ಮೈಸೂರು,ಜೂ.14(ಪಿಎಂ)- `ಅಂಬಾರಿ’ ಮೈಸೂರಿನ ಸಾಂಸ್ಕೃತಿಕತೆ ಹಾಗೂ ಪರಂ ಪರೆಯ ವೈಭವದ ಸಂಕೇತ. ಇದೀಗ ಇದೇ ಹೆಸರಿನಲ್ಲಿ ಮೈಸೂರಿನಲ್ಲಿ ಶುಭ ಸಮಾ ರಂಭಗಳಿಗಾಗಿ ಸುಸಜ್ಜಿತ ಹಾಗೂ ಸುಂದರ ಸಭಾಂಗಣ ನಿರ್ಮಾಣಗೊಂಡಿದ್ದು, ಆ ಮೂಲಕ ಅರಮನೆಗಳ ನಗರಿ ಮೈಸೂ ರಿಗೆ ಮತ್ತೊಂದು ಹಿರಿಮೆ ಬಂದಂತಾಗಿದೆ.
ಇಂತಹ ವೈಶಿಷ್ಟ್ಯ ಹೊಂದಿರುವ ಸಭಾಂ ಗಣವೇ `ಅಂಬಾರಿ ಕನ್ವೆನ್‍ಷನ್ ಹಾಲ್’. ವಿಶ್ವೇಶ್ವರನಗರದ ಸ್ಟರ್ಲಿಂಗ್ ಟಾಕೀಸ್ ರಸ್ತೆಯಲ್ಲಿ ಮಹರ್ಷಿ ಪಬ್ಲಿಕ್ ಸ್ಕೂಲ್ ಎದುರು ಅಂಬಾರಿ ಕನ್ವೆನ್‍ಷನ್ ಹಾಲ್ (ಎ/ಸಿ) ಪ್ರಸ್ತು ತಕ್ಕೆ ಅನುಗುಣವಾಗಿ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ ಹಾಗೂ ಸುಂದರವಾಗಿ ನಿರ್ಮಾಣವಾಗಿದೆ. ಭಾನು ವಾರ ನಡೆದ ಸರಳ ಸಮಾರಂಭದಲ್ಲಿ ಮಾಜಿ ಸಚಿವರೂ ಆದ ಶಾಸಕ ಎಸ್.ಎ. ರಾಮದಾಸ್, ಮತ್ತೊಬ್ಬ ಮಾಜಿ ಸಚಿ ವರೂ ಆದ ಶಾಸಕ ಸಾ.ರಾ.ಮಹೇಶ್ ಜೊತೆಗೂಡಿ ಟೇಪ್ ಕತ್ತರಿಸುವ ಮೂಲಕ ಅಂಬಾರಿ ಹಾಲ್ ಉದ್ಘಾಟಿಸಿದರು.
ಸಂಸದರಾದ ವಿ.ಶ್ರೀನಿವಾಸ ಪ್ರಸಾದ್, ಪ್ರತಾಪ್ ಸಿಂಹ, ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ, ಶಾಸಕರಾದ ಎಲ್.ನಾಗೇಂದ್ರ, ಸಿ.ಎಸ್.ನಿರಂಜನ್‍ಕುಮಾರ್, ಹರ್ಷವರ್ಧನ್, ಹೆಚ್.ಪಿ. ಮಂಜುನಾಥ್, ಅನಿಲ್ ಚಿಕ್ಕಮಾದು, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಮಾಜಿ ಶಾಸಕ ಚಿಕ್ಕಣ್ಣ, ಜಿಪಂ ಸದಸ್ಯ ಮಾದೇಗೌಡ, ಮಾಜಿ ಮೇಯರ್ ಗಳಾದ ಸಂದೇಶ್‍ಸ್ವಾಮಿ, ಪುರುಷೋತ್ತಮ್, ಬಿ.ಎಲ್.ಭೈರಪ್ಪ, ಪಾಲಿಕೆ ಸದಸ್ಯ ಶ್ರೀನಿವಾಸ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್, ಎಸಿಪಿಗಳಾದ ಪೂರ್ಣ ಚಂದ್ರ ತೇಜಸ್ವಿ, ಶಿವಶಂಕರ್ ಸೇರಿದಂತೆ ಮತ್ತಿತರ ಗಣ್ಯರು ಸಭಾಂಗಣಕ್ಕೆ ಭೇಟಿ ನೀಡಿ ಶುಭ ಕೋರಿದರು.
ಅಂಬಾರಿ ಕನ್ವೆನ್‍ಷನ್ ಹಾಲ್ ಮೈಸೂ ರಿನ ಅತೀ ದೊಡ್ಡ 2ನೇ ಹವಾನಿಯಂ ತ್ರಿತ ಸಭಾಂಗಣ ಎಂಬ ಹೆಗ್ಗಳಿಕೆಗೆ ಭಾಜನ ವಾಗುವ ಮೂಲಕ ಆಕರ್ಷಣೆಗೆ ಒಳಗಾಗಿದೆ. 600ಕ್ಕೂ ಹೆಚ್ಚು ಮಂದಿ ಆಸೀನರಾಗುವ ವಿಶಾಲ ಹವಾನಿಯಂತ್ರಿತ ವ್ಯವಸ್ಥೆ ಹೊಂದಿ ರುವ ಅಂಬಾರಿ, 450ಕ್ಕೂ ಹೆಚ್ಚು ಮಂದಿ ಏಕಕಾಲದಲ್ಲಿ ಭೋಜನ ಸವಿಯುವ ಡೈನಿಂಗ್ ಹಾಲ್ ಕೂಡ ಹೊಂದಿದೆ. ವಧು-ವರರ ಕೊಠಡಿಗಳು ಸೇರಿದಂತೆ 4 ಎಸಿ ಕೊಠಡಿ ಸೌಲಭ್ಯವಿದ್ದು, ಒಟ್ಟಾರೆ ಸುಸಜ್ಜಿತ 13 ಕೊಠಡಿ ಗಳು ಇಲ್ಲಿವೆ. ಸುಮಾರು 2 ಸಾವಿರ ಮಂದಿಗೆ ಅಡುಗೆ ಮಾಡುವಷ್ಟು ಪಾತ್ರೆ, ಗ್ಯಾಸ್ ಸಂಪರ್ಕ, ಶುದ್ಧೀಕರಿಸಿದ ಕುಡಿಯುವ ನೀರು ಸೌಲಭ್ಯ ಕಲ್ಪಿಸಲಾಗಿದೆ. ಪ್ಲಾಸ್ಟಿಕ್ ಮುಕ್ತ ಗೊಳಿಸಲಾಗಿದ್ದು, ಪರಿಸರಕ್ಕೆ ಪೂರಕ ವಾತಾವರಣಕ್ಕೆ ಇಲ್ಲಿ ಒತ್ತು ನೀಡಲಾಗಿದೆ. ಫೋಟೋ ಶೋಟ್‍ಗೆ ಹಚ್ಚಹಸಿರಿನ ಆಕರ್ಷಕ ಉದ್ಯಾನವನ ನಿರ್ಮಿಸಲಾಗಿದೆ. ವಾಹನ ನಿಲುಗಡೆಗೆ ಅನುಕೂಲಕರ ಸ್ಥಳ ದಲ್ಲಿ ಪಾರ್ಕಿಂಗ್‍ಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಅಂಬಾರಿ ಕನ್ವೆನ್‍ಷನ್ ಹಾಲ್ ಮಾಲೀಕ ರಾದ ಸ್ವೀಟ್ ಮಹೇಶ್, ವಿ.ಮಹದೇವ್, ಮಹಾಲಕ್ಷ್ಮೀ ಸ್ವೀಟ್ಸ್ ಮಾಲೀಕ ಶಿವ ಕುಮಾರ್ ಹಾಗೂ ಇವರ ಪುತ್ರ ನಿತೀನ್ ಶಿವಕುಮಾರ್ ಸೇರಿದಂತೆ ಇವರ ಕುಟುಂಬ ವರ್ಗದವರು ಹಾಜರಿದ್ದರು.
ಸಹೋದರರು ನಿರ್ಮಿಸಿದ ಅಂಬಾರಿ!
ಅಂಬಾರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಸ್ವೀಟ್ ಮಹೇಶ್ ಹಾಗೂ ಅನಘ ಹಾಸ್ಪೆಟಲ್ ನಿರ್ದೇಶಕ ವಿ.ಮಹದೇವ್ ಅವರ ಮಾಲೀಕತ್ವದಲ್ಲಿ ಈ ಅಂಬಾರಿ ಕನ್ವೆನ್‍ಷನ್ ಹಾಲ್ ನಿರ್ಮಾಣಗೊಂಡಿದೆ. ಸ್ವೀಟ್ ಮಹೇಶ್ ಹಾಗೂ ವಿ.ಮಹದೇವ್ ಸಹೋದರರಾಗಿದ್ದು, ಇವರ ಮತ್ತೊಬ್ಬ ಸಹೋದರ ಶಿವಕುಮಾರ್ `ಮಹಾಲಕ್ಷ್ಮೀ ಸ್ವೀಟ್’ ಹುಟ್ಟು ಹಾಕಿ ನಾಡಿನಾದ್ಯಂತ ಖ್ಯಾತನಾಮರಾಗಿದ್ದಾರೆ.
ಲಾಕ್‍ಡೌನ್ ಅವಧಿಯಲ್ಲಿ ಈ ಮೂವರು ಸಹೋದರರು ಹಲವು ಸೇವಾ ಕಾರ್ಯದ ಮೂಲಕ ಸಂಕಷ್ಟದಲ್ಲಿದ್ದ ಜನತೆಗೆ ನೆರವಾಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸಭಾಂಗಣದಲ್ಲಿ ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಅಲ್ಲಲ್ಲಿ ಸ್ಯಾನಿಟೈಸರ್‍ಗೆ ವ್ಯವಸ್ಥೆ ಮಾಡಲಾಗಿದೆ. ಆಯಾಯ ಸಂದರ್ಭದಲ್ಲಿ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸುವ ಮಾರ್ಗಸೂಚಿ ಗಳ ಅನ್ವಯ ಎಲ್ಲಾ ವ್ಯವಸ್ಥೆಯೊಂದಿಗೆ ಜನತೆಗೆ ಸೇವೆ ನೀಡಲು ಸಭಾಂಗಣ ಸುಜ್ಜಗೊಂಡಿದೆ. ಸರ್ಕಾರದ ನಿಯಮದಡಿಯೇ ಕೈಗೆಟಕುವ ದರದಲ್ಲಿ ಬಾಡಿಗೆಗೆ ಸಭಾಂಗಣ ದೊರೆಯಲಿದ್ದು, ಮದುವೆ, ನಿಶ್ಚಿತಾರ್ಥ, ಹುಟ್ಟುಹಬ್ಬ ಸೇರಿದಂತೆ ಶುಭ ಸಮಾರಂಭಕ್ಕೆ 0821-4242808 ಅನ್ನು ಸಂಪರ್ಕಿಸಬಹುದು.