ಕೊಡವ ಭಾಷೆ, ಸಂಸ್ಕøತಿ, ಕಲೆ ಎಲ್ಲೆಡೆ ಪಸರಿಸಲಿ: ಅಪ್ಪಚ್ಚು ರಂಜನ್ಕೊಡವ ಭಾಷೆ, ಸಂಸ್ಕøತಿ, ಕಲೆ ಎಲ್ಲೆಡೆ ಪಸರಿಸಲಿ: ಅಪ್ಪಚ್ಚು ರಂಜನ್
ಕೊಡಗು

ಕೊಡವ ಭಾಷೆ, ಸಂಸ್ಕøತಿ, ಕಲೆ ಎಲ್ಲೆಡೆ ಪಸರಿಸಲಿ: ಅಪ್ಪಚ್ಚು ರಂಜನ್ಕೊಡವ ಭಾಷೆ, ಸಂಸ್ಕøತಿ, ಕಲೆ ಎಲ್ಲೆಡೆ ಪಸರಿಸಲಿ: ಅಪ್ಪಚ್ಚು ರಂಜನ್

September 13, 2021

ಮಡಿಕೇರಿ, ಸೆ.12- ಕೊಡವ ಭಾಷೆ ಮಾತನಾಡು ವವರು ವಿಶ್ವದ ಎಲ್ಲೆಡೆ ಇದ್ದು, ಕೊಡವ ಭಾಷೆ, ಸಾಹಿತ್ಯ, ಸಂಸ್ಕøತಿ ಹಾಗೂ ಕಲೆಯನ್ನು ಎಲ್ಲೆಡೆಯೂ ಪಸರಿಸುವಂತಾಗಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.

ನಗರದಲ್ಲಿ ಭಾನುವಾರ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ 2019-20, 2020-21ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ, ಪುಸ್ತಕ ಪ್ರಶಸ್ತಿ, ಕೊಡವ ಶಬ್ದಕೋಶ ಮತ್ತು ಪುಸ್ತಕ ಬಿಡುಗಡೆ ಸಮಾ ರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊಡವ ಭಾಷೆ ಮಾತನಾಡುವ ಜನರು ದೇಶ, ವಿದೇಶಗಳಲ್ಲಿಯೂ ನೆಲೆಸಿದ್ದು, ಕೊಡವ ಸಮಾಜವನ್ನು ಸಹ ಹೊಂದಿದ್ದಾರೆ. ಆದ್ದರಿಂದ ದೇಶ, ವಿದೇಶ ಗಳಲ್ಲಿಯೂ ಕೊಡವ ಸಂಸ್ಕøತಿ, ಆಚಾರ, ವಿಚಾರ ಗಳು ಮತ್ತಷ್ಟು ಪಸರಿಸುವಂತಾಗಬೇಕು ಎಂದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಇಡೀ ವಿಶ್ವಕ್ಕೆ ಕೊಡವ ಭಾಷೆಯನ್ನು ಪರಿಚಯಿಸಿದ್ದಾರೆ. ಅಮೆರಿಕಾದಲ್ಲಿಯೂ ಕೊಡವ ಸಮಾಜ ಇದೆ ಎಂದರು. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಬದುಕಿನ ಭಾಷೆಯಾದ ಇಂಗ್ಲೀಷ್‍ನ್ನು ಎರಡನೇ ಭಾಷೆಯಾಗಿ ಕಲಿಯಬೇಕು, ಜೊತೆಗೆ ಮಾತೃಭಾಷೆಯಾದ ಕೊಡವ ಭಾಷೆಯನ್ನು ತೃತೀಯ ಭಾಷೆಯನ್ನಾಗಿ ಕಲಿಯಬೇಕು ಎಂದು ಶಾಸಕರು ಹೇಳಿದರು.

ಕೊಡವ ಶಬ್ದಕೋಶ ಬಿಡುಗಡೆಗೊಳಿಸಿದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಕೊಡವ ಸಂಸ್ಕøತಿ, ಕಲೆ, ಆಚಾರ- ವಿಚಾರ ಗಳು ಶ್ರೀಮಂತಿಕೆಯಿಂದ ಕೂಡಿದೆ. ಕೊಡವ, ಸಂಸ್ಕøತಿ ಮತ್ತು ಕಲೆಗಳು ಉಳಿದಾಗ ಭಾಷೆ ಬೆಳೆಯಲು ಸಾಧ್ಯ. ಇದರಿಂದ ಮುಂದಿನ ಜನಾಂಗಕ್ಕೆ ಭಾಷೆಯನ್ನು ಉಳಿಸಲು ಸಾಧ್ಯ ಎಂದು ತಿಳಿಸಿದರು.

ಕೊಡವ ಭಾಷೆ, ಸಂಸ್ಕøತಿ, ಕಲೆಗಳನ್ನು ಉಳಿಸಿ ಬೆಳೆಸು ವಲ್ಲಿ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಕಾರ್ಯಕ್ರಮ ಗಳು ಅತ್ಯಮೂಲ್ಯವಾಗಿವೆ. ಆ ನಿಟ್ಟಿನಲ್ಲಿ ಕೊಡವ ಭಾಷೆ, ಸಂಸ್ಕøತಿ ಬೆಳವಣಿಗೆಗೆ ಶ್ರಮಿಸುತ್ತಿರುವವರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಪಶ್ಚಿಮಘಟ್ಟ ಅರಣ್ಯ ಸಂರಕ್ಷಣಾ ಸಮಿತಿ ರಾಜ್ಯ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ಕೊಡವ ಭಾಷೆ, ಸಂಸ್ಕøತಿ, ಆಚಾರ, ವಿಚಾರಗಳನ್ನು ಮಕ್ಕಳಿಗೆ ತಿಳಿಸಬೇಕು. ಕೊಡಗಿನ ಸಂಸ್ಕøತಿಯ ಬಗ್ಗೆ ಮಕ್ಕಳಲ್ಲಿ ಬೆಳಕು ಚೆಲ್ಲುವಂತಾಗಬೇಕು ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ ಮಾತನಾಡಿ, ಕೊಡವ ಭಾಷೆ, ಕಲೆ, ಸಂಸ್ಕøತಿ, ಸಾಹಿತ್ಯವನ್ನು ಮರೆಯಬಾರದು. ನಾವು ಆಕಾಶದಲ್ಲಿ ಸಂಚಾರ ಮಾಡಿದರೂ, ಭೂಮಿಯ ಬೇರನ್ನು ಮರೆಯ ಬಾರದು ಎಂದ ಅವರು, ಅತ್ಯಂತ ಶ್ರೀಮಂತ ಸಂಸ್ಕøತಿ ಯನ್ನು ಕೊಡವ ಭಾಷೆ ಹೊಂದಿದೆ. ಆ ದಿಸೆಯಲ್ಲಿ ಕೊಡವ ಸಂಸ್ಕøತಿ, ಆಚಾರ ವಿಚಾರವನ್ನು ಬೆಳೆಸಬೇಕು. ಸಂಸ್ಕøತಿಯನ್ನು ಉಳಿಸುವುದು ಎಲ್ಲರ ಕರ್ತವ್ಯ ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಕೊಡವ ಭಾಷೆಯಲ್ಲಿ ಲಿಪಿ ರಚಿಸಲು ಪ್ರಯತ್ನಿಸಲಾಗು ತ್ತಿದೆ. ಆ ದಿಸೆಯಲ್ಲಿ ಮೈಸೂರಿನಲ್ಲಿರುವ ಭಾರತೀಯ ಭಾಷಾ ಸಂಶೋಧನಾ ಸಂಸ್ಥೆಯಲ್ಲಿ ಪ್ರಯತ್ನಗಳು ನಡೆದಿವೆ. ಕೊಡವ ಭಾಷೆಯಲ್ಲಿ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ ಕೋರ್ಸ್ ಹೀಗೆ ಹಲವು ರೀತಿಯ ಪದವಿ ವ್ಯಾಸಂಗಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಅನುಮತಿ ದೊರೆತಿದೆ. ಕೊಡವ ಭಾಷೆ ಉಳಿದರೆ, ಸಂಸ್ಕøತಿ ಉಳಿಯುತ್ತದೆ, ಸಂಸ್ಕøತಿ ಉಳಿದರೆ ಭಾಷೆ ಉಳಿಯುತ್ತದೆ. ಆದ್ದರಿಂದ ಕೊಡವ ಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಲಾಗುತ್ತಿದೆ ಎಂದರು.

ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಯಾವುದೇ ಭಾಷೆ ಬದುಕಿನ ಭಾಷೆಯಾಗಬೇಕು. ಆ ನಿಟ್ಟಿನಲ್ಲಿ ಕೊಡವ ಭಾಷೆಗೆ ಶ್ರೀಮಂತ ಪರಂಪರೆ ಇದ್ದು, ಅದನ್ನು ಉಳಿಸಿ ಬೆಳೆಸಿ ಕೊಂಡು ಹೋಗುವಂತಾಗಬೇಕು ಎಂದರು.
ಹಂಪಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಐಕೋಳಂಡ ಪ್ರಶಾಂತ್ ಭೀಮಯ್ಯ ಮಾತನಾಡಿ, ಕೊಡವ ಭಾಷೆ ಮತ್ತು ಸಂಸ್ಕøತಿಯನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಬಲಪಡಿಸಬೇಕು ಎಂದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ, ಮಕ್ಕಂದೂರು ಗ್ರಾಪಂ ಅಧ್ಯಕ್ಷ ಕನ್ನಿಕಂಡ ಶ್ಯಾಮ್ ಸುಬ್ಬಯ್ಯ, ಮಕ್ಕಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೊಕ್ಕಲೇರ ಸುಜು ತಿಮ್ಮಯ್ಯ, ಗೌರವ ಪ್ರಶಸ್ತಿ ಪುರಸ್ಕøತ ಕಸ್ತೂರಿ ಗೋವಿಂದ ಮಯ್ಯ, ಶೋಭಾ ಸುಬ್ಬಯ್ಯ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ 2019-20, 2020-21ನೇ ಸಾಲಿನ ಗೌರವ ಮತ್ತು ಪುಸ್ತಕ ಪ್ರಶಸ್ತಿ ಪ್ರದಾನ ಮಾಡ ಲಾಯಿತು. ವಾಲ್ಮೀಕಿ ರಾಮಾಯಣ, ಕಾವೇರಿ ಪಳಮೆ, ನೆಮ್ಮದಿರ ಗೂಡ್, ಮನಸ್ಸ್‍ರ ನೊಂಬಲ, ಕಥೆ ಪುತ್ತ್ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯ ಕ್ರಮದಲ್ಲಿ ಉಮ್ಮತಾಟ್, ಬೊಳಕಾಟ್, ಕೋಲಾಟ್, ಕತ್ತಿಯಾಟ್ ಹಾಗೂ ಕೊಡವ ನೃತ್ಯ ಪ್ರದರ್ಶನ ನಡೆಯಿತು.

ಅಕಾಡೆಮಿ ಸದಸ್ಯರಾದ ಗೌರಮ್ಮ ಮಾದಮ್ಮಯ್ಯ, ಡಾ.ಸುಭಾಷ್ ನಾಣಯ್ಯ, ಜಾನಕಿ ಮಾಚಯ್ಯ, ಡಾ.ರೇವತಿ ಪೂವಯ್ಯ, ಬಬ್ಬಿರ ಸರಸ್ವತಿ, ಕುಡಿಯರ ಮುತ್ತಪ್ಪ, ಪ್ರಭುಕುಮಾರ್, ಕವನ್ ಕಾರ್ಯಪ್ಪ, ರಿಜಿಸ್ಟ್ರಾರ್ ಗಿರೀಶ್ ಇತರರು ಇದ್ದರು.

ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷರಾದ ನಾಪಂಡ ರವಿ ಕಾಳಪ್ಪ ಸ್ವಾಗತಿಸಿದರು, ತೇಲಪಂಡ ಕವನ್ ಕಾರ್ಯಪ್ಪ ನಿರೂಪಿಸಿದರು. ಸೌಮ್ಯ ಮತ್ತು ತಂಡದವರು ಪ್ರಾರ್ಥಿಸಿದರು, ಎಂ.ಎಸ್.ಶಂಭಯ್ಯ ವಂದಿಸಿದರು.

Translate »