ಯೋಗ, ಧ್ಯಾನದಿಂದ ಮಾನಸಿಕ ಶಾಂತಿ, ಉತ್ಸಾಹ ಸಾಧ್ಯ
ಮೈಸೂರು

ಯೋಗ, ಧ್ಯಾನದಿಂದ ಮಾನಸಿಕ ಶಾಂತಿ, ಉತ್ಸಾಹ ಸಾಧ್ಯ

September 13, 2021

ಮೈಸೂರು, ಸೆ.12(ಆರ್‍ಕೆಬಿ)- ಮೈಸೂ ರಿನ ವಿಜಯನಗರದ 2ನೇ ಹಂತದಲ್ಲಿ ರುವ ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಯೋಗ ಘಟಿಕೋತ್ಸವದಲ್ಲಿ ವಿವಿಧ ಕೋರ್ಸ್ ಗಳಲ್ಲಿ 26 ಮಂದಿಗೆ ಚಿನ್ನದ ಪದಕ ಮತ್ತು ಒಟ್ಟು 74 ಮಂದಿಗೆ ಪದವಿಯನ್ನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಪ್ರದಾನ ಮಾಡಿದರು.

ಮೈಸೂರಿನ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ ಭಾನುವಾರ ನಡೆದ ಸಮಾರಂಭ ದಲ್ಲಿ ಪದವಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ಜಿ.ಟಿ.ದೇವೇಗೌಡರು, ನಮ್ಮ ಆತ್ಮರಕ್ಷಣೆ, ಮಾನಸಿಕ ಸಮತೋಲನಕ್ಕೆ ಯೋಗ ಬಹು ಮುಖ್ಯ. ಆರೋಗ್ಯವಂತ ಸಮಾಜ ನಿರ್ಮಾಣ ಆಗಬೇಕು. ಅದಕ್ಕಾಗಿ ಮಕ್ಕಳೂ ಸೇರಿದಂತೆ ಎಲ್ಲರಿಗೂ ಯೋಗ ಕಲಿಸುವುದು ಅಗತ್ಯ ಎಂದರು.

ಮಂಡಕಳ್ಳಿ ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯ ರೊಬ್ಬರು ಯೋಗದ ಮೂಲಕವೂ ರೋಗಿ ಗಳಲ್ಲಿ ಮಾನಸಿಕ ಧೈರ್ಯ ತುಂಬಿದ್ದನ್ನು ತಿಳಿಸಿದ ಅವರು, ಯೋಗ ಮಾಡಿದವರು ಇಡೀ ದಿನ ಉತ್ಸಾಹದಿಂದಿರುತ್ತಾರೆ. ಯೋಗ, ಧ್ಯಾನ ಮನಸ್ಸಿಗೆ ಶಾಂತಿ ನೀಡುತ್ತದೆ ಎಂದರು.
ಪ್ರತಿ ಶಾಲಾ ಕಾಲೇಜುಗಳಲ್ಲಿಯೂ ಯೋಗ ಕಡ್ಡಾಯವಾಗಬೇಕು. ತಾವು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ವಿವಿ ಕುಲಪತಿಗಳ ಸಭೆ ಯಲ್ಲಿಯೂ ಇದನ್ನು ಹೇಳಿದ್ದೆ. ಇಂದು ಆ ಕೆಲಸವನ್ನು ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ನಡೆಸುತ್ತಿದೆ. ಅದಕ್ಕೆ ಎಲ್ಲರೂ ಬೆಂಬಲ ನೀಡಬೇಕು. ಯೋಗ ಎಲ್ಲೆಡೆ, ಎಲ್ಲರಿಗೂ ತಲುಪುವಂತಾಗಬೇಕು ಎಂದರು.

ಮೈಸೂರಿನ ವಿವೇಕಾನಂದ ಯೋಗ ಕೇಂದ್ರದ ಸುಚರಿತ ಮಾತಾಜೀ ಮಾತ ನಾಡಿ, ಯೋಗ ಪ್ರಮಾಣಪತ್ರ ಪಡೆದವರು ಲವಲವಿಕೆಯಿಂದ ಇರುವುದರ ಬಗ್ಗೆ ತಿಳಿ ಸಿದರು. ಅದೇ ಉತ್ಸಾಹ ಸಮಾಜಕ್ಕೆ ಕೊಟ್ಟು ಎಲ್ಲರಿಗೂ ಯೋಗ ತಲುಪುವಂತೆ ಮಾಡ ಬೇಕು. ತಾವು ಕಲಿತದದ್ದನ್ನು ಇನ್ನೊಬ್ಬರಿಗೆ ಹಂಚಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಎಲ್ಲಾ ಕೋರ್ಸ್ ಗಳಿಂದ 74 ಮಂದಿಗೆ ಪದವಿ ಹಾಗೂ ಡಿವೈಇಡಿ (ಡಿಪ್ಲೊಮಾ ಇನ್ ಯೋಗ ಎಜುಕೇಷನ್), ಪಿಜಿಡಿವೈಇಡಿ (ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಎಜು ಕೇಷನ್), ಪಿಡಿಜಿವೈಟಿ (ಯೋಗ ಥೆರಪಿ) ಕೋರ್ಸ್‍ಗಳಲ್ಲಿ ತಲಾ 8 ಮಂದಿಗೆ, ಪಿಡಿಜಿಎವಿ (ಅಷ್ಟಾಂಗ ವಿನ್ಞಾಸ)ದಲ್ಲಿ ಇಬ್ಬರಿಗೆ ಸೇರಿದಂತೆ ಒಟ್ಟಾರೆ 26 ಮಂದಿಗೆ ಚಿನ್ನದ ಪದಕ ಪ್ರದಾನ ಮಾಡ ಲಾಯಿತು. ಕಾರ್ಯಕ್ರಮದಲ್ಲಿ ಮೈಲ್ಯಾಕ್ ಛೇರ್ಮನ್ ಎನ್.ವಿ.ಫಣೀಶ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಮೈಸೂರು ಯೋಗ ಫೆಡರೇಷನ್ ಮುಖ್ಯಸ್ಥ ಶ್ರೀಹರಿ, ಮೈಸೂರಿನ ಸರ್ಕಾರಿ ಆಯು ರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಚ್.ಎ. ಶಶಿ ರೇಖಾ, ಯೋಗ ಸ್ಪೋಟ್ರ್ಸ್ ಫೌಂಡೇ ಷನ್‍ನ ಜಿಲ್ಲಾಧ್ಯಕ್ಷ ಡಾ.ಪಿ.ಎನ್.ಗಣೇಶ್ ಕುಮಾರ್, ಸಂಸ್ಥೆಯ ಪ್ರಾಂಶುಪಾಲರಾದ ಶ್ರೀರೇಖಾ, ವಿವೇಕಾನಂದ ಯೋಗ ಶಿಕ್ಷಣ ಸಂಸ್ಥೆ ಟ್ರಸ್ಟ್ ಛೇರ್ಮನ್ ಫಣಿಕುಮಾರ್, ಹಿರಿಯ ಉಪಾಧ್ಯಕ್ಷ ಎಂ.ಮೋಹನ್, ಕಾರ್ಯದರ್ಶಿ ಜಿ.ಸುರಭಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »