ಮೈಸೂರು ಅರಮನೆ ಆವರಣದಲ್ಲಿ ಅರ್ಥಪೂರ್ಣ ವಿಶ್ವ ಪ್ರವಾಸೋದ್ಯಮ ದಿನಾಚರಣೆ
ಮೈಸೂರು

ಮೈಸೂರು ಅರಮನೆ ಆವರಣದಲ್ಲಿ ಅರ್ಥಪೂರ್ಣ ವಿಶ್ವ ಪ್ರವಾಸೋದ್ಯಮ ದಿನಾಚರಣೆ

September 28, 2018

ಮೈಸೂರು:  ಮೈಸೂರು ಅರಮನೆ ಆವರಣದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಡಳಿತದಿಂದ ವಿಶ್ವ ಪ್ರವಾಸೋದ್ಯಮ ದಿನವನ್ನು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪ್ರವಾಸೋದ್ಯಮ ಇಲಾಖೆ, ಅರಮನೆ ಮಂಡಳಿ, ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಮತ್ತು ಮೈಸೂರು ಹೋಟೆಲ್ ಅಸೋಸಿಯೇಷನ್ ಸಹಯೋಗದಲ್ಲಿ ಏರ್ಪ ಡಿಸಿದ್ಧ ಕಾರ್ಯಕ್ರಮದಲ್ಲಿ ಅರಮನೆ ದಕ್ಷಿಣ ದ್ವಾರದಲ್ಲಿ ಪ್ರವಾಸಿಗರನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಎಸ್.ಎ.ರಾಮದಾಸ್, ಬಿ.ಹರ್ಷವರ್ಧನ್ ಅವರು ಗುಲಾಬಿ ಹೂ ನೀಡಿ, ಆತ್ಮೀಯವಾಗಿ ಬರಮಾಡಿಕೊಂಡರು.

ಈ ಸಂದರ್ಭ ಮಾತನಾಡಿದ ಸಚಿವ ಜಿ.ಟಿ. ದೇವೇಗೌಡರು, ಪ್ರವಾಸೋದ್ಯಮ ಅಭಿ ವೃದ್ಧಿಗೆ ಮೈಸೂರು ಹಾಗೂ ಸುತ್ತಮುತ್ತ ವಿಫುಲ ಅವಕಾಶವಿರುವುದರಿಂದ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಹೆಚ್ಚು ಪ್ರವಾ ಸಿಗರನ್ನು ಆಕರ್ಷಿಸಲು ಸರ್ಕಾರ ಆಸಕ್ತಿ ತೋರಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಪ್ರತ್ಯೇಕ ಅನುದಾನ ನೀಡು ವುದಾಗಿ ತಿಳಿಸಿದ್ದಾರೆ ಎಂದರು.

ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜುಗೊಳ್ಳುತ್ತಿರುವ ಈ ಸಂದರ್ಭದಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಆಚರಿಸುತ್ತಿರುವುದರಿಂದ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆ ಇದೆ. ಅವರಿಗೆ ನೂತನ ತಂತ್ರಜ್ಞಾನದ ಮೂಲಕ ಸಮಗ್ರ ಮಾಹಿತಿ ಒದಗಿಸಲು ಜಿಲ್ಲಾಡಳಿತ ತಯಾರಿ ನಡೆಸಿದೆ ಎಂದರು.

‘ಒಮ್ಮೆ ಬಂದು ನೋಡಿ ನಮ್ಮ ದಸರವಾ, ಒಮ್ಮೆ ಬಂದು ನೋಡಿ ಚಿನ್ನದ ಅಂಬಾರಿಯಾ, ಚಾಮುಂಡೇಶ್ವರಿ ಉತ್ಸವ ಹಾಗೂ ಇಲ್ಲಿನ ಸಾಂಸ್ಕೃತಿಕ ಕಲಾ ಪ್ರದರ್ಶನವಾ’ ಎಂದು ಪ್ರವಾಸಿಗರಿಗೆ ಕರೆ ನೀಡಿದ ಜಿ.ಟಿ.ದೇವೇಗೌಡರು, ವರ್ಷದ 365 ದಿನವೂ ಮೈಸೂರಲ್ಲಿ ಪ್ರವಾಸೋಧ್ಯಮ ದಿನವಾಗಬೇಕು ಎಂದು ಹೇಳಿದರು.

ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಇಲ್ಲಿನ ವ್ಯಾಪಾರ-ವಹಿವಾಟು ವೃದ್ಧಿಯಾಗಲಿದೆ. ಕಲೆ, ಸಾಂಸ್ಕೃತಿಕ ಪರಂಪರೆಗೆ ಪ್ರೋತ್ಸಾಹ ದೊರೆತಂತಾಗುತ್ತದೆ ಎಂದ ಸಚಿವರು, ಅಕ್ಟೋಬರ್ 10ರಂದು ಬೆಳಿಗ್ಗೆ 8 ಗಂಟೆಗೆ ಇನ್‍ಫೋಸಿಸ್ ಮುಖ್ಯಸ್ಥರಾದ ಶ್ರೀಮತಿ ಸುಧಾಮೂರ್ತಿ ಅವರು ಚಾಮುಂ ಡೇಶ್ವರಿ ಸನ್ನಿಧಿಯಲ್ಲಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದು, ವಿಶ್ವ ದಾದ್ಯಂತ ಪ್ರವಾಸಿಗರನ್ನು ಮೈಸೂರಿಗೆ ಸೆಳೆಯಲು ಪ್ರವಾಸೋಧ್ಯಮ ಸಚಿವ ಸಾ.ರಾ. ಮಹೇಶ್ ಅವರು ಇಲಾಖಾ ಅಧಿಕಾರಿಗಳ ತಂಡದೊಂದಿಗೆ ಫ್ರಾನ್ಸ್‍ಗೆ ತೆರಳಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆ ವೀಕ್ಷಣೆಗೆ ಸಿದ್ಧಪಡಿಸಿರುವ ವಚ್ರ್ಯುಯಲ್ ರಿಯಾಲಿಟಿ ಆ್ಯಪ್‍ಗೆ ಚಾಲನೆ ನೀಡಿದರು. ಸಚಿವ ಸಾ.ರಾ.ಮಹೇಶ್ ಅವರು ನೀಡಿರುವ ವಿಶ್ವಪ್ರವಾಸೋದ್ಯಮ ದಿನಾ ಚರಣೆ ಸಂದೇಶವನ್ನು ವೇದಿಕೆಯಲ್ಲಿ ಎಲ್‍ಇಡಿ ಪರದೆಯಲ್ಲಿ ಬಿತ್ತರಿಸಲಾಯಿತು.

ಮೈಸೂರು ಹೋಟೆಲ್ ಅಸೋಸಿ ಯೇಷನ್ ಅಧ್ಯಕ್ಷ ಸಿ.ನಾರಾಯಣಗೌಡ, ಮೈಸೂರು ಟ್ರಾವಲ್ಸ್ ಅಸೋಸಿಯೇಷನ್ ಅಧ್ಯಕ್ಷ ಜಯಕುಮಾರ್, ಪ್ರಶಾಂತ, ಕಾರ್ಪೋರೇಟರ್ ಲೋಕೇಶ್, ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರ ಹ್ಮಣ್ಯ, ಪ್ರವಾಸೋಧ್ಯಮ ಇಲಾಖೆ ಉಪ ನಿರ್ದೇಶಕ ಜೆ.ಜನಾರ್ಧನ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಹಾಜನ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಸಹ ಪ್ರವಾಸಿಗರಿಗೆ ಗುಲಾಬಿ ನೀಡುವ ಮೂಲಕ ಅವರನ್ನು ಬರಮಾಡಿಕೊಂಡರು.

ಜಾನಪದ ಕಲಾ ತಂಡದ ಪ್ರದರ್ಶನ ನೋಡಿ ಹರ್ಷಚಿತ್ತರಾದರು. ಕೆಲ ವಿದೇಶಿ ಪ್ರವಾಸಿಗರು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಿ, ಎಲ್ಲರ ಗಮನ ಸೆಳೆದರು.

Translate »