ವೀಕೆಂಡ್ ಕಫ್ರ್ಯೂ: ಬೇಡಿಕೆಗೆ ಅನುಸಾರ ಸಾರಿಗೆ ಬಸ್ ಸಂಚಾರ
ಮೈಸೂರು

ವೀಕೆಂಡ್ ಕಫ್ರ್ಯೂ: ಬೇಡಿಕೆಗೆ ಅನುಸಾರ ಸಾರಿಗೆ ಬಸ್ ಸಂಚಾರ

January 8, 2022

ಮೈಸೂರು, ಜ.7(ಎಂಟಿವೈ)- ರಾಜ್ಯಾದ್ಯಂತ ಕೊರೊನಾ ಮತ್ತು ಒಮಿಕ್ರಾನ್ ಹೆಚ್ಚಾಗುತ್ತಿ ರುವುದರಿಂದ ವೀಕೆಂಡ್ ಕಫ್ರ್ಯೂ ಜಾರಿಗಳಿಸಿರುವ ಹಿನ್ನೆಲೆಯಲ್ಲಿ ಮೈಸೂರು ನಗರದÀಲ್ಲಿ ಬೇಡಿಕೆಗೆ ಅನುಗುಣವಾಗಿ ಸಾರಿಗೆ ಬಸ್ ಸಂಚರಿಸಿದರೆ, ಹೊರ ಜಿಲ್ಲೆಗಳಿಗೆ ಶೇ.50ರಷ್ಟು ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ವೀಕೆಂಡ್ ಕಫ್ರ್ಯೂ ಜಾರಿ ವೇಳೆ ಅಗತ್ಯ ಸೇವೆ ಹಾಗೂ ಕೆಲವು ಕಾರ್ಖಾನೆಗಳ ಕಾರ್ಯನಿರ್ವಹಣೆಗೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಹಾಗೂ ಸಾರಿಗೆ ಬಸ್ ಸಂಚಾರಕ್ಕೆ ನಿರ್ಬಂಧ ವಿಧಿಸದ ಹಿನ್ನೆಲೆಯಲ್ಲಿ ಮೈಸೂರಲ್ಲಿ ಸಾರಿಗೆ ಬಸ್‍ಗಳ ಸಂಚಾರ ಅಗತ್ಯಕ್ಕೆ ಅನುಗುಣವಾಗಿ ಓಡಾಡಲಿವೆ.

ನಗರ ಬಸ್ ನಿಲ್ದಾಣದಿಂದ: ಮೈಸೂರು ನಗರದ ವಿಭಾಗದಲ್ಲಿ ಕುವೆಂಪುನಗರ, ಬನ್ನಿಮಂಟಪ, ಸಾತಗಳ್ಳಿ ಹಾಗೂ ವಿಜಯನಗರ ಬಸ್ ಡಿಪೋಗಳಿಂದ ಒಟ್ಟು 431 ಬಸ್‍ಗಳಿದ್ದು, ಪ್ರತಿದಿನ 372 ಮಾರ್ಗಗಳಲ್ಲಿ ಐದು ಸಾವಿರ ಟ್ರಿಪ್ ಸಂಚರಿಸುತ್ತಿದ್ದವು. ಆದರೆ ವೀಕೆಂಡ್ ಕಫ್ರ್ಯೂ ಹಿನ್ನೆಲೆಯಲ್ಲಿ ಮೈಸೂರು ನಗರ ವಿಭಾಗದ ವಿವಿಧ ಬಸ್ ಡಿಪೋಗಳಿಗೆ ಸೇರಿದ ಬಸ್‍ಗಳು ಕೆಲವೇ ಕೆಲವು ಮಾರ್ಗಗಳಲ್ಲಿ ಸಂಚರಿಸಲಿವೆ.
ಈ ಕುರಿತು ಮೈಸೂರು ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿ ಕಾರಿ ಎಸ್.ಪಿ.ನಾಗರಾಜ್ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಮೈಸೂರಿನ ವಿವಿಧ ಬಡಾವಣೆ ಹಾಗೂ ನಗರ ಸಾರಿಗೆ ಬಸ್ ಸಂಚರಿಸುತ್ತಿದ್ದ ತಾಲೂಕಿನ ವಿವಿಧ ಮಾರ್ಗಗಳಿಗೆ ಬೇಡಿಕೆ ಇದ್ದರೆ ಮಾತ್ರ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಆಸ್ಪತ್ರೆ, ಕಾರ್ಖಾನೆಗೆ ಹೋಗುವವರು ಸಾರಿಗೆ ಬಸ್ ಅನ್ನೇ ಬಳಸುವಂತೆ ಅವರು ಮನವಿ ಮಾಡಿದರು.

ಅಂತರ ಜಿಲ್ಲೆಗೆ ಶೇ.50ರಷ್ಟು ಬಸ್: ಮೈಸೂರು ಗ್ರಾಮಾಂತರ ವಿಭಾಗದಲ್ಲಿ 700 ಬಸ್‍ಗಳಿದ್ದು, ವಿವಿಧ ಜಿಲ್ಲೆ, ತಾಲೂಕು ಕೇಂದ್ರ, ಅಂತಾ ರಾಜ್ಯ ಸೇರಿದಂತೆ 650 ಮಾರ್ಗಗಳಲ್ಲಿ 2500 ಟ್ರಿಪ್‍ಗಳಲ್ಲಿ ಸಂಚರಿಸುತ್ತಿದ್ದವು. ಆದರೆ ಶನಿವಾರ ಮತ್ತು ಭಾನುವಾರ ಗ್ರಾಮಾಂತರ ವಿಭಾಗದಿಂದ ಶೇ.50ರಷ್ಟು ಬಸ್‍ಗಳು ಮಾತ್ರ ಸಂಚರಿಸಲಿವೆ. ಅದರಲ್ಲೂ ಪ್ರಯಾಣಿಕರಿದ್ದರೆ ಮಾತ್ರ ಆಯಾ ಮಾರ್ಗಗಳಿಗೆ ಬಸ್ ಸಂಚಾರ ಇರಲಿದೆ ಎಂದು ಗ್ರಾಮಾಂತರ ವಿಭಾಗದ ಡಿಸಿ ಶ್ರೀನಿವಾಸ್ ತಿಳಿಸಿದ್ದಾರೆ.

ರೈಲು ಸಂಚಾರವೂ ಇರಲಿದೆ: ವೀಕೆಂಡ್ ಕಫ್ರ್ಯೂ ಜಾರಿಯಲ್ಲಿದ್ದರೂ ಸಹ ಮೈಸೂರಿಂದ ವಿವಿಧೆಡೆ ಎಂದಿನಿಂತೆ ರೈಲು ಸಂಚಾರ ಇರಲಿದೆ. ಪ್ರಯಾಣಿಕರ ಕೊರತೆ ಆಗಬಹುದಾಗಿದ್ದರೂ ರೈಲು ಸಂಚಾರ ಇರಲಿದೆ. ಅದರಲ್ಲೂ ಮೈಸೂರು -ಬೆಂಗಳೂರು ನಡುವೆ ರೈಲುಗಳ ಸಂಚಾರ ಎಂದಿನಂತೆ ಇರಲಿದೆ.

ಆಟೋರಿಕ್ಷಾ, ಟ್ಯಾಕ್ಸಿ: ಇನ್ನು ಅಗತ್ಯ ಹಾಗೂ ತುರ್ತು ಸೇವೆಗಾಗಿ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಸೇವೆ ಬಳಸಿಕೊಳ್ಳಬಹುದಾಗಿದೆ. ಅದರಲ್ಲೂ ಬಸ್‍ನಿಲ್ದಾಣ, ಆಸ್ಪತ್ರೆ, ರೈಲ್ವೆ ನಿಲ್ದಾಣದ ಬಳಿ ಪ್ರಯಾಣಿಕರಿಗಾಗಿ ಆಟೋರಿಕ್ಷಾ, ಟ್ಯಾಕ್ಸಿ ಸೇವೆ ಇರಲಿದೆ.

Translate »