ಮುಂಬೈ: ನವೆಂಬರ್ 4ರಿಂದ 9ರ ವರೆಗೆ ಯುಎಇಯಲ್ಲಿ ಮಹಿಳೆಯರ ಖಿ-20 ಚಾಲೆಂಜ್ ಟೂರ್ನಿ ನಡೆಯ ಲಿದೆ. ಹಿರಿಯ ಆಟಗಾರ್ತಿಯರಾದ ಮಿಥಾಲಿ ರಾಜ್ (ವೆಲಾಸಿಟಿ) ಹರ್ಮಾನ್ ಪ್ರೀತ್ ಕೌರ್ (ಸೂಪರ್ ನೊವಾಸ್) ಹಾಗೂ ಸ್ಮತಿ ಮಂದನಾ (ಟ್ರೈಲ್ ಬ್ಲೇಜರ್ಸ್) ಅವರಿಗೆ ಮೂರು ತಂಡ ಗಳ ನಾಯಕತ್ವ ವಹಿಸಲಾಗಿದೆ.
ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್. ಬಾಂಗ್ಲಾ ದೇಶ ಹಾಗೂ ನ್ಯೂಜಿಲೆಂಡ್ ಆಟಗಾರ್ತಿ ಯರು 4 ಪಂದ್ಯಗಳ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ
ಎಂಬ ಮಾಹಿತಿ ಲಭ್ಯವಾಗಿದೆ. ಈ ಟೂರ್ನಿಯಲ್ಲಿ ವೆಲಾಸಿಟಿ, ಸೂಪರ್ ನೋವಾ ಹಾಗೂ ಟ್ರೈಲ್ ಬ್ಲೇಜರ್ ತಂಡಗಳು ಪಾಲ್ಗೊಳ್ಳಲಿವೆ. ಹಾಗೆಯೇ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಮೂರು ತಂಡಗಳು ತಲಾ 2 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಹೆಚ್ಚು ಗೆದ್ದ ತಂಡಗಳು ಫೈನಲ್ ಆಡಲಿದೆ. ನ.4ರಿಂದ ಮಹಿಳಾ ಮಿನಿ ಐಪಿಎಲ್ ಆರಂಭವಾಗಲಿದ್ದು, ನ.9ರಂದು ಫೈನಲ್ ನಡೆಯಲಿದೆ. ಅದರ ಮರುದಿನವೇ ಪುರುಷರ ಐಪಿಎಲ್ ಫೈನಲ್ ಕದನ ನಡೆಯಲಿದೆ.