10 ಸಾವಿರ ಶಾಲಾ ಮಕ್ಕಳಿಗೆ ಪ್ರಧಾನಿ ಮೋದಿಯೊಂದಿಗೆ ಯೋಗಾ ಯೋಗ
ಮೈಸೂರು

10 ಸಾವಿರ ಶಾಲಾ ಮಕ್ಕಳಿಗೆ ಪ್ರಧಾನಿ ಮೋದಿಯೊಂದಿಗೆ ಯೋಗಾ ಯೋಗ

June 9, 2022

ಮೈಸೂರು,ಜೂ.8(ಎಂಟಿವೈ)- ಜೂ.21ರಂದು ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿವಿಧ ಶಾಲೆಗಳಿಂದ 10 ಸಾವಿರ ಅತ್ಯುತ್ತಮ ಯೋಗಪಟುಗಳನ್ನು ಆಯ್ಕೆ ಮಾಡುವಂತೆ ಸೂಚಿಸಲಾಗಿದ್ದು, ಅದಕ್ಕಾಗಿ ಮೈಸೂ ರಿನ ಶಾಲೆಗಳಲ್ಲಿ ಯೋಗಾಭ್ಯಾಸ ಆರಂಭವಾಗಿದೆ.

ಅರಮನೆ ಮುಂಭಾಗದ ಪ್ರಾಂಗಣದಲ್ಲಿ ನಡೆಯುವ ಯೋಗ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು, ಭದ್ರತಾ ದೃಷ್ಟಿಯಿಂದ ಅರಮನೆ ಆವರಣದಲ್ಲಿ ಪ್ರಧಾನಿ ಅವರೊಂದಿಗೆ 15 ಸಾವಿರ ಮಂದಿಯಷ್ಟೇ ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದರಲ್ಲೂ 10 ಸಾವಿರ ಶಾಲಾ ಮಕ್ಕಳಿಗೆ ಅವಕಾಶ ಕಲ್ಪಿಸುವಂತೆ ಪ್ರಧಾನಮಂತ್ರಿಗಳ ಕಚೇರಿಯ ಆದೇಶವಾಗಿರುವುದರಿಂದ ಇದೀಗ ಮೈಸೂರು ನಗರ ವ್ಯಾಪ್ತಿಗೆ ಒಳಪಡುವ ಶಾಲೆಗಳಿಗೆ ಡಿಡಿಪಿಐ ರಾಮ ರಾಜೇಅರಸ್ ಸೂಚನೆ ನೀಡಿದ್ದು,ಯೋಗ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವಂತೆ ಆದೇಶಿಸಿದ್ದಾರೆ. ಈಗಾ ಗಲೇ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಆರಂಭಿಸಲಾಗಿದೆ. ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಯೋಗಪಟುಗಳ ಮಾತ್ರ ಆಯ್ಕೆ ಮಾಡುವುದಾಗಿ ತಿಳಿಸಿರುವುದರಿಂದ ಪ್ರಧಾನಮಂತ್ರಿ ಗಳೊಂದಿಗೆ ಕಾರ್ಯಕ್ರಮ ದಲ್ಲಿ ಯೋಗ ಪ್ರದರ್ಶನ ನೀಡುವ ಅವಕಾಶ ಗಿಟ್ಟಿಸಿಕೊಳ್ಳಲು ಮಕ್ಕಳು ಪೈಪೋಟಿಗಿಳಿದಿದ್ದಾರೆ.

ಜೂ.13ರ ನಂತರ ಸ್ಪಷ್ಟಚಿತ್ರಣ: ಡಿಡಿಪಿಐ ರಾಮರಾಜೇ ಅರಸ್ `ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿ, ಯೋಗ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂದೇಶ ಬಂದಿದೆ. ಅದಕ್ಕಾಗಿ ಮೈಸೂರು ನಗರ ಶಾಲೆಗಳ ಮುಖ್ಯಸ್ಥರಿಗೆ ವಿದ್ಯಾರ್ಥಿಗಳನ್ನು ಯೋಗ ಕಾರ್ಯಕ್ರಮಕ್ಕೆ ಸಜ್ಜುಗೊಳಿಸುವಂತೆ ಸೂಚಿಸ ಲಾಗಿದೆ. ಅತ್ಯುತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳನ್ನು ಅಂತಿಮವಾಗಿ ಆಯ್ಕೆ ಮಾಡ ಲಾಗುತ್ತದೆ. ಎಷ್ಟು ವಿದ್ಯಾರ್ಥಿಗಳಿಗೆ ಅವಕಾಶ ಲಭಿಸಲಿದೆ ಎಂದು ಜೂ.13ರ ನಂತರ ಸ್ಪಷ್ಟವಾಗಲಿದೆ. ಆದರೂ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದರು.

Translate »