ಗುಂಡ್ಲುಪೇಟೆ: ಸಂಭ್ರಮದ ಗೌರಿ-ಗಣೇಶ ಹಬ್ಬ
ಕೊಡಗು

ಗುಂಡ್ಲುಪೇಟೆ: ಸಂಭ್ರಮದ ಗೌರಿ-ಗಣೇಶ ಹಬ್ಬ

September 13, 2021

ಗುಂಡ್ಲುಪೇಟೆ, ಸೆ.12(ಸೋಮ್.ಜಿ)- ಪಟ್ಟಣ ಹಾಗೂ ತಾಲೂಕಿನಾದ್ಯಂತ ಸಡಗರ ಮತ್ತು ಸಂಭ್ರಮದಿಂದ ಗೌರಿ-ಗಣೇಶ ಹಬ್ಬ ಆಚರಿಸಲಾಯಿತು. ಮುಂಜಾನೆ ಯಿಂದಲೇ ಪಟ್ಟಣದ ಸುಮಂಗಲಿಯರು ಮತ್ತು ಮಕ್ಕಳು ಗೌರಿ ಗುಡಿಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸು ವುದರೊಂದಿಗೆ ಶುಭ ಫಲ, ಮುತ್ತೈದೆ ಭಾಗ್ಯ ಮತ್ತು ಆರೋಗ್ಯ ನೀಡುವಂತೆ ತಾಯಿಯಲ್ಲಿ ಪ್ರಾರ್ಥಿಸಿದರು.

ಪಟ್ಟಣದ ಪ್ರಸನ್ನ ಗಣಪತಿ ದೇವಸ್ಥಾನ, ದ.ರಾ.ಬೇಂದ್ರೆನಗರದ ಸರ್ವಸಿದ್ಧಿ ವಿನಾ ಯಕ ದೇವಸ್ಥಾನ, ಶ್ರೀರಾಮೇಶ್ವರ ದೇವಾ ಲಯ, ಬಲಮುರಿ ಗಣಪತಿ ದೇವಾ ಲಯ ಸೇರಿದಂತೆ ಹತ್ತು ಹಲವು ಕಡೆ ಗಳಲ್ಲಿ ತರಕಾರಿ ಮತ್ತು ಹಣ್ಣಿನ ಮಂಟಪ ದಲ್ಲಿ ನಿರ್ಮಿಸಲಾಗಿದ್ದ ಗೌರಿ ಗುಡಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಶ್ರದ್ಧಾ-ಭಕ್ತಿಯಿಂದ ಗೌರಿ ಪೂಜೆ ನೆರವೇರಿಸಿದರು.

ಎಲ್ಲರ ಅಚ್ಚುಮೆಚ್ಚಿನ ಹಬ್ಬವಾದ ಗೌರಿ ಹಬ್ಬಕ್ಕಾಗಿ ನೂತನ ವಸ್ತ್ರವನ್ನು ತೊಟ್ಟ ಮಹಿಳೆಯರು ಮತ್ತು ಮಕ್ಕಳು ಗೌರಿ ಗುಡಿ ಯುತ್ತ ಸಂಜೆಯವರೆಗೂ ತಂಡೋಪ ತಂಡವಾಗಿ ಧಾವಿಸಿ ಪೂಜೆ ಸಲ್ಲಿಸಿದರು.

ಗಣಪನಿಗೆ ವಿಶೇಷ ಅಲಂಕಾರ: ಪಟ್ಟ ಣದ ದ.ರಾ.ಬೇಂದ್ರೆ ನಗರದಲ್ಲಿರುವ ಸರ್ವ ಶಕ್ತಿ ಸಿದ್ಧಿ ವಿನಾಯಕನಿಗೆ ಅರ್ಚಕ ಶ್ರೀಕಾಂತ್ ಗಂಧದ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಿದರು.

ಇದಲ್ಲದೇ ಪ್ರಸನ್ನ ಗಣಪತಿ ದೇವಾ ಲಯ ಮತ್ತು ಬಲಮುರಿ ಗಣಪತಿ ದೇವಾಲಯ ಹಾಗೂ ಶ್ರೀರಾಮೇಶ್ವರ ದೇವಾಲಯದಲ್ಲಿ ತಳಿರು ತೋರಣವನ್ನು ಕಟ್ಟಿ ವಿಶೇಷ ಪೂಜೆ ಸಲ್ಲಿಸಲಾಯಿತು.

Translate »