ಗೋಪಾಲಸ್ವಾಮಿಗೂ ಮರದ ಅಂಬಾರಿ ತಾಲೀಮು
ಮೈಸೂರು

ಗೋಪಾಲಸ್ವಾಮಿಗೂ ಮರದ ಅಂಬಾರಿ ತಾಲೀಮು

October 4, 2021

ಮೈಸೂರು, ಅ.೩(ಎಂಟಿವೈ)-ಜAಬೂ ಸವಾರಿಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಗೋಪಾಲಸ್ವಾಮಿ ಆನೆಗೆ ಮರದ ಅಂಬಾರಿಯೊAದಿಗೆ ೮೦೦ ಕೆ.ಜಿ. ಭಾರ ಹೊರೆಸಿ ಯಶಸ್ವಿಯಾಗಿ ತಾಲೀಮು ನಡೆಸಲಾಯಿತು.

ಪ್ರಸಕ್ತ ಸಾಲಿನ ದಸರಾ ಮಹೋತ್ಸವದಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದು, ಧನಂಜಯ ಮತ್ತು ಗೋಪಾಲಸ್ವಾಮಿಗೆ ಮರದ ಅಂಬಾರಿಯೊAದಿಗೆ ಭಾರ ಹೊರಿಸುವ ತಾಲೀಮು ನೀಡುವ ಮೂಲಕ ಪರ್ಯಾಯ ಆನೆಯಾಗಿ ಸಜ್ಜುಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಿನ ಬಿಟ್ಟು ದಿನಕ್ಕೆ ಪರ್ಯಾಯ ಆನೆಗಳಿಗೆ ಭಾರ ಹೊರಿಸಲಾಗುತ್ತಿದೆ. ಭಾನುವಾರ ಬೆಳಗ್ಗೆ ಗೋಪಾಲಸ್ವಾಮಿಗೆ ಮರದ ಅಂಬಾರಿಯೊAದಿಗೆ ೮೦೦ ಕೆ.ಜಿ. ಭಾರ ಹೊರೆಸಿ ತಾಲೀಮು ನಡೆಸಲಾಯಿತು.
ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದಿAದ ಗೋಪಾಲಸ್ವಾಮಿ ಮೇಲೆ ಗಾದಿ ಮತ್ತು ನಮ್ದಾ ಕಟ್ಟಿಕೊಂಡು ಕುಮ್ಕಿ ಆನೆಗಳಾದ ಕಾವೇರಿ ಮತ್ತು ಚೈತ್ರಳೊಂದಿಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿವಾಸದ ಬಳಿ ಕರೆತಂದು ಕ್ರೇನ್ ಮೂಲಕ ಮರದ ಅಂಬಾರಿ ಕಟ್ಟಿ, ಮರಳಿನ ಮೂಟೆಯನ್ನು ಇಟ್ಟು ರಾಜ ವಂಶಸ್ಥರ ನಿವಾಸದತ್ತ ಸೆಲ್ಯೂಟ್ ಹೊಡೆಸಿ ಜಂಬೂ ಸವಾರಿ ನಡೆಸುವ ಜಾಗದಲ್ಲಿ ತಾಲೀಮು ನಡೆಸಲಾಯಿತು. ಈ ವೇಳೆ ಸಾಲಾನೆಯಾಗಿ ಅಭಿಮನ್ಯು, ಧನಂಜಯ ಇತ್ಯಾದಿ ಆನೆಗಳು ಹೆಜ್ಜೆ ಹಾಕಿದವು.

 

Translate »