ಚೆನ್ನೈ ಅಧೀನ ನ್ಯಾಯಾಲಯದ ಮೂವರು ನ್ಯಾಯಾಧೀಶರಿಗೆ ಕೊರೊನಾ ಪಾಸಿಟಿವ್
ಮೈಸೂರು

ಚೆನ್ನೈ ಅಧೀನ ನ್ಯಾಯಾಲಯದ ಮೂವರು ನ್ಯಾಯಾಧೀಶರಿಗೆ ಕೊರೊನಾ ಪಾಸಿಟಿವ್

June 15, 2020

ಚೆನ್ನೈ, ಜೂ. 14- ತಮಿಳುನಾಡಿನಲ್ಲಿ ಮಹಾಮಾರಿ ಕೊರೊನಾ ವೈರಸ್ ತೀವ್ರ ವ್ಯಾಪಕವಾಗಿ ಹರಡುತ್ತಿದ್ದು, ನ್ಯಾಯಾಧೀಶರಿಗೂ ಕಂಟಕವಾಗಿ ಕಾಡುತ್ತಿದೆ. ಮದ್ರಾಸ್ ಹೈಕೋರ್ಟ್ ಕ್ಯಾಂಪಸ್‍ನಲ್ಲಿರುವ ಅಧೀನ ನ್ಯಾಯಾಲಯಗಳ ಮೂವರು ನ್ಯಾಯಾಧೀಶ ರಿಗೆ ಭಾನುವಾರ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಈ ಮೂವರು ನ್ಯಾಯಾಧೀ ಶರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಧೀನ ನ್ಯಾಯಾಲಯಗಳ ಕೆಲವು ಸಿಬ್ಬಂದಿಗೂ ಸಹ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಎಷ್ಟು ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಇತ್ತೀಚೆಗಷ್ಟೇ ಮದ್ರಾಸ್ ಹೈಕೋರ್ಟ್‍ನ ನಾಲ್ವರು ನ್ಯಾಯಾಧೀಶರಿಗೆ ಹಾಗೂ ಸಿಎಟಿಯ ಕೆಲವು ಸಿಬ್ಬಂದಿಗೂ ಕೊರೊನಾ ವಕ್ಕರಿಸಿತ್ತು. ತಮಿಳುನಾಡಿನಲ್ಲಿ ಇಂದು ಒಂದೇ ದಿನ ಮಹಾಮಾರಿ ಕೊರೊನಾ ವೈರಸ್‍ನಿಂದ 38 ಮಂದಿ ಮೃತಪಟ್ಟಿದ್ದು, 1974 ಮಂದಿಗೆ ಪಾಸಿಟಿವ್ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 44661ಕ್ಕೆ ಏರಿಕೆಯಾಗಿದೆ.

Translate »