ಇಂದಿನಿಂದ ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ: ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿ, ಸಾಗಾಣ ಕೆ ಹೊರತು ಉಳಿದೆಲ್ಲಾ ವಹಿವಾಟು ಬಂದ್
News, ಮೈಸೂರು

ಇಂದಿನಿಂದ ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ: ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿ, ಸಾಗಾಣ ಕೆ ಹೊರತು ಉಳಿದೆಲ್ಲಾ ವಹಿವಾಟು ಬಂದ್

January 7, 2022

ವೈದ್ಯಕೀಯ ಸೇವೆ, ಮೆಡಿಕಲ್ ಶಾಪ್, ದಿನಸಿ, ಹಣ್ಣು, ತರಕಾರಿ, ಹಾಲು ಮಾರಾಟ

ಬಸ್‌ಗಳು ಸಂಚರಿಸುತ್ತವೆ; ಆದರೆ ಆಟೋ, ಟ್ಯಾಕ್ಸಿ, ಇನ್ನಿತರೆ ವಾಹನ ರಸ್ತೆಗಿಳಿಯಲ್ಲ; ಆಟೋ, ಟ್ಯಾಕ್ಸಿ ಸಂಚಾರ, ಬಸ್, ರೈಲು, ವಿಮಾನ
ನಿಲ್ದಾಣಕ್ಕೆ ಸೀಮಿತ

ಬಾರ್, ಪಬ್, ಕ್ಲಬ್, ಸಿನಿಮಾ ಮಂದಿರ ಪೂರ್ಣ ಬಂದ್

ಬೆAಗಳೂರು, ಜ.೬(ಕೆಎಂಶಿ)-ಕೊರೊನಾ ೩ನೇ ಅಲೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ ೮ ಗಂಟೆಯಿAದ ಸೋಮವಾರ ಬೆಳಗಿನ ಜಾವ ೫ ಗಂಟೆಯವರೆಗೆ ಜಾರಿಯಲ್ಲಿರಲಿದೆ.

ಒಟ್ಟಾರೆಯಾಗಿ ಎರಡು ದಿನಗಳು ರಾಜ್ಯ ಸ್ತಬ್ಧ ಗೊಳ್ಳಲಿದ್ದು, ಈ ಸಮಯದಲ್ಲಿ ಅಗತ್ಯ ವಸ್ತುಗಳ ಖರೀದಿ ಮತ್ತು ಸಾಗಾಣ ಕೆ ಹೊರತುಪಡಿಸಿ, ಉಳಿದೆಲ್ಲ ವ್ಯವಸ್ಥೆ ಬಂದಾಗಲಿದೆ. ಈ ಸಂದರ್ಭದಲ್ಲಿ ಅನಗತ್ಯ ವಾಗಿ ಜನರು ರಸ್ತೆಗಿಳಿದರೆ, ಪೊಲೀಸರ ಕೆಂಗಣ ್ಣಗೆ ಗುರಿಯಾಗಿ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಬೆಂಗಳೂರು ಹೊರತುಪಡಿಸಿ, ಉಳಿದೆಡೆ
ವಾರಾಂತ್ಯ ಕರ್ಫ್ಯೂವನ್ನು ರದ್ದುಪಡಿಸುವಂತೆ ಇಂದಿನ ಸಚಿವ ಸಂಪುಟದಲ್ಲಿ ಬಹುತೇಕ ಸಚಿವರು ಮನವಿ ಮಾಡಿದರೂ, ಮುಖ್ಯಮಂತ್ರಿಯವರು ಮಾತ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯಲು ಸಮ್ಮತಿಸಲಿಲ್ಲ.

ಎರಡನೇ ಅಲೆಯಿಂದಾದ ಘೋರ ಅನುಭವವನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತೆಯಿAದ ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ಹತ್ತು ದಿನಗಳವರೆಗೂ ಪರಿಸ್ಥಿತಿಯನ್ನು ಕಾದು ನೋಡೋಣ. ನಂತರ ತಜ್ಞರ ಅಭಿಪ್ರಾಯ ಪಡೆದು, ಸಡಿಲಿಕೆ ಮಾಡುವ ಬಗ್ಗೆ ನಿರ್ಧಾರ ಮಾಡೋಣ ಎಂದು ತಮ್ಮ ಸಹೋದ್ಯೋಗಿಗಳಿಗೆ ತಿಳಿಸುವ ಮೂಲಕ ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಇರಲಿದೆ ಎಂದು ತಿಳಿಸಿದ್ದಾರೆ. ಕರ್ಫ್ಯೂ ಸಂದರ್ಭದಲ್ಲಿ ಸರಕು ಸಾಗಾಣ ಕೆ ಮತ್ತು ಆರೋಗ್ಯ ಸೇವಾ ವಾಹನಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.

ವೈದ್ಯಕೀಯ ಸೇವೆ, ದಿನಸಿ ಅಂಗಡಿ, ಹಣ್ಣು ತರಕಾರಿ, ಹಾಲು ಮಾರಾಟ ಎಂದಿನAತೆ ಇರಲಿದೆ. ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚರಿಸಲಿವೆ. ಆದರೆ ನಗರ ಪ್ರದೇಶಗಳಲ್ಲಿ ಅಗತ್ಯ ಮತ್ತು ತುರ್ತು ಸೇವೆಗಾಗಿ ಬಸ್‌ಗಳು ರಸ್ತೆಗಿಳಿಯಲಿವೆ.

ಉಳಿದಂತೆ ಆಟೋ, ಟ್ಯಾಕ್ಸಿ ಹಾಗೂ ಸಾರ್ವಜನಿಕ ವಾಹನಗಳು ರಸ್ತೆಗಿಳಿಯು ವಂತಿಲ್ಲ. ಹೊಟೇಲ್‌ಗಳಲ್ಲಿ ಪಾರ್ಸಲ್‌ಗಳಿಗೆ ಮಾತ್ರ ಅವಕಾಶವಿರುತ್ತದೆ. ಉಳಿದಂತೆ ಬಾರ್, ಪಬ್, ಕ್ಲಬ್, ಸಿನಿಮಾ ಮಂದಿರ ಪೂರ್ಣವಾಗಿ ಬಂದ್ ಆಗಿರುತ್ತವೆ.

ಎರಡು ದಿನಗಳ ಕಾಲ ಪಾರ್ಕ್ಗಳು ತೆರೆಯುವಂತಿಲ್ಲ. ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಮುಖ್ಯ ರಸ್ತೆಗಳು, ಟೋಲ್‌ಗಳು ಮತ್ತು ಮೇಲ್ಸೇತುವೆಗಳನ್ನು ಮುಚ್ಚುವಂತೆ ಆದೇಶ ಮಾಡಲಾಗಿದೆ. ಪ್ರಮುಖವಾಗಿ ಗಡಿ ಭಾಗ ಹಾಗೂ ನಗರ ಪಟ್ಟಣ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಅಗತ್ಯ ಸೇವೆ ವಾಹನಗಳಿಗೆ ಅವಕಾಶ ನೀಡಿ, ಉಳಿದ ಸಾರ್ವಜನಿಕ ವಾಹನಗಳ ತಡೆಗೆ ಅನುಮತಿ ನೀಡದಿರಲು ಸೂಚಿಸಲಾಗಿದೆ. ತುರ್ತು ಇಲ್ಲವೇ ಅಗತ್ಯ ಸೇವೆಗೆ ಪ್ರಯಾಣ ಮಾಡಲು ದಾಖಲಾತಿ ನೀಡಿ, ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಒಂದು ವೇಳೆ ಅನಗತ್ಯ ಕಾರಣ ನೀಡಿ, ಓಡಾಡಲು ಮುಂದಾದರೆ ಅಂತಹ ವಾಹನಗಳು ಜಪ್ತಿಯಾಗಲಿವೆ. ಸರ್ಕಾರಿ ಸ್ವಾಮ್ಯದ ಕಚೇರಿ, ಐಟಿ-ಬಿಟಿ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು ತಮ್ಮ ಸಂಸ್ಥೆಯು ಗುರುತಿನ ಚೀಟಿ ತೋರಿಸಿ, ಓಡಾಡಬಹುದಾಗಿದೆ.

Translate »