ಕೆರೆ ಒತ್ತುವರಿ ತೆರವುಗೊಳಿಸದೇ ಕೇವಲ ದೇವಾಲಯಗಳಿಗೆ ಕೈ ಹಾಕಿದ್ದೇಕೆ?
ಮೈಸೂರು

ಕೆರೆ ಒತ್ತುವರಿ ತೆರವುಗೊಳಿಸದೇ ಕೇವಲ ದೇವಾಲಯಗಳಿಗೆ ಕೈ ಹಾಕಿದ್ದೇಕೆ?

September 13, 2021

ಮೈಸೂರು, ಸೆ. 12(ಆರ್‍ಕೆ)- ನ್ಯಾಯಾಲಯ ಆದೇ ಶಿಸಿದ್ದರೂ ಕೆರೆಗಳ ಒತ್ತುವರಿ ತೆರವುಗೊಳಿಸದ ಮೈಸೂರು ಜಿಲ್ಲಾಡಳಿತವು, ಕೇವಲ ದೇವಾ ಲಯಗಳನ್ನು ನೆಲಸಮ ಮಾಡುತ್ತಿರುವುದೇಕೆ? ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗ ವಹಿಸಿದ್ದ ಅವರು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ ದರು. ಸುಪ್ರೀಂಕೋರ್ಟ್ ಹೇಳಿರುವುದು ಫುಟ್ ಪಾತ್ ಮೇಲಿರುವ, ಸಾರ್ವಜನಿಕ ಸ್ಥಳದಲ್ಲಿ ನಿರ್ಮಿ ಸಿರುವ ಹಾಗೂ ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗುವಂತಹ ಜಾಗದಲ್ಲಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿ ಎಂದು. ಆದರೆ ನೀವು ಪುರಾತನ ಕಾಲದಿಂದ ಇರುವ, ಪೂಜಾ ಕೈಂಕರ್ಯ ನಡೆಯುತ್ತಿರುವ ದೇವಸ್ಥಾನ ಗಳನ್ನು ನಿರ್ದಯಿಯಾಗಿ ಒಡೆದು ಹಾಕು ತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ನ್ಯಾಯಾಲಯವು ಕೆರೆಗಳ ಒತ್ತುವರಿ ತೆರವು ಗೊಳಿಸಿ ನೀರು ತುಂಬಲು ಅನುವು ಮಾಡಿ ಕೊಟ್ಟು ಅಂತರ್ಜಲ ವೃದ್ಧಿಸುವ ಜೊತೆಗೆ ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುವಂತೆ ಮಾಡಬೇಕು, ಪರಿಸರ ಸಂರಕ್ಷಿಸಿ ಎಕೋ ಸಿಸ್ಟಂ ಅನ್ನು ಸಬಲಗೊಳಿಸಬೇಕೆಂದೂ ಆದೇಶಿಸಿದೆ. ನೀವು ಎಷ್ಟು ಕೆರೆ ಒತ್ತುವರಿ ತೆರವುಗೊಳಿಸಿದ್ದೀರಿ? ಎಂದೂ ಜಿ.ಟಿ.ದೇವೇಗೌಡರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಯಾವ ಜಿಲ್ಲೆಯಲ್ಲೂ ದೇವಾಲಯ ತೆರವುಗೊಳಿಸುತ್ತಿಲ್ಲ, ಮೈಸೂ ರಲ್ಲಿ ಮಾತ್ರ ಏಕೆ ಕೇವಲ ದೇವಸ್ಥಾನಗಳನ್ನು ನೆಲಸಮ ಮಾಡುತ್ತಿದ್ದೀರಿ?, ಸಾರ್ವಜನಿಕರ ಸಂಚಾರಕ್ಕೆ ಅಥವಾ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿದ್ದರೆ ಮಾತ್ರ ತೆರವುಗೊಳಿಸಬೇಕೇ ಹೊರತು, ಪುರಾ ತನ ಕಾಲದಿಂದಲೂ ಇರುವ ದೇವಾಲಯ ಗಳನ್ನು ಹಿಂದು-ಮುಂದು ನೋಡದೇ ಒಡೆದು ಹಾಕಲು ನಿಮಗೆ ಅಧಿಕಾರ ಕೊಟ್ಟವರಾರು? ಎಂದು ಶಾಸಕರು ಜಿಲ್ಲಾ ಡಳಿತವನ್ನು ಪ್ರಶ್ನಿಸಿದ್ದಾರೆ.

ಬೇರೆ ಜಿಲ್ಲೆಗಳಲ್ಲಿ ನೀವು ದೇವಾಲಯ ಗಳನ್ನು ಮುಟ್ಟೋಕಾಗುತ್ತಾ? ಮೈಸೂರು ಜನ ಶಾಂತಿ ಪ್ರಿಯರು ಎಂದು ಈ ಕೆಲಸಕ್ಕೆ ಕೈ ಹಾಕಿದ್ದೀರಾ? ಪುರಾತನ ಕಾಲದಿಂದಲೂ ದೇವಾಲಯಗಳಿವೆ, ನಾವು ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಬಾರದು. ಇದು ಸಂಪೂರ್ಣವಾಗಿ ಅಧಿಕಾರಿಗಳು ಮಾಡು ತ್ತಿರುವ ಎಡವಟ್ಟಿನ ಕೆಲಸ ಎಂದು ಅವರು ಅಸಮಾ ಧಾನ ವ್ಯಕ್ತಪಡಿಸಿದರು.

ದೇವಾಲಯಗಳನ್ನು ಒಡೆದರೆ ಜನರ ಎದೆಗೆ ಒದ್ದಂತೆ. ತಾಳ್ಮೆ ಪರೀಕ್ಷೆ ಮಾಡಬೇಡಿ, ಜನರು ದಂಗೆ ಎದ್ದರೆ ನೀವು ಉಳೀತೀರಾ? ಅಧಿಕಾರಿಗಳು ಸುಪ್ರಿಂಕೋರ್ಟ್ ತೀರ್ಪನ್ನು ಸರಿಯಾಗಿ ಅಧ್ಯಯನ ಮಾಡಬೇಕು ಎಂದ ಅವರು, ಹಿಂದೂ ಧರ್ಮ, ಭಾರತೀಯ ಸಂಸ್ಕøತಿಯಲ್ಲಿ ದೇವಾಲಯಗಳ ಮೇಲೆ ಜನರು ನಂಬಿಕೆ ಇಟ್ಟುಕೊಂಡಿದ್ದಾರೆ. ದೇವಾಲಯ ಗಳನ್ನು ಒಡೆದರೆ ಜನರ ಎದೆಗೆ ಒದ್ದಂತೆ ಎಂದು ಪುನರುಚ್ಚರಿಸಿದರು. ದೇಗುಲಗಳನ್ನು ನೆಲಸಮ ಗೊಳಿಸುವುದು ಮಾತ್ರವಲ್ಲ, ಕೆರೆಗಳ ಒತ್ತುವರಿಯನ್ನೂ ತೆರವುಗೊಳಿಸಿ ನ್ಯಾಯಾಲಯದ ಆದೇಶವನ್ನು ಗೌರವಿಸಿ ಎಂದೂ ಜಿ.ಟಿ.ದೇವೇಗೌಡರು ಮೈಸೂರು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

Translate »