ಭಜರಂಗಿ 2 ಚಿತ್ರದಲ್ಲಿ ಯೋಗಿ ಬಾಬು
ಸಿನಿಮಾ

ಭಜರಂಗಿ 2 ಚಿತ್ರದಲ್ಲಿ ಯೋಗಿ ಬಾಬು

August 30, 2020

ತಮಿಳು ಚಿತ್ರರಂಗದಲ್ಲಿ ಜನಪ್ರಿಯ ನಟನಾಗಿ ಗುರುತಿಸಿಕೊಂಡಿರುವ ಯೋಗಿ ಬಾಬು ಅವರು ಭಜರಂಗಿ 2 ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿಯೇ ನೆಲೆಸಿರುವ ಅವರು ಪುನೀತ್ ರಾಜ್‍ಕುಮಾರ್, ದುನಿಯಾ ವಿಜಯ್, ಶಿವರಾಜ್‍ಕುಮಾರ್ ಅವರನ್ನು ಭೇಟಿ ಮಾಡಿದ್ದು, ಅವರು ಯಾವ ಚಿತ್ರದ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ ಎಂಬುದಕ್ಕೆ ಉತ್ತರ ದೊರೆತಿದೆ. ಯೋಗಿ ಬಾಬು ಅವರು ಕನ್ನಡದಲ್ಲಿ ಎ.ಹರ್ಷ ಅವರ ನಿರ್ದೇಶನದ ಭಜರಂಗಿ 2 ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ಕೊನೆಯ ಹಂತದ ಶೂಟಿಂಗ್ ಈಗ ಭರದಿಂದ ನಡೆಯುತ್ತಿದೆ.

ತಮಿಳು ನಟ ಯೋಗಿ ಬಾಬು ಅವರು ಭಜರಂಗಿ 2 ಚಿತ್ರದ ಚಿತ್ರೀಕರಣಕ್ಕಾಗಿ ಅಲಸೂರಿನಿಂದ ಮೋಹನ್ ಬಿ ಕೆರೆ ಸ್ಟುಡಿಯೊಕ್ಕೆ ಪ್ರತಿದಿನವೂ ಪ್ರಯಾಣಿಸುತ್ತಿz್ದÁರೆ. ನಟ ಶಿವರಾಜ್‍ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಜಯಣ್ಣ ಫಿಲಂಸ್ ಅಡಿಯಲ್ಲಿ ಈ ಚಿತ್ರ ತಯಾರಾಗುತ್ತಿದೆ. ಭಾವನಾ ಇಲ್ಲಿ ನಾಯಕಿಯಾಗಿ ನಟಿಸುತ್ತಿz್ದÁರೆ. ಭಜರಂಗಿ ಚಿತ್ರದ ಮುಂದುವರಿದ ಭಾಗವಿದು ಎನ್ನಲಾಗಿದೆಯಾದರೂ, ಇಲ್ಲಿ ಶಿವಣ್ಣ ಅವರ ಪಾತ್ರ ಹೇಗೆ ಮುಂದುವರಿಯುತ್ತೆ ಎಂಬುದನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ. ಇದರಲ್ಲಿ ಯೋಗಿ ಬಾಬು ಅವರ ಪಾತ್ರ ಏನಾಗಿರುತ್ತದೆ ಎಂಬುದು ಸಹ ಬಹಿರಂಗವಾಗಿಲ್ಲ.

Translate »