ಮೈಸೂರು, ಅ.31(ಆರ್‍ಕೆಬಿ)- ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಕಾಂಗ್ರೆಸ್ ಕಾರಣ. ದೇಶಕ್ಕೆ ಉತ್ತಮ ಭವಿಷ್ಯ ರೂಪಿಸಿರುವ ಕಾಂಗ್ರೆಸ್ ಇಲ್ಲದೇ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಕೃಷ್ಣ ರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅಭಿಪ್ರಾಯಪಟ್ಟರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಜಿಲ್ಲಾ ಗ್ರಾಮಾಂತರ ಸಮಿತಿಯಿಂದ ಶನಿವಾರ ಆಯೋಜಿಸಿದ್ದ `ಕಿಸಾನ್ ಅಧಿ ಕಾರ ದಿವಸ್’, `ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ’, `ಮಾಜಿ ಪ್ರಧಾನಿ ಇಂದಿರಾ ಗಾಂಧಿ ಬಲಿ ದಾನ ದಿನ’ ಮತ್ತು `ವಾಲ್ಮೀಕಿ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿ ದೇಶದ ಸಾಂಸ್ಕೃ ತಿಕತೆ ಬಿಂಬಿಸುವ ರಾಮಾಯಣದ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ಆಡಳಿ ತಾವಧಿಯಲ್ಲಿ ಸಿದ್ದರಾಮಯ್ಯ ಅವರು ವಿಧಾನಸೌಧ ಆವರಣದಲ್ಲಿ ಮಹರ್ಷಿ ವಾಲ್ಮಿಕಿ ಅವರ ಪ್ರತಿಮೆ ನಿರ್ಮಿಸಿ ಗೌರವ ಸಲ್ಲಿಸಿದ್ದಾರೆ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ದೇಶ ವನ್ನು ಒಕ್ಕೂಟವಾಗಿಸಿದವರು. ಇಂದಿರಾ ಗಾಂಧಿ ಸಾವು ಆಕಸ್ಮಿಕವಲ್ಲ. ಬಾಂಗ್ಲಾದೇಶ ವನ್ನು ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿ ಸ್ತಾನದಿಂದ ಮುಕ್ತಗೊಳಿಸಿ ಸ್ವತಂತ್ರವಾಗು ವಂತೆ ಮಾಡಿದ್ದರಿಂದ ಭಾರತದ ಮೇಲಾ ಗುತ್ತಿದ್ದ ಪರಿಣಾಮಗಳನ್ನು ತಡೆಗಟ್ಟಿದರು ಎಂದು ಸ್ಮರಿಸಿದರು.
ಬಳಿಕ ಮಾತನಾಡಿದ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್, ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಇಂದು ಸ್ಮರಿಸುವ ದಿನ. ಅವರ ಸೇವೆ ಬಲಿದಾನ ವನ್ನು ಗೌರವಿಸುವ ದಿನ. ಇದೇ ಸಂದರ್ಭ ರಾಮಾಯಣ ಕರ್ತೃ ವಾಲ್ಮೀಕಿ ಜಯಂತಿ ಯನ್ನು ಆಚರಿಸುತ್ತಿದ್ದೇವೆ. ಹೀಗಾಗಿ ಇದು ಮಹತ್ವದ ದಿನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಮೇಯರ್ ಶ್ರೀಧರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್, ಕಾಂಗ್ರೆಸ್ ಮಹಿಳಾ ಘಟಕ ನಗರಾಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಮಾಜಿ ಮೇಯರ್ ಚಿಕ್ಕಣ್ಣ, ಕೆಪಿಸಿಸಿ ಸದಸ್ಯ ಎಂ.ರಾಜು, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಕೆ.ಅಶೋಕ್, ಕಾಂಗ್ರೆಸ್ ಮುಖಂಡ ರಾದ ಹರೀಶ್‍ಗೌಡ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕನಾಥ್ ಗೌಡ, ಸೇವಾದಳ ಅಧ್ಯಕ್ಷ ಗಿರೀಶ್, ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‍ಗೌಡ, ಕಾಂಗ್ರೆಸ್ ನಗರ ಘಟಕ ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಈಶ್ವರ ಚಕ್ಕಡಿ ಇನ್ನಿತರರಿದ್ದರು.