ವಿರಾಜಪೇಟೆ: ಗಣೇಶ ಮೂರ್ತಿ ವಿಸರ್ಜನೆ
ಕೊಡಗು

ವಿರಾಜಪೇಟೆ: ಗಣೇಶ ಮೂರ್ತಿ ವಿಸರ್ಜನೆ

September 13, 2021

ವಿರಾಜಪೇಟೆ, ಸೆ.12- ಪಟ್ಟಣದ ಅರಸು ನಗರದ ವಿಘ್ನೇಶ್ವರ ಸೇವಾ ಸಮಿತಿ ಯಿಂದ ಪ್ರತಿಷ್ಠಾಪಿಸಲಾಗಿದ್ದ 41ನೇ ವರ್ಷದ ಗಣೇಶ ಮೂರ್ತಿಯನ್ನು ಭಾನುವಾರ ಪವಿತ್ರ ಗೌರಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಗಣೇಶ ಮೂರ್ತಿಯನ್ನು ಶೃಂಗರಿಸಿ ತಳ್ಳು ಗಾಡಿಯ ಮಂಟಪದಲ್ಲಿರಿಸಿ ಪಟ್ಟ ಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ವಿಸರ್ಜಿಸಲಾಯಿತು.

ಸರ್ಕಾರದ ಆದೇಶದಂತೆ ಕೋವಿಡ್-19 ನಿಯಮವನ್ನು ಪಾಲನೆಯೊಂದಿಗೆ ಮೂಲಕ ಶ್ರದ್ಧಾ- ಭಕ್ತಿಯ ಗಣೇಶೋತ್ಸವ ಆಚರಣೆಯು ಪಟ್ಟಣ ವ್ಯಾಪ್ತಿಯಲ್ಲಿ ಉತ್ಸವ ಸಮಿತಿಗಳಿಂದ 26 ಗಣೇಶ ಮೂರ್ತಿ ಯನ್ನು ಪ್ರತಿಷ್ಠಾಪಿಸಲಾಗಿತ್ತು. ಮೊದಲ ಹಂತದ 15 ಮೂರ್ತಿಗಳನ್ನು ಶುಕ್ರವಾರ ವಿಸರ್ಜಿಸಲಾಗಿದ್ದು, ಭಾನುವಾರ ಎರಡನೇ ಹಂತದಲ್ಲಿ ಶ್ರೀಕಾವೇರಿ ಗಣೇಶ ಉತ್ಸವ ಸಮಿತಿ ಮುರ್ನಾಡು ರಸ್ತೆ, ವಿಜಯ ವಿನಾ ಯಕ ಉತ್ಸವ ಸಮಿತಿ ದಖ್ಖನಿಮೊಹಲ್ಲಾ, ವರದ ವಿನಾಯಕ ಸೇವಾ ಸಮಿತಿ ಅಯ್ಯಪ್ಪ ಬೆಟ್ಟ, ಶ್ರೀ ಬಾಲಂಜನೇಯ ವಿನಾಯಕ ಉತ್ಸವ ಸಮಿತಿ ಅಪ್ಪಯ್ಯ ಸ್ವಾಮಿ ರಸ್ತೆ, ವಿಘ್ನೇಶ್ವರ ಸೇವಾ ಸಮಿತಿ ಅರಸುನಗರ ಹಾಗೂ ಶ್ರೀ ವಿನಾಯಕ ಯುವ ಸಮಿತಿ ಶಿವಕೇರಿ ಇವರ ವತಿಯಿಂದ ಪ್ರತಿಷ್ಠಾಪಿಸಿ ವಿಶೇಷ ಹಾಗೂ ಮಹಾ ಪೂಜೆ ಸಲ್ಲಿಸಿ ಆರು ಮಂಟಪಗಳ ಗಣೇಶ ಮೂರ್ತಿ ಯನ್ನು ವಿಸರ್ಜಿಸಲಾಯಿತು.

ದೇವಾಲಯಗಳಲ್ಲಿ ಪ್ರತಿಷ್ಠಾಪಿಸ ಲಾಗಿರುವ ಗಣೇಶ ಮೂರ್ತಿಯನ್ನು ಸೆ.14 (ಮಂಗಳವಾರ) ವಿಸರ್ಜಿಸಲಾಗುವುದು.

Translate »