ಸಚಿವ ಸಿ.ಪಿ.ಯೋಗೇಶ್ವರ್‍ಗೆ   ಮೈಸೂರಲ್ಲಿ ಅದ್ಧೂರಿ ಸ್ವಾಗತ
ಮೈಸೂರು

ಸಚಿವ ಸಿ.ಪಿ.ಯೋಗೇಶ್ವರ್‍ಗೆ  ಮೈಸೂರಲ್ಲಿ ಅದ್ಧೂರಿ ಸ್ವಾಗತ

March 3, 2021

ಮೈಸೂರು, ಮಾ.2(ಎಂಟಿವೈ)- ಸಚಿವರಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಭೇಟಿ ನೀಡಿದ ಸಿ.ಪಿ.ಯೋಗೇಶ್ವರ್ ಅವರನ್ನು ಬಿಜೆಪಿ ಕಾರ್ಯಕರ್ತರು ನಗರದ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸರ್ಕಲï ಬಳಿ ಅದ್ಧೂರಿಯಾಗಿ ಸ್ವಾಗತಿಸಿದರು. ಹೂ ಮಳೆ ಸುರಿಸಿ ಬರಮಾಡಿಕೊಂಡರು. ಬಳಿಕ ಸಚಿವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಿಜೆಪಿ ಜಿಲ್ಲಾ ಕಚೇರಿಗೆ ಭೇಟಿ ನೀಡಿ ಪದಾಧಿಕಾರಿಗಳು, ಮುಖಂಡರ ಜತೆ ಮಾತುಕತೆ ನಡೆಸಿದರು. ನಂತರ  ಜಯಲಕ್ಷ್ಮೀಪುರಂ ನಲ್ಲಿರುವ ಸಂಸದ ಶ್ರೀನಿವಾಸಪ್ರಸಾದ್ ನಿವಾಸಕ್ಕೆ ಭೇಟಿ ನೀಡಿ ಉಭಯ ಕುಶಲೋಪರಿ ನಡೆಸಿದರು. ಪುತ್ರ ಶ್ರವಣ್‍ನನ್ನು ಪ್ರಸಾದ್ ಅವರಿಗೆ ಪರಿಚಯಿಸಿಕೊಟ್ಟರು.

 

`ನನ್ನ ಕುಟುಂಬದಿಂದ ಯಾರೂ ರಾಜಕೀಯಕ್ಕೆ ಬರಲ್ಲ. ಕುಟುಂಬ ರಾಜಕಾರಣ ನಾನು ಮಾಡಲ್ಲ. ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯಲಿ ಎಂದಷ್ಟೇ ಪುತ್ರ ಶ್ರವಣ್‍ನನ್ನು ಕರೆದುಕೊಂಡು ಬಂದಿದ್ದೇನೆ. ಹಿರಿಯರಾದ ಪ್ರಸಾದ್ ಅವರಿಗೂ ಪರಿಚಯಿಸೋಣ ಎಂದು ಕರೆತಂದಿದ್ದೇನೆ. ಆದರೆ, ನನ್ನ ಮಗ ರಾಜಕೀಯಕ್ಕೆ ಬರು ವುದಿಲ್ಲ’ ಎಂದು ಪ್ರವಾಸೋದ್ಯಮ ಸಚಿವರು ಪ್ರಶ್ನೆಗಳಿಗೆ ಉತ್ತರಿಸಿದರು.

 

Translate »