ಕೆನಡಾ ವಾಟರ್ ನೆಕ್ಸ್ಟ್ ಪ್ರಶಸ್ತಿಗೆ ಹಾಸನದ ಚಿತ್ರಗೌಡ ಆಯ್ಕೆ
ಮೈಸೂರು

ಕೆನಡಾ ವಾಟರ್ ನೆಕ್ಸ್ಟ್ ಪ್ರಶಸ್ತಿಗೆ ಹಾಸನದ ಚಿತ್ರಗೌಡ ಆಯ್ಕೆ

June 15, 2020

ಬೆಂಗಳೂರು, ಜೂ. 14- ಕೆನಡಾ ವಾಟರ್ ಶೃಂಗ ಸಭೆಯು ಕೊಡ ಮಾಡುವ ವಾಟರ್ ನೆಕ್ಸ್ಟ್ 2020 ವಾರ್ಷಿಕ ಪ್ರಶಸ್ತಿಗೆ ಕನ್ನಡತಿ ಚಿತ್ರ ಗೌಡ ಆಯ್ಕೆಯಾಗಿದ್ದಾರೆ.

ನೀರಿನ ಕಾರ್ಯ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಯೋಜನೆಗಳ ಮೂಲಕ ಮಹತ್ವದ ಕೊಡುಗೆ ನೀಡಿದ ಸಾಧಕ ರನ್ನು ಗುರುತಿಸಿ ನೀಡುವ ಈ ಪ್ರಶಸ್ತಿ ಮೊಟ್ಟ ಮೊದಲ ಬಾರಿಗೆ ಕನ್ನಡಿಗರೊಬ್ಬರಿಗೆ ಸಂದಿ ರುವುದು ವಿಶೇಷವಾಗಿದೆ.

ಚಿತ್ರ ಗೌಡ, ಹಾಸನ ಜಿಲ್ಲೆ ಚನ್ನ ರಾಯಪಟ್ಟಣ ತಾಲ್ಲೂಕಿನ ತಗಡೂರು ಗ್ರಾಮದ (ಪುರುದೇಗೌಡರ ಮನೆ) ಡಾ.ಹಾಲಪ್ಪಗೌಡ ಮತ್ತು ರತ್ನಮ್ಮ ಅವರ ಪುತ್ರಿ. ಮೈಸೂರಿನ ಜೆಎಸ್‍ಎಸ್ ಕಾಲೇಜಿನಲ್ಲಿ ಪರಿಸರ ಎಂಜಿನಿಯ ರಿಂಗ್ ಮುಗಿಸಿದ ಚಿತ್ರ, ಉದ್ಯೋಗ ನಿಮಿತ್ತ ಕೆನಡಾದಲ್ಲಿ ನೆಲೆಸಿದ್ದಾರೆ.

ನೀರು ಸಂರಕ್ಷಣೆ, ಜಲಾನಯನ ಮೇಲ್ವಿ ಚಾರಣೆ ಮತ್ತು ಯೋಜನೆ, ಹವಾ ಮಾನ ಬದಲಾವಣೆಯ ಮೌಲ್ಯಮಾಪನ, ನೀರಿನ ನೀತಿಗೆ ಸಂಬಂಧಿಸಿದ ಕಾರ್ಯ ಕ್ರಮಗಳ ಸಂಬಂಧಿಸಿದಂತೆ ಕೆನಡಾ ದಲ್ಲಿ ಪ್ರಾಂತೀಯ ಸರ್ಕಾರ, ಪುರಸಭೆ ಮತ್ತು ಸಂಘ ಸಂಸ್ಥೆಗಳ ಜೊತೆಯಲ್ಲಿ ಸುಮಾರು 20 ವರ್ಷಗಳಿಂದ ಚಿತ್ರ ಕೆಲಸ ಮಾಡುತ್ತಿದ್ದಾರೆ. ಪ್ರಶಸ್ತಿಗೆ ಭಾಜನ ರಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ರುವ ಚಿತ್ರ, ಈ ಸಾಧನೆ ಗೌರವವನ್ನು ತಂದೆ ಹಾಲಪ್ಪಗೌಡ ಅವರಿಗೆ ಸಮ ರ್ಪಣೆ ಮಾಡುವುದಾಗಿ ತಿಳಿಸಿದ್ದಾರೆ.

Translate »