ಕಾಡು ಪ್ರಾಣಿ ಬೇಟೆ: 7 ಮಂದಿ ಬಂಧನ, 7 ನಾಡ ಬಂದೂಕು ವಶ
ಚಾಮರಾಜನಗರ

ಕಾಡು ಪ್ರಾಣಿ ಬೇಟೆ: 7 ಮಂದಿ ಬಂಧನ, 7 ನಾಡ ಬಂದೂಕು ವಶ

November 4, 2020

ಕೊಳ್ಳೇಗಾಲ, ನ.3(ಎನ್.ನಾಗೇಂದ್ರ)- ಕಾಡಂಚಿನ ಗ್ರಾಮದ ರೈತರ ಜಮೀನುಗಳಿಗೆ ಆಹಾರ ಹುಡುಕಿ ಕೊಂಡು ಬರುವ ವನ್ಯಜೀವಿಗಳನ್ನು ಗುರಿಯಾಗಿಸಿಕೊಂಡು ಅವುಗಳನ್ನು ಬೇಟೆಯಾಡುತ್ತಿದ್ದ 7 ಜನರನ್ನು ನಾಡ ಬಂದೂಕು ಸಮೇತ ತಾಲೂಕಿನ ಸತ್ತೇಗಾಲ ಜಿಪಂ ವ್ಯಾಪ್ತಿಯ ಜಾಗೇರಿ ಗ್ರಾಮದಲ್ಲಿ ಮಂಗಳವಾರ ಬಂಧಿಸಲಾಗಿದೆ.

ತಾಲೂಕಿನ ಸತ್ತೇಗಾಲ ಜಾಗೇರಿ ಸಮೀಪದ ಶಾಂತಿ ನಗರ ನಿವಾಸಿಗಳಾದ ಜಾನ್‍ಜೋನಸ್(27), ಜಾನ್ ಬಾಸ್ಕೋ(48), ಅಂಥೋಣಿ ಆನಂದ(29), ಸೈಮನ್ ಸ್ಟಾಲಿನ್(28), ಭಾಗ್ಯರಾಜ್(33), ಶೇಷುರಾಜು(27) ಹಾಗೂ ಅಥೋಣಿ ರಾಜು (25) ಬಂಧಿತರು. ಇವರಿಂದ 7 ನಾಡಬಂದೂಕು ಹಾಗೂ ಮದ್ದಿನ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ವಿವರ: ತಾಲೂಕಿನ ಜಾಗೇರಿ ಶಾಂತಿ ನಗರದ ಬಳಿಯ ಗವಿರಾಯಸ್ವಾಮಿಬೆಟ್ಟದ ತಪ್ಪಲಿನಲ್ಲಿ ಅರಣ್ಯಕ್ಕೆ ಹೊಂದಿಕೊಂಡಂತೆ ಸರ್ವೇ ನಂ: 174ರಲ್ಲಿ ಜಾನ್‍ಜೋನಸ್‍ಗೆ ಸೇರಿದ ಜಮೀನಿದ್ದು, ಆತ ಅಲ್ಲಿ ವ್ಯವಸಾಯ ಮಾಡಿಕೊಂಡಿದ್ದಾನೆ. ಈ ಜಮೀನಿಗೆ ಬರುವ ವನ್ಯಜೀವಿಗಳನ್ನು ಗುರಿಯಾಗಿಟ್ಟುಕೊಂಡು ಅವುಗಳನ್ನು ಬೇಟೆಯಾಡುವ ಉದ್ದೇಶದಿಂದ ತನ್ನ ಸೇಹ್ನಿತರ ಜೊತೆ ಗೂಡಿ ಸುಮಾರು 7 ನಾಡ ಬಂದೂಕು ಹಾಗೂ ಮದ್ದಿನ ಪುಡಿಯನ್ನು ಸಂಗ್ರಹಿಸಿಕೊಂಡಿದ್ದನು. ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸ್‍ಐಗಳಾದ ಅಶೋಕ್, ವೀರಭದ್ರಪ್ಪ, ತಾಜುದ್ದಿನ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ನಿಂಗರಾಜು, ವೆಂಕಟೇಶ್, ಮಂಜುನಾಥ್, ನಾಗರಾಜು, ರಘು, ವಿರೇಂದ್ರ, ಸುರೇಶ್, ಲಿಂಗರಾಜು, ನಿಂಗರಾಜು, ಶಿವಕುಮಾರ್, ಮುತ್ತಪ್ಪ ತಮ್ಮಣ್ಣಗೋಳ್, ಮಹೇಂದ್ರ, ರವಿಕುಮಾರ್, ಸಕ್ರುನಾಯಕ, ನಾರಾಯಣ ಇನ್ನಿತರರು ಪಾಲ್ಗೊಂಡಿದ್ದರು.

ಬಂದೂಕು ತಯಾರಿಕೆಯ ಉಪಕರಣ ಪತ್ತೆ: ಈ ಸಂಬಂಧ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಸಾರಾ ಥಾಮಸ್ ಮಾತನಾಡಿ, ಕಾಡು ಪ್ರಾಣಿಗಳ ಬೇಟೆಗಾರರು ಬಂಧಿಸಿ ವನ್ಯಜೀವಿ ಸಂಕುಲ ರಕ್ಷಣೆಗೆ ಮುಂದಾದ ಪೆÇಲೀಸರ ಕಾರ್ಯವೈಖರಿಯನ್ನು ನಾನು ಶ್ಲಾಘಿಸುತ್ತೇನೆ. ಈ ಪ್ರಕರಣದ ಮುಖ್ಯ ರೂವಾರಿ ಜಾನ್ ಜೋಸೆಫ್ ತನ್ನ ಮನೆಯಲ್ಲಿ ಬಂದೂಕು ತಯಾರಿಸು ತ್ತಿದ್ದನು. ಈ ಸಂಬಂಧ ಆತನ ಮನೆಯಲ್ಲಿ ಬಂದೂಕು ತಯಾರಿಸುವ ಉಪಕರಣಗಳು ಪತ್ತೆಯಾಗಿದ್ದು, ಅವು ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ತಮಿಳುನಾಡಿನಿಂದ ಬಂದೂಕು ತಂದಿದ್ದ ಆರೋಪಿ ಬಂಧನ: ಮತ್ತೊಂದು ಪ್ರಕರಣದಲ್ಲಿ ರಾಮಾಪುರ ಪೆÇಲೀಸ್ ಠಾಣೆಯ ವ್ಯಾಪ್ತಿಯ ದಂಡಳ್ಳಿ ನಿವಾಸಿಯಾದ ಮುನಿರುದ್ರಪ್ಪ ಕೂಡ ಕಾಡು ಪ್ರಾಣಿಗಳ ಬೇಟೆಯಾಡು ತ್ತಿದ್ದು, ಇವನಿಂದಲೂ ಬಂದೂಕು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‍ಪಿ ದಿವ್ಯಸಾರಾ ಥಾಮಸ್ ತಿಳಿಸಿದರು.

ಮುನಿರುದ್ರಪ್ಪ ಈ ಹಿಂದೆ ಕಾಡು ಪ್ರಾಣಿಗಳ ಬೇಟೆಯ ಸಂಬಂಧ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಮತ್ತೆ ಆತ ಅಕ್ರಮ ನಾಡ ಬಂದೂಕು ಹೊಂದಿ ಸಿಕ್ಕಿ ಬಿದ್ದಿದ್ದಾನೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಈತ ತಮಿಳು ನಾಡಿನ ಧರ್ಮ ಪುರಿಯ ಅಂಚಿಪಾಳ್ಯದಲ್ಲಿ ಬಂದೂಕು ಖರೀದಿಸಿರುವು ದಾಗಿ ತಿಳಿಸಿದ್ದಾನೆ ಎಂದು ಮಾಹಿತಿ ನೀಡಿದರು.

Translate »