ನೀನು ದೇಶದ್ರೋಹಿ: ಡಿಕೆಶಿ ನಿಮ್ಮಪ್ಪ ದೇಶದ್ರೋಹಿ: ಈಶ್ವರಪ್ಪ
ಮೈಸೂರು

ನೀನು ದೇಶದ್ರೋಹಿ: ಡಿಕೆಶಿ ನಿಮ್ಮಪ್ಪ ದೇಶದ್ರೋಹಿ: ಈಶ್ವರಪ್ಪ

February 17, 2022

ಬೆಂಗಳೂರು, ಫೆ. ೧೬- ನೀನು ದೇಶದ್ರೋಹಿ…, ನಿಮ್ಮಪ್ಪ ದೇಶದ್ರೋಹಿ… ಇದು ಹಳ್ಳಿಯ ಬೀದಿಯಲ್ಲಿ ಕೇಳಿ ಬಂದ ಮಾತಲ್ಲ…! ವಿಧಾನಸಭೆ ಕಲಾಪದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಗ್ರಾಮೀಣಾ ಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಬೈದಾಟ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರಿಬ್ಬರೂ ತಮ್ಮ ಸ್ಥಾನಮಾನದ ಘನತೆ-ಗೌರವ ಮರೆತು ವಾಕ್ಸಮರದ ಜೊತೆಗೆ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿ ದ್ದರಿಂದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯ ವರು ಸಭೆಯನ್ನು ಮುಂದೂಡುವAತಹ ವಾತಾವರಣ ನಿರ್ಮಾಣವಾಯಿತು. ಸಭೆ ಮುಂದೂಡಿ ಮೈಕ್ ಸಂಪರ್ಕ ಕಡಿತಗೊಂಡ ನಂತರವೂ ಇವರಿಬ್ಬರ ವಾಗ್ವಾದ ಹತೋಟಿಗೇ ಬರಲಿಲ್ಲ. ಕೊನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಬ್ಬರನ್ನೂ ಸಮಾಧಾನಪಡಿಸಿದರಾದರೂ, ಸಭಾಂಗಣದಿAದ ಹೊರ ನಡೆಯುವಾಗಲೂ ಈಶ್ವರಪ್ಪ ಮತ್ತು ಡಿ.ಕೆ.ಶಿವಕುಮಾರ್ ಕೂಗಾಡುತ್ತಲೇ ಹೊರನಡೆದರು.

ಆಗಿದ್ದಿಷ್ಟು: ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸು ತ್ತೇವೆ ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆಯನ್ನು ಮುಂದಿಟ್ಟು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡಿಸಿ, ಈಶ್ವರಪ್ಪನವರು ದೇಶ ದ್ರೋಹಿ ಹೇಳಿಕೆ ನೀಡಿದ್ದು, ಅವರನ್ನು ಸಂಪುಟದಿAದ ವಜಾ ಮಾಡಬೇಕು ಎಂದು ಆಗ್ರಹಿಸುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು, “ಈಶ್ವರಪ್ಪನವರೂ ಕೂಡ ಇಲ್ಲೇ ಇದ್ದಾರೆ. ಅವರು ನೀಡಿದ್ದ ಹೇಳಿಕೆ ಬಗ್ಗೆ ಅವರಿಂದ ಅಭಿಪ್ರಾಯ ಪಡೆಯೋಣ” ಎಂದು ಸಿದ್ದರಾಮಯ್ಯ ನವರಿಗೆ ಹೇಳುತ್ತಿದ್ದಂತೆಯೇ ಡಿ.ಕೆ. ಶಿವಕುಮಾರ್, ದೇಶ ದ್ರೋಹ ಮಾಡಿದವರಿಂದ ಏನು ಅಭಿಪ್ರಾಯ ಕೇಳುತ್ತೀರಿ? ಎಂದು ಸಭಾಧ್ಯಕ್ಷರನ್ನು ಪ್ರಶ್ನಿಸಿದರು. ಸಿದ್ದರಾಮಯ್ಯ ಮಾತನಾಡುವಾಗ ಮೌನ ವಹಿಸಿದ್ದ ಈಶ್ವರಪ್ಪ, ಡಿ.ಕೆ. ಶಿವಕುಮಾರ್ ಪ್ರಶ್ನಿಸುತ್ತಿದ್ದಂತೆಯೇ ಕೆರಳಿ ಕೆಂಡವಾದರು. “ದೇಶದ್ರೋಹಿ ಅವನು (ಡಿಕೆಶಿ), ಜೈಲಿಗೆ ಹೋಗಿ ಬಂದವನು ನನಗೇನು ಹೇಳುವುದು? ನೀನು ಬೇಲ್ ಮೇಲೆ ಇದ್ದೀಯಾ, ರಾಷ್ಟçದ್ರೋಹಿ ನೀನು. ನನಗೆ ಹೇಳಲು ಬರಬೇಡ” ಎಂದು ಆರ್ಭಟಿಸಿ ದರು. ಆಗ ಡಿಕೆಶಿ “ನೀನು ದೇಶದ್ರೋಹಿ” ಎಂದು ಪುನರುಚ್ಛರಿಸಿದಾಗ ಮತ್ತಷ್ಟು ಕೆರಳಿದ ಈಶ್ವರಪ್ಪ, “ನಿಮ್ಮಪ್ಪ ದೇಶದ್ರೋಹಿ” ಎಂದು ಆರ್ಭಟಿಸಿದರು.

ಈ ವೇಳೆ ಸಿದ್ದರಾಮಯ್ಯ ಬಳಿ ಕೆಲ ಕ್ಷಣ ಗುಸು ಗುಸು ಮಾತನಾಡಿದ ಡಿಕೆಶಿ, ಆಕ್ರೋಶಭರಿತರಾಗಿ ತಮ್ಮ ಸ್ಥಾನದಿಂದ ಎದ್ದು ಈಶ್ವರಪ್ಪನವರೆಡೆಗೆ ಬಿರು ಸಾಗಿ ಧಾವಿಸಿದರು. ಇವರ ಆಕ್ರೋಶವನ್ನು ಕಂಡ ಸಭಾಧ್ಯಕ್ಷರು “ಡಿ.ಕೆ. ಶಿವಕುಮಾರ್ ನಿಮ್ಮ ಸ್ಥಾನಕ್ಕೆ ಹೋಗಿ ಕುಳಿತುಕೊಳ್ಳಿ.

ನೀವು ಒಂದು ಪಕ್ಷದ ಅಧ್ಯಕ್ಷರು, ಹೀಗೆ ನಡೆದುಕೊಳ್ಳುವುದು ಸರಿಯಲ್ಲ ಎಂದು ಪದೇ ಪದೆ ಹೇಳುತ್ತಿದ್ದರಾದರೂ ಅದನ್ನು ಲೆಕ್ಕಿಸದ ಡಿಕೆಶಿ, ಈಶ್ವರಪ್ಪನವರ ಮುಂದೆ ಹೋಗಿ ನಿಂತು ವಾಗ್ದಾಳಿ ನಡೆಸಿದರು. ಇವರಿಗೆ ಕಾಂಗ್ರೆಸ್ ಸದಸ್ಯರು ಸಾತ್ ನೀಡಿದರೆ, ಅತ್ತ ಈಶ್ವರಪ್ಪ ಬೆನ್ನಿಗೆ ಸಚಿವರು ಹಾಗೂ ಬಿಜೆಪಿ ಶಾಸಕರು ನಿಂತರು. ಸದನ ಗದ್ದಲದಲ್ಲಿ ಮುಳುಗಿ ಈ ಸಂದರ್ಭದಲ್ಲಿ ಸಭೆಯನ್ನು ನಿಯಂತ್ರಣಕ್ಕೆ ತರಲಾಗದೇ ಸಭಾಧ್ಯಕ್ಷರು ಮಧ್ಯಾಹ್ನ ೩ ಗಂಟೆಗೆ ಸಭೆಯನ್ನು ಮುಂದೂಡಿರುವುದಾಗಿ ಘೋಷಿಸಿ ಹೊರ ನಡೆದರು. ಇದಕ್ಕೂ ಮುನ್ನಾ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವು ದಾಗಿ ಈಶ್ವರಪ್ಪ ನೀಡಿದ ಹೇಳಿಕೆ ಸಂಬAಧ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು. ಸಭಾಧ್ಯಕ್ಷರು ಪ್ರಸ್ತಾವನೆಗೆ ಅವಕಾಶ ನೀಡಿದಾಗ ಮಾತನಾಡಿದ ಸಿದ್ದರಾಮಯ್ಯ, ಈಶ್ವರಪ್ಪ ಅವರ ಹೇಳಿಕೆ ಪ್ರಿವೆನ್ಷನ್ ಆಫ್ ಇನ್ಸಲ್ಟ್ ಟು ನ್ಯಾಷನಲ್ ಆರ‍್ಸ್ ಆಕ್ಟ್ ೧೯೭೧ ಸೆಕ್ಷನ್ ೨ರ ಪ್ರಕಾರ ರಾಷ್ಟçದ್ರೋಹವಾಗಿದ್ದು, ೩ ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ ಎಂದರಲ್ಲದೇ, ಕೂಡಲೇ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಈಶ್ವರಪ್ಪ ಅವರನ್ನು ಸಂಪುಟದಿAದ ವಜಾಗೊಳಿಸಬೇಕು ಹಾಗೂ ಅವರ ವಿರುದ್ಧ ರಾಷ್ಟçದ್ರೋಹದ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು. ಯಾರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯುತ್ತಿರಲಿಲ್ಲ. ಆಗ ಮಧ್ಯ ಪ್ರವೇಶಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ. ಮಾಧುಸ್ವಾಮಿ, ರಾಷ್ಟçಧ್ವಜಕ್ಕೆ ಅಪಮಾನ ಮಾಡುವ ಹೇಳಿಕೆಯನ್ನು ಈಶ್ವರಪ್ಪ ನೀಡಿಲ್ಲ. ನೀವು ಮಾಧ್ಯಮದ ವರದಿಗಳನ್ನಾಧರಿಸಿ ಆರೋಪ ಮಾಡುತ್ತಿದ್ದೀರಿ. ಸಚಿವರ ಪೂರ್ಣ ಹೇಳಿಕೆಯನ್ನು ಕೇಳಿದರೆ ಸತ್ಯಾಂಶ ತಿಳಿಯುತ್ತದೆ ಎಂದರು. ಯಾವುದೇ ಕಾಲದಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದರೆ ನಗುತ್ತಿದ್ದರು. ಆದರೆ, ಈಗ ಹಿಂದುತ್ವ ತನ್ನ ಶಕ್ತಿ ತೋರಿಸಿಲ್ಲವೇ? ಹಾಗೆಯೇ ಮುಂದೊAದು ದಿನ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸಬಹುದು. ಅದಕ್ಕೆ ೨೦೦ ಅಥವಾ ೫೦೦ ವರ್ಷ ಆಗಬಹುದು. ನಾವೆಲ್ಲಾ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿದ್ದೇವೆ. ಸಂವಿಧಾನ ಮತ್ತು ತ್ರಿವರ್ಣ ಧ್ವಜವನ್ನು ಒಪ್ಪಿಕೊಂಡಿದ್ದೇವೆ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಹೇಗೆ ರಾಷ್ಟçದ್ರೋಹಿ ಹೇಳಿಕೆಯಾಗುತ್ತದೆ. ಎಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ಪ್ರಶ್ನಿಸಿದರು. ಈ ವೇಳೆ ಸಭಾಧ್ಯಕ್ಷರು ಈಶ್ವರಪ್ಪನವರ ಅಭಿಪ್ರಾಯ ಕೇಳೋಣ ಎಂದಾಗ ಡಿ.ಕೆ.ಶಿವಕುಮಾರ್ ಮತ್ತು ಈಶ್ವರಪ್ಪ ನಡುವೆ ವಾಕ್ಸಮರ ನಡೆದು ಸಭೆಯನ್ನು ಮಧ್ಯಾಹ್ನ ೩ ಗಂಟೆಗೆ ಮುಂದೂಡಲಾಯಿತು. ಮತ್ತೆ ಸಭೆ ಸೇರಿದಾಗ ಸಭಾಧ್ಯಕ್ಷರು ಸಿದ್ದರಾಮಯ್ಯ ಮಂಡಿಸಿದ್ದ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ರಾಷ್ಟçಧ್ವಜ ಹಿಡಿದು, ಬಾವಿಗಿಳಿದರು ಪ್ರತಿಭಟನೆ ಆರಂಭಿಸಿದರು. ಈ ವೇಳೆಯು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದು, ಸಭಾಧ್ಯಕ್ಷರು ಸಭೆಯನ್ನು ನಾಳೆ (ಗುರುವಾರ)ಗೆ ಮುಂದೂಡಿದರು.

Translate »