ಮೈಸೂರು,ಜೂ.14(ಪಿಎಂ)- ಮೈಸೂ ರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಮೈಸೂರು ಮಹಾನಗರ ಪಾಲಿಕೆ ವಾರ್ಡ್ 3ರ ರೈಲ್ವೆ ಬಡಾವಣೆಯ ಮುಖ್ಯ ರಸ್ತೆಯ 3, 4, 5 ಹಾಗೂ 6ನೇ ಅಡ್ಡರಸ್ತೆಗಳಿಗೆ ಮರು ಡಾಂಬರೀಕರಣ ಹಾಗೂ ಅಗತ್ಯ ವಿರುವೆಡೆ ಚರಂಡಿ ಮತ್ತು ಡೆಕ್‍ಸ್ಲ್ಯಾಬ್ ನಿರ್ಮಾಣ ಕಾಮಗಾರಿಗೆ ಶಾಸಕ ಎಲ್. ನಾಗೇಂದ್ರ ಭಾನುವಾರ ಚಾಲನೆ ನೀಡಿದರು.
ಎಸ್‍ಎಫ್‍ಸಿ (ರಾಜ್ಯ ಹಣಕಾಸು ಆಯೋಗ) ಶಾಸಕರ ವಿವೇಚನಾ ವಿಶೇಷ ಅನುದಾನದ 25 ಲಕ್ಷ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಈ ಕಾಮಗಾರಿಗೆ ವಾರ್ಡಿನ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್, ಸ್ಥಳೀಯ ಹಾಗೂ ಬಿಜೆಪಿ ಪಕ್ಷದ ಮುಖಂಡರ ಸಮ್ಮುಖದಲ್ಲಿ ಶಾಸ ಕರು ಗುದ್ದಲಿ ಪೂಜೆ ನೆರವೇರಿಸಿದರು.
ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮ ಶೇಖರ ರಾಜು, ಉಪಾಧ್ಯಕ್ಷ ಕುಮಾರ್‍ಗೌಡ, ಪ್ರಧಾನ ಕಾರ್ಯದರ್ಶಿ ಪುನೀತ್, ಮಹಿಳಾ ಮೋರ್ಚಾ ಅಧ್ಯಕ್ಷೆ ತನುಜಾ ಮಹೇಶ್, ಮುಖಂಡರಾದ ಸುಪ್ರೀಂ ಮಂಜು, ಶೋಭಾ, ಪದ್ಮ, ಶ್ರೀನಾಥ್, ರಾಮೇಗೌಡ, ಪ್ರೇಮ, ನರಸಿಂಹ, ಪಾಲಿಕೆ ವಲಯ ಕಚೇರಿ-5ರ ಸಹಾಯಕ ಆಯುಕ್ತ ವೀರೇಶ್, ಅಭಿವೃದ್ಧಿ ಅಧಿಕಾರಿ ಮನುಗೌಡ, ಇಂಜಿನಿಯರ್ ಮಹಾಂತೇಶ್ ಪಾಟೀಲ್ ಮತ್ತಿತರರಿದ್ದರು.