ಕಾಡಿಗೆ ಹೋಗದ ಕಾಡಾನೆ: ಕಾರ್ಯಾಚರಣೆ ವಿಫಲ
ಮೈಸೂರು

ಕಾಡಿಗೆ ಹೋಗದ ಕಾಡಾನೆ: ಕಾರ್ಯಾಚರಣೆ ವಿಫಲ

April 19, 2020

ಸಿದ್ದಾಪುರ, ಏ.18- ಕಳೆದ ಕೆಲ ದಿನ ಗಳಿಂದ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಅರಣ್ಯ ಇಲಾಖೆ ಕಾರ್ಯಾಚರಣೆ ವಿಫಲ ವಾಗಿದೆ. ವಾಲ್ನೂರು-ತ್ಯಾಗತ್ತೂರು, ಅಭ್ಯಮಂಗಲ, ನೆಲ್ಯಹುದಿಕೇರಿ, ಬೆಟ್ಟದ ಕಾಡು ಹಾಗೂ ಅರೆಕಾಡು ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ 20ಕ್ಕೂ ಹೆಚ್ಚು ಕಾಡಾನೆಗಳನ್ನು ಕಾಡಿ ಗಟ್ಟುವ ಕಾರ್ಯಾಚರಣೆ ಮುಂದುವರೆ ದಿದ್ದರೂ, ಕಾಡಾನೆಗಳು ಕಾಫಿ ತೋಟ ಬಿಟ್ಟು ಹೋಗದೇ ಅಲ್ಲೇ ಬೀಡು ಬಿಟ್ಟಿವೆ.

ಉಪ ವಲಯ ಅರಣ್ಯಾಧಿಕಾರಿ ಸುಬ್ರಾಯ ನೇತೃತ್ವದ 10ಕ್ಕೂ ಹೆಚ್ಚು ಸಿಬ್ಬಂದಿ ಹರಸಾಹಸ ಪಟ್ಟು ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಒಂದು ಗೂಡಿಸಿ ಸಂಜೆ ಅರಣ್ಯಕ್ಕೆ ಅಟ್ಟಲು ಮುಂದಾದರೂ ಆನೆಗಳ ಹಿಂಡು ಅರಣ್ಯದತ್ತ ತೆರಳದೇ ಕಾಫಿ ಬೆಳೆಯನ್ನು ತುಳಿದು ನಾಶ ಮಾಡುತ್ತಿರುವುದು ಇಲ್ಲಿನ ರೈತರ ಆತಂ ಕಕ್ಕೆ ಕಾರಣವಾಗಿದೆ. ಹೀಗಾಗಿ ಕೂಡಲೇ ಅರಣ್ಯಾಧಿಕಾರಿಗಳು ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಮೂಲಕ ಶಾಶ್ವತವಾಗಿ ಆನೆ ಹಾವಳಿ ತಡೆಗಟ್ಟಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Translate »