ಕ್ಯಾನ್‍ವಾಸ್ ಮೇಲೆ ಅರಳಿದ ಕಾಡು ಹೂಗಳು
ಮೈಸೂರು

ಕ್ಯಾನ್‍ವಾಸ್ ಮೇಲೆ ಅರಳಿದ ಕಾಡು ಹೂಗಳು

August 31, 2020

ಮೈಸೂರು, ಆ.30(ಆರ್‍ಕೆಬಿ)- ದಾರಿ ಯಲ್ಲಿ ಯಾರ ಗಮನಕ್ಕೂ ಬಾರದೇ ಅರಳಿ ಮುದುಡುವ ಕಾಡು ಹೂವುಗಳು ಕೆ. ಸಂಗೀತಾ ಅವರ ಕುಂಚದಲ್ಲಿ ಅರಳುತ್ತವೆ. ಅಕ್ರಿಲಿಕ್ ವಾಟರ್ ಬೇಸ್ಡ್ ಕಲರ್ ಬಳಸಿ ಕ್ಯಾನ್‍ವಾಸ್ ಮೇಲೆ ಇಂಥ ಹತ್ತಾರು ಹೂ ಗಳನ್ನು ಅರಳಿಸಿರುವ ಈ ಕಲಾ ಪ್ರತಿಭೆ 25ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನವನ್ನು ಭಾನುವಾರ ಮೈಸೂರಿನ ಶ್ರೀಕಲಾನಿಕೇತನ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದರು.

`ಅರಳು’ ಚಿತ್ರಕಲಾ ಪ್ರದರ್ಶನವನ್ನು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‍ಗೌಡ ಚಿತ್ರಕಲಾ ಪ್ರದರ್ಶನಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು.

`ನನ್ನ ಕಲಾಕೃತಿಗಳಲ್ಲಿ ಕಾಡು ಹೂವು ಚಿತ್ರ ಇದ್ದೇ ಇರುತ್ತವೆ’ ಎನ್ನುವ ಸಂಗೀತಾ, ಮೈಸೂರಿನ ವಿಜಯನಗರದ 2ನೇ ಹಂತದ ಶ್ರೀ ಕಲಾನಿಕೇತನ ಸ್ಕೂಲ್ ಆಫ್ ಆಟ್ರ್ಸ್ ವಿದ್ಯಾರ್ಥಿನಿ. ಸದ್ಯ ಹೆಚ್.ಡಿ.ಕೋಟೆ ತಾಲೂ ಕಿನ ಗೊಲ್ಲರಬೀಡು ಸರಗೂರಿನ ಸರ್ಕಾರಿ ಶಾಲೆಯ ಚಿತ್ರಕಲಾ ಶಿಕ್ಷಕಿ. ತಾವು ಚಿತ್ರಕಲೆ ಕಲಿತ ಸಂಸ್ಥೆಯಲ್ಲೇ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಸಂಗೀತಾ ಸಂತಸಗೊಂಡಿದ್ದರು.

ಡಿಡಿಪಿಐ ಕಚೇರಿಯ ಉಪ ಯೋಜನಾ ಸಮನ್ವಯಾಧಿಕಾರಿ ಶಿವಕುಮಾರ್, ಜಿಪಂ ಸದಸ್ಯೆ ಚಂದ್ರಿಕಾ ಸುರೇಶ್, ಕೃಷಿಕ ಚಿನ್ನ ಸ್ವಾಮಿ ವಡ್ಡಗೆರೆ, ಶ್ರೀಕಲಾನಿಕೇತನ ಸ್ಕೂಲ್ ಆಫ್ ಆಟ್ರ್ಸ್ ಪ್ರಾಂಶುಪಾಲ ಕೆ.ಸಿ.ಮಹದೇವ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.

Translate »