ಡಿಜಿಟಲ್ ಜೀವಿತ ಪ್ರಮಾಣಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಇಪಿಎಫ್ ಸಂಸ್ಥೆ ಸೂಚನೆ
ಮೈಸೂರು

ಡಿಜಿಟಲ್ ಜೀವಿತ ಪ್ರಮಾಣಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಇಪಿಎಫ್ ಸಂಸ್ಥೆ ಸೂಚನೆ

November 4, 2020

ಮೈಸೂರು, ನ.3- ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ(ಇಪಿಎಫ್‍ಒ) ಪಿಂಚಣಿ ದಾರರು ಪ್ರತಿವರ್ಷದಂತೆ ನವೆಂಬರ್, ಡಿಸೆಂಬರ್‍ನಲ್ಲಿ ಜೀವಿತ ಪ್ರಮಾಣಪತ್ರ ಸಲ್ಲಿಸಬೇಕಿದೆ. ಸದ್ಯ ಕೊರೊನಾ ಭೀತಿ ಇರುವುದ ರಿಂದ ಅದಕ್ಕಾಗಿ ಭವಿಷ್ಯನಿಧಿ ಸಂಸ್ಥೆಗೆ ಭೇಟಿ ನೀಡಬೇಕಿಲ್ಲ. ಇಪಿಎಫ್ ಸಂಸ್ಥೆಯು `ಕಾಮನ್ ಸರ್ವಿಸ್ ಸೆಂಟರ್’(ಸಿಎಸ್‍ಸಿ) ಜತೆ ಒಪ್ಪಂದ ಮಾಡಿಕೊಂಡಿದ್ದು, ಪಿಂಚಣಿದಾರರು ಈ ಬಾರಿ ಡಿಜಿಟಲ್ ರೀತಿ ಜೀವಿತ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ಇಲ್ಲವಾದರೆ, ತಮ್ಮ ಖಾತೆ ಇರುವ ಬ್ಯಾಂಕ್ ಶಾಖೆ, ಸಮೀಪದ ಅಂಚೆ ಕಚೇರಿಯಲ್ಲಿಯೂ ಪ್ರಮಾಣಪತ್ರ ಸಲ್ಲಿಸಬಹುದು. ಅದೂ ಸಾಧ್ಯವಾಗದಿದ್ದರೆ ತಮ್ಮ ಭಾಗದ ಪೋಸ್ಟ್ ಮ್ಯಾನ್ ಸಂಪರ್ಕಿಸಿ ಈ ಸೇವೆ ಪಡೆದುಕೊಳ್ಳ ಬಹುದು. ಅಥವಾ ಆನ್‍ಲೈನ್ ಮೂಲಕವೂ ಡಿಜಿಟಲ್ ಜೀವಿತ ಪ್ರಮಾಣಪತ್ರ ಸಲ್ಲಿಸ ಬಹುದು. ಇಲ್ಲವೇ ಮೊಬೈಲ್ ಫೋನ್‍ಗೆ ಉಮಂಗ್ ಅಪ್ಲಿಕೇಷನ್ ಡೌನ್‍ಲೋಡ್ ಮಾಡಿಕೊಂಡು ಈ ಸೌಲಭ್ಯವನ್ನು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ. `ಹಿರಿಯ ನಾಗರಿಕರು ಮನೆಯೊಳಗೇ ಇರಿ, ಕ್ಷೇಮವಾಗಿರಿ’ ಎಂದೂ ಮನವಿ ಮಾಡಿದೆ.

Translate »