ಮೃಗಾಲಯದ ಪ್ರಾಣಿ ದತ್ತು ಸ್ವೀಕಾರ
ಮೈಸೂರು

ಮೃಗಾಲಯದ ಪ್ರಾಣಿ ದತ್ತು ಸ್ವೀಕಾರ

February 18, 2021

ಮೈಸೂರು, ಫೆ.17-ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಬೆಂಗಳೂರಿನ ಶೋನೆಟ್ ಸಲ್ಡಾಟ್ ಸಾಲ್ಡಾನ 7,500 ರೂ. ಪಾವತಿಸಿ ರೆಡ್-ಬಿಲ್ಡ್ ಟೋಕನ್ ಅನ್ನು 1 ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಹೈದ್ರಾಬಾದ್‍ನ ಲಲಿತಾ 5,000 ರೂ. ಪಾವತಿಸಿ 4 ಕೊಂಬಿನ ಜಿಂಕೆ, ಆಂಧ್ರ ಪ್ರದೇಶದ ಸುಕೀರ್ತಿ ಆರ್.ಗುಂಟೂರು ಅವರು 2,000ರೂ. ಪಾವತಿಸಿ ಸ್ಪಾಟೆಡ್ ವಿಸ್ಲಿಂಗ್ ಡಕ್ ಹಾಗೂ ಬೆಂಗಳೂರಿನ ಸಮರ್ಥ ಎಸ್. 1,000ರೂ. ಪಾವತಿಸಿ ಲವ್ ಬರ್ಡ್ ಅನ್ನು, ಅರ್ಜುನ್ ದೇಶಪಾಂಡೆ 2,000ರೂ. ಪಾವತಿಸಿ ನಾಗರಹಾವನ್ನು, ಮಂಡ್ಯದ ಬಿ.ಎಸ್.ರಾಘವೇಂದ್ರ ಎಂಬುವವರು 35,000 ರೂ. ಪಾವತಿಸಿ ಚಿರತೆಯನ್ನು 1 ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ.

Translate »