ಹಿಂದೂಸ್ಥಾನ್ ಕಾಲೇಜಿನಲ್ಲಿ ವಿಶ್ವ ವಿದ್ಯಾರ್ಥಿ ದಿನಾಚರಣೆ
ಮೈಸೂರು

ಹಿಂದೂಸ್ಥಾನ್ ಕಾಲೇಜಿನಲ್ಲಿ ವಿಶ್ವ ವಿದ್ಯಾರ್ಥಿ ದಿನಾಚರಣೆ

October 24, 2020

ಮೈಸೂರು, ಅ.23- ಮೈಸೂರಿನ ಹಿಂದೂಸ್ಥಾನ್ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜನ್ಮ ದಿನದ ಅಂಗವಾಗಿ ವಿಶ್ವ ವಿದ್ಯಾರ್ಥಿ ದಿನಾಚರಣೆ ಆಚರಿಸಲಾಯಿತು. ಉದ್ಯಮಿ ಶ್ರೀಮತಿ ಚಂದ್ರ ಕೆ ಹರ್ಷ, ಪ್ರಿನ್ಸಿಪಾಲ್ ಡಾ.ಸಿ.ಜೆ.ಪ್ರಿಯ, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಶ್ರೀಮತಿ ಸೂಕ್ಷ್ಮ ಆರ್.ಡಿ, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೆ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಶ್ರೀಮತಿ ಚಂದ್ರ ಕೆ. ಹರ್ಷ ಅವರು ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಏನು ಎಂಬುದನ್ನು ಕುರಿತು ಭಾಷಣ ಮಾಡಿದರು ಹಾಗೂ ವಿದ್ಯಾರ್ಥಿಗಳಿಗೆ ಇರಬೇಕಾದ ಕರ್ತವ್ಯ ತಾಳ್ಮೆಗಳ ಬಗ್ಗೆ ಕಥೆಗಳನ್ನು ಹೇಳುವ ಮೂಲಕ ಸ್ಫೂರ್ತಿದಾಯಕವಾದ ಭಾಷಣ ಮಾಡಿದರು. ಡಾ. ಅಬ್ದುಲ್ ಕಲಾಂ ಅವರ ಜನ್ಮ ದಿನದ ಪ್ರಯುಕ್ತ ಏರ್ಪಡಿಸಿದ್ದ ಆನ್‍ಲೈನ್ ಮುಕ್ತ ಸಾಹಿತ್ಯ ಸ್ಪರ್ಧೆಯಲ್ಲಿ ಪೋಸ್ಟರ್ ತಯಾರಿಕೆ, ಪ್ರಬಂಧ ಬರವಣಿಗೆ ಹಾಗೂ ಘೋಷಣೆ ಬರವಣಿಗೆ ಸ್ಪರ್ಧೆಯಲ್ಲಿ ಭಾಗವಹಿಸಿ, ವಿಜೇತರಾದವರ ಹೆಸರನ್ನು ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕರು ಶ್ರೀಮತಿ ನಾಗಶ್ರೀ ಎಸ್ ಪ್ರಕಟಿಸಿದರು.

Translate »