ಜಗತ್ತಿನಾದ್ಯಂತ ಕೊರೊನಾ ನರ್ತನ: 79 ಲಕ್ಷ ದಾಟಿದ ಸೋಂಕು, 4.33 ಲಕ್ಷ ಬಲಿ!
ಮೈಸೂರು

ಜಗತ್ತಿನಾದ್ಯಂತ ಕೊರೊನಾ ನರ್ತನ: 79 ಲಕ್ಷ ದಾಟಿದ ಸೋಂಕು, 4.33 ಲಕ್ಷ ಬಲಿ!

June 15, 2020

ನವದೆಹಲಿ,ಜೂ.14-ಜಗತ್ತಿನಾದ್ಯಂತ ಕೊರೊನಾ ಮಹಾಮಾರಿ ತನ್ನ ನರ್ತನ ವನ್ನು ಮುಂದುವರೆಸಿದ್ದು ಸೋಂಕಿತರ ಸಂಖ್ಯೆ 79 ಲಕ್ಷ ದಾಟಿದ್ದು 4.33 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ವಿಶ್ವದಲ್ಲಿ ಸೋಂಕಿನ ಸಂಖ್ಯೆ 79,11, 909ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಸೋಂಕಿಗೆ 4,33,158 ಮಂದಿ ಬಲಿ ಯಾಗಿದ್ದಾರೆ. ಇನ್ನು ಸಾವಿನ ಪ್ರಮಾಣ ಮುಂದುವರೆಯಲಿದೆ. ಅಮೆರಿಕದಲ್ಲಿ 21.43 ಲಕ್ಷ ಮಂದಿ ಸೋಂಕಿಗೆ ತುತ್ತಾಗಿ ದ್ದಾರೆ. 1.17 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಬ್ರೆಜಿಲ್‍ನಲ್ಲಿ 8.51 ಲಕ್ಷ ಸೋಂಕು, 42 ಸಾವಿರ ಬಲಿ. ರಷ್ಯಾ 5.29 ಲಕ್ಷ ಸೋಂಕು. 7 ಸಾವಿರ ಬಲಿ. ಭಾರತದಲ್ಲಿ ಸೋಂಕಿತರ ಸಂಖ್ಯೆ 3.24 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು 9,247 ಮಂದಿ ಸಾವನ್ನಪ್ಪಿದ್ದಾರೆ. ಬ್ರಿಟನ್‍ನಲ್ಲಿ 2.95 ಲಕ್ಷ ಸೋಂಕು. 41 ಸಾವಿರ ಮಂದಿ ಸಾವು. ಸ್ಪೇನ್‍ನಲ್ಲಿ 2.90 ಲಕ್ಷ ಸೋಂಕು. 27 ಸಾವು. ಇಟಲಿಯಲ್ಲಿ ಸದ್ಯ ಸೋಂಕಿನ ಪ್ರಮಾಣ ಕಡಿಮೆ ಯಾಗಿದೆ. ಸದ್ಯ 2.36 ಲಕ್ಷ ಮಂದಿ ಸೋಂಕಿತರಿದ್ದು 34 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

Translate »