ಇನ್ನು ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪಾರುಪತ್ಯ
News

ಇನ್ನು ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪಾರುಪತ್ಯ

September 4, 2022

ಬೆಂಗಳೂರು, ಸೆ. 3(ಕೆಎಂಶಿ)- ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಂತರ ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಈಗ ತಮ್ಮ ಶಕ್ತಿ ಪ್ರದರ್ಶ ನಕ್ಕೆ ಮುಂದಾಗಿದ್ದಾರೆ. ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿಕೊಂಡರೂ, ರಾಜ್ಯ ಬಿಜೆಪಿಯಲ್ಲಿ ನನ್ನದೇ ಪಾರುಪತ್ಯ ಎಂದು ಬಿಂಬಿಸಲು ಯಡಿಯೂರಪ್ಪ ತಮ್ಮ ತವರು ಜಿಲ್ಲೆಯಲ್ಲಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದಾರೆ.

ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‍ಷಾ ತಮಗೆ ಪಕ್ಷದಲ್ಲಿ ನೀಡುತ್ತಿರುವ ಆದ್ಯತೆ ಯಿಂದ ಬೀಗಿರುವ ಅವರು ಶಕ್ತಿ ಪ್ರದರ್ಶನದ ಮೂಲಕ ತಮ್ಮನ್ನು ವಿರೋಧಿಸುವ ರಾಜ್ಯ ಬಿಜೆಪಿಯ ಒಂದು ವರ್ಗಕ್ಕೂ ಚಾಟಿ ಬೀಸಲು ಹೊರಟಿದ್ದಾರೆ. ಈ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಗುರುವಾರ ಮಂಗಳೂರಿನಲ್ಲಿ ಮೋದಿ ಅವರ ಸಮ್ಮುಖದಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲೇ ಯಡಿಯೂರಪ್ಪ, ಪ್ರಧಾನಿಗೆ ಆಹ್ವಾನ ನೀಡಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಪ್ರಧಾನಿಯವರು ಅಕ್ಟೋಬರ್ ತಿಂಗಳಲ್ಲಿ ಮತ್ತೆ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದು, ತಮ್ಮ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಸಂಸದೀಯ ಮಂಡಳಿಯಲ್ಲಿ ತಮಗೆ ಸ್ಥಾನಮಾನ ಕಲ್ಪಿಸಿರುವುದಕ್ಕೆ ಪ್ರಧಾನಿಯವರನ್ನು ಕಾರ್ಯಕರ್ತರ ಸಮ್ಮುಖ ದಲ್ಲೇ ಸನ್ಮಾನಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಪಕ್ಷ ತಮಗೆ ನೀಡಿರುವ ಗೌರವಕ್ಕೆ ಪ್ರತಿ ಗೌರವ ಸಲ್ಲಿಸುತ್ತಿದ್ದಾರೆ. ಸಾರ್ವಜನಿಕರ ಸಭೆಯಲ್ಲೇ ಪಕ್ಷವನ್ನು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಭರವಸೆಯನ್ನು ಪ್ರಧಾನಿಯವರಿಗೆ ನೀಡಲಿದ್ದಾರಂತೆ.
ಮಂಗಳೂರಿನಲ್ಲಿ ನಡೆದ ಮುಖಂಡರ ಸಭೆಯಲ್ಲಿ ಪ್ರಧಾನಿ ಯವರು, ಯಡಿಯೂರಪ್ಪನವರಿಗೆ ಹೆಚ್ಚಿನ ಆದ್ಯತೆ ನೀಡಿದ್ದ ರಿಂದ ಅತ್ಯಂತ ಉಲ್ಲಾಸದಲ್ಲಿರುವ ಅವರು, ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ. ಪ್ರಧಾನಿಯವರು ನಿನ್ನೆಯ ಸಭೆಯಲ್ಲಿ ಜನರ ನಾಡಿಮಿಡಿತ ಹಿಡಿಯುವಲ್ಲಿ ವಿಫಲ ರಾಗಿದ್ದೀರಿ ಎಂಬುದನ್ನು ರಾಜ್ಯ ನಾಯಕರಿಗೆ ತಿಳಿಸಿದ್ದಲ್ಲದೆ, ಕರ್ನಾಟಕದ ಮತದಾರರು ಬಿಜೆಪಿ ಪರ ಇದ್ದಾರೆ ಎನ್ನುವು ದಕ್ಕೆ ಇಂದಿನ ಸಮಾವೇಶವೇ ಸಾಕ್ಷಿ. ನೀವು ಇದನ್ನು ಅರಿತು ಸರ್ಕಾರ ಕಾರ್ಯಕ್ರಮಗಳನ್ನು ನೀಡಬೇಕು, ಅವು ಜನರ ಮನೆಬಾಗಿಲಿಗೆ ತಲುಪುವಂತಾಗಬೇಕು ಎಂದು ತಿಳಿಸಿದ್ದಾರೆ.

Translate »