ವಾರಾಂತ್ಯ ಕಫ್ರ್ಯೂ; ಹಸಿದವರ ಹೊಟ್ಟೆ  ತುಂಬಿಸಿದ ಅಕ್ಷಯ ಆಹಾರ ಫೌಂಡೇಷನ್
ಮೈಸೂರು

ವಾರಾಂತ್ಯ ಕಫ್ರ್ಯೂ; ಹಸಿದವರ ಹೊಟ್ಟೆ ತುಂಬಿಸಿದ ಅಕ್ಷಯ ಆಹಾರ ಫೌಂಡೇಷನ್

April 26, 2021

ಮೈಸೂರು, ಏ.25(ಆರ್‍ಕೆಬಿ)- ಹಸಿದ ಹೊಟ್ಟೆಗೆ ಆಹಾರ ನೀಡುವ ಅಕ್ಷಯ ಆಹಾರ ಫೌಂಡೇಷನ್ ವಾರಾಂತ್ಯ ಕಫ್ರ್ಯೂ ಸಂದರ್ಭದಲ್ಲಿ ಹಸಿದ ಹೊಟ್ಟೆಗಳಿಗೆ ಅನ್ನ ನೀಡಿ ಸಂತೈಸಿದೆ. ವಾರಾಂತ್ಯ ಕಫ್ರ್ಯೂ ಹಿನ್ನೆಲೆ ಬಸ್‍ಗಳಿಲ್ಲದೆ ಹಲವು ಕೂಲಿ ಕಾರ್ಮಿಕರು ಅತ್ತ ಊರಿಗೂ ಹೋಗಲಾಗದೇ ಮೈಸೂರಿನ ಬಸ್ ಶೆಲ್ಟರ್ ಗಳನ್ನೇ ಆಶ್ರಯಿಸಿಕೊಂಡಿದ್ದರು. ಹುಣಸೂರು, ಚಾಮರಾಜನಗರ, ಗುಂಡ್ಲುಪೇಟೆ, ಮಳವಳ್ಳಿ, ತಮಿಳು ನಾಡಿನ ತಾಳವಾಡಿ ಇನ್ನಿತರೆ ಊರುಗಳಿಗೆ ಶನಿವಾರ ಕೆಲಸ ಮುಗಿಸಿ ಮರಳಬೇಕಾಗಿತ್ತು.

ಆದರೆ ಶನಿವಾರ ವಾರಾಂತ್ಯ ಕಫ್ರ್ಯೂ ಹಿನ್ನೆಲೆ ಬಸ್‍ಗಳಿಲ್ಲದೆ ಕಾರ್ಮಿಕರು ಊರಿಗೆ ಹೋಗಲಾಗದೆ ಮೈಸೂರಿನ ಬಸ್ ಶೆಲ್ಟರ್‍ಗಳು, ಪಾರ್ಕ್‍ಗಳಲ್ಲೇ ಕಾಲ ಕಳೆಯುತ್ತಿದ್ದರು. ಮತ್ತೇ ಸೋಮವಾರ ಕೆಲಸಕ್ಕೆ ಹೋಗುವ ಕಾರಣ ಮೈಸೂರಿನಲ್ಲೇ ಕಾಲ ಕಳೆದರು. ಆದರೆ ಅವರ ಹೊಟ್ಟೆ ತುಂಬಿಸಲು ಹೋಟೆಲ್‍ಗಳಿಲ್ಲ. ಕೆಲ ಹೋಟೆಲ್‍ಗಳಲ್ಲಿ ಪಾರ್ಸಲ್ ಸೇವೆ ಇದ್ದರೂ ಹಣ ವಿಲ್ಲ. ಹೀಗಾಗಿ ಹಸಿದು ಬಳಲಿದ್ದರು.

ಅಂತಹವರ ಹೊಟ್ಟೆ ತುಂಬಿಸುವ ಕಾರ್ಯವನ್ನು ಮೈಸೂರಿನ ಅಕ್ಷಯ ಆಹಾರ ಫೌಂಡೇಷನ್ ಶನಿವಾರ ಮತ್ತು ಭಾನುವಾರ ಕೈಗೊಳ್ಳುವ ಮೂಲಕ ಮಾನ ವೀಯತೆ ಮೆರೆಯಿತು.

ಮೈಸೂರಿನ ಕೆ.ಆರ್. ಆಸ್ಪತ್ರೆ ಬಳಿಯ ವೃತ್ತ, ಸಿದ್ದಾರ್ಥ ನಗರದ ಮೋಕ್ಷ ಮಾರ್ಗ, ಕುವೆಂಪುನಗರದ ಸುಮಸೋಪಾನ ಪಾರ್ಕ್ ಬಳಿ ಅಕ್ಷಯ ಆಹಾರ ಫೌಂಡೇಷನ್ ಕಾರ್ಯಕರ್ತರು ಹಸಿದ ಹೊಟ್ಟೆಗಳನ್ನು ಸಂತೈಸಿದರು. ಭಾನುವಾರ ಬೆಳಗ್ಗೆ ಪುಳಿಯೋಗರೆ, ಮಧ್ಯಾಹ್ನ ಉಪ್ಪಿಟ್ಟು, ಸಿಹಿ ವಿತರಿಸಿದರು.

ಕೆ.ಆರ್.ಆಸ್ಪತ್ರೆ ಬಳಿಯಿರುವ ಅಕ್ಷಯ ಆಹಾರ ಫೌಂಡೇ ಷನ್‍ನ ಶಾಶ್ವತ ಮಳಿಗೆಯ ಮುಂದೆ ಕೂಲಿ ಕಾರ್ಮಿ ಕರು, ಅಸಹಾಯಕರು, ಆಸ್ಪತ್ರೆ ರೋಗಿಗಳು, ರೋಗಿಗಳ ಕಡೆಯವರು, ಬೀದಿಬದಿ ವ್ಯಾಪಾರಿಗಳು ಇನ್ನಿತರರು ಸಾಮಾಜಿಕ ಅಂತರದಡಿ ನಿಂತು ಆಹಾರ ಪಡೆದರು. ಅಲ್ಲಿಯೇ ಕುಳಿತು ತಿಂದು ಹೊಟ್ಟೆ ತುಂಬಿಸಿಕೊಂಡರು.

ಒಂದು ವೇಳೆ ಲಾಕ್‍ಡೌನ್ ಮುಂದುವರಿದರೂ ನಾವು ಹಸಿದವರಿಗೆ ಆಹಾರ ನೀಡುವ ಕಾಂiÀರ್i ಮುಂದುವರಿಸುತ್ತೇವೆ. ಆಹಾರ ಸಿದ್ಧಪಡಿಸಿ ಕೊಡುವ ದಾನಿಗಳಿದ್ದರೆ ಅಂತಹವರು ದೂರವಾಣಿ ಸಂಖ್ಯೆ 0821-2570967, 9148987375 ಸಂಪರ್ಕಿಸಿ ನೀಡ ಬಹುದಾಗಿದೆ ಎಂದು ಮನವಿ ಮಾಡಿದರು.

10 ವರ್ಷಗಳಿಂದ ಅಕ್ಷಯ ಆಹಾರ ಫೌಂಡೇಷನ್ ಹಸಿದವರಿಗೆ ಅನ್ನ ನೀಡುತ್ತಾ ಬಂದಿದೆ. ಮೊದಲ ಲಾಕ್‍ಡೌನ್ ಭಯಾನಕವಾಗಿತ್ತು. ಈಗ ಎರಡನೇ ಅಲೆ ವಾರಾಂತ್ಯ ಕಫ್ರ್ಯೂ ಸಂದರ್ಭ ದಲ್ಲಿ ಕೂಲಿ ಕಾರ್ಮಿಕರು, ಕೆ.ಆರ್.ಆಸ್ಪತ್ರೆ, ಚೆಲು ವಾಂಬ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆಗೆ ಬರುವ ರೋಗಿ ಗಳು, ರೋಗಿಗಳ ಕಡೆಯವರಿಗೆ ಯಾವುದೇ ಹೋಟೆಲ್ ಇಲ್ಲದ್ದನ್ನು ಗಮನಿಸಿ ಆಹಾರ ವಿತರಿಸಿದ್ದೇವೆ. ಮೈಸೂ ರಿನ ಮೂರು ಕಡೆಗಳಲ್ಲಿಯೂ ಈ ಕಾರ್ಯ ನಡೆಸಿ ದ್ದೇವೆ. ಎಲ್ಲೆಲ್ಲಿ ಹಸಿದವರು ಕುಳಿತಿರುತ್ತಾರೋ ಅಂತಹ ಕಡೆ ನಾವೇ ತೆರಳಿ ಆಹಾರ ನೀಡುತ್ತಿದ್ದೇವೆ.

Translate »