾರೀ ಕುಸಿತ

January 10, 2022

ಮೈಸೂರು, ಜ.9(ಆರ್‍ಕೆಬಿ)- ಮತ್ತೊಮ್ಮೆ ಅಟ್ಟಹಾಸ ಆರಂಭಿಸಿರುವ ಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವಾರಾಂತ್ಯ ಕಫ್ರ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರಗಳಂದು ಮಾಂಸ ದಂಗಡಿಗಳನ್ನು ತೆರೆಯಲು ಅವಕಾಶ ಇದ್ದರೂ ವ್ಯಾಪಾರ ವಹಿವಾಟು ಅಷ್ಟೇನೂ ನಡೆ ಯಲಿಲ್ಲ. ಮೈಸೂರಿನ ಪ್ರಮುಖ ದೇವ ರಾಜ ಮಾರುಕಟ್ಟೆ ಮಾಂಸದಂಗಡಿಗಳಲ್ಲಿ ಪ್ರತಿ ಭಾನುವಾರಗಳಂತೆ ಇಂದು ಜನಜಂಗುಳಿ ಕಂಡು ಬರಲಿಲ್ಲ. ಕುರಿ ಮಾಂಸ, ಕೋಳಿ ಮಾಂಸ, ಮೀನು ಮಾರಾಟದಲ್ಲಿ ಕುಂಠಿತವಾಗಿತ್ತು.

ವಾರಾಂತ್ಯ ಕಫ್ರ್ಯೂನಿಂದಾಗಿ ಮಾಂಸ ದಂಗಡಿಗಳಲ್ಲಿ ವ್ಯಾಪಾರ ಕುಸಿತ ಉಂಟಾಗಿ ರುವ ಬಗ್ಗೆ ಮಾಂಸದಂಗಡಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ನಗರದ ಪ್ರಮುಖ ಬಡಾವಣೆಗಳ ಮಾಂಸದಂಗಡಿ ಗಳಲ್ಲಿ ಕೆಲವೆಡೆ ಗ್ರಾಹಕರು ಕ್ಯೂನಲ್ಲಿ ನಿಂತು ಮಾಂಸ ಖರೀದಿಸಿದರೆ, ಬಹುತೇಕ ಕಡೆಗಳಲ್ಲಿ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ನ್ಯೂ ಕಾಂತರಾಜ ಅರಸು, ಗೋಕುಲಂ ಇನ್ನಿತರೆ ಕಡೆಗಳಲ್ಲಿ ಬೆಳಗ್ಗೆ ಸ್ವಲ್ಪ ಹೊತ್ತು ಗ್ರಾಹಕರು ನಿಂತು ಖರೀದಿಸದರೆ, ಇನ್ನೂ ಕೆಲವೆಡೆ ಗ್ರಾಹಕರ ಕೊರತೆಯಿಂದ ಮಾಂಸದಂಗಡಿ ಮಾಲೀಕರು ಬೇಸರಗೊಂಡಿದ್ದರು.

ಮೈಸೂರಿನ ದೇವರಾಜ ಮಾರುಕಟ್ಟೆಯ ಮೈಸೂರು ಮಟನ್ ಮಾರುಕಟ್ಟೆ ಅಸೋಸಿ ಯೇಷನ್‍ನ ಜಂಟಿ ಕಾರ್ಯದರ್ಶಿ ನಾಗೇಂದ್ರ ಬಾನು ಅವರ ಪ್ರಕಾರ, ಕಫ್ರ್ಯೂನಿಂದಾಗಿ ಜನ ಹೊರಗೆ ಬರಲಾಗಿಲ್ಲ. ಅಲ್ಲಲ್ಲಿ ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿ ಜನರ ಓಡಾಟ ನಿಬರ್ಂಧಿಸಿರುವುದಿರಂದ ಜನರು ಬರಲಾಗಿಲ್ಲ. ಹಾಗಾಗಿ 70ರಷ್ಟು ವ್ಯಾಪಾರ ನಡೆದಿಲ್ಲ. ಜನ ಬಂದರಲ್ಲವೇ ವ್ಯಾಪಾರ ಆಗುವುದು. ಜನರು ಮಾಸ್ಕ್ ಹಾಕಿಕೊಂಡೇ ನಮ್ಮಲ್ಲಿಗೆ ಬಂದಿದ್ದಾರೆ. ಮಾಸ್ಕ್ ಹಾಕಿಕೊಂಡವರಿಗೆ ನಿಬರ್ಂಧ ದಿಂದ ಹೊರತುಪಡಿಸಿದ್ದರೆ ನಮಗೂ ಒಂದಷ್ಟು ವ್ಯಾಪಾರ ಆಗುತ್ತಿತ್ತು ಎಂದು ಹೇಳುತ್ತಾರೆ.

ಕಳೆದ ಬಾರಿ 65 ದಿನ ಲಾಕ್‍ಡೌನ್‍ನಲ್ಲಿ ಕಷ್ಟ ಅನುಭವಿಸಿದ್ದೇವೆ. ಸಾಲಗಾರರಾ ಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ದೇವರಾಜ ಮಾರುಕಟ್ಟೆಯ ನೂರು ವರ್ಷಗಳಷ್ಟು ಹಳೆದ ಕೋಳಿ ಮಾಂಸದ ಅಂಗಡಿಯ ಮಾಲೀಕರಾದ ಮೈಸೂರು ಬ್ರಾಯ್ಲರ್ ಟ್ರೇಡರ್ಸ್ ಕೊ-ಆರ್ಡಿನೇಟರ್ ಕಮಿಟಿ ಮಾಜಿ ಉಪಾದ್ಯಕ್ಷ ಕುಬೇರಪ್ಪ ಅವರು, ಲಾಕ್‍ಡೌನ್ ಸಂದರ್ಭದಲ್ಲಿ ಕೋಳಿ ಮಾಂಸದ ವ್ಯಾಪಾರ ನೆಲ ಕಚ್ಚಿತ್ತು. ನಂತರ ಸ್ವಲ್ಪ ಚೇತರಿಸಿ ಕೊಳ್ಳುತ್ತಿದ್ದೇವೆ ಎನ್ನುತ್ತಿದ್ದಂತೆ ಮತ್ತೇ ಈಗ ವಾರಾಂತ್ಯ ಕಫ್ರ್ಯೂ ಬಂದಿದೆ. ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು, ಫಾಸ್ಟ್‍ಫುಡ್‍ಗಳು ನಡೆ ಯುತ್ತಿಲ್ಲ. ಹಾಗಾಗಿ ನಮಗೆ ಶೇ.60 ರಿಂದ 70ರಷ್ಟು ವ್ಯಾಪಾರ ವಹಿವಾಟು ಕುಸಿದಿದೆ. ಸಾಲ ತಂದು ನೌಕರರಿಗೆ ವೇತನ ಕೊಡುವ ಸ್ಥಿತಿ ಬಂದಿದೆ. ಉದ್ಯಮ ನಡೆಸುವುದೇ ಕಷ್ಟ ಎಂಬಂತಾಗಿದೆ ಎಂದು  `ಮೈಸೂರು ಮಿತ್ರ’ ದೊಂದಿಗೆ ಅಳಲು ತೋಡಿಕೊಂಡರು.

Translate »