ರಂಗ ಶಿಬಿರಗಳಿಂದ ಹೆಣ್ಣು ಮಕ್ಕಳಲ್ಲಿ ಸ್ವಾವಲಂಬನೆ: ಬಿ.ಜಯಶ್ರೀ
ಮೈಸೂರು

ರಂಗ ಶಿಬಿರಗಳಿಂದ ಹೆಣ್ಣು ಮಕ್ಕಳಲ್ಲಿ ಸ್ವಾವಲಂಬನೆ: ಬಿ.ಜಯಶ್ರೀ

February 18, 2021

ಮೈಸೂರು, ಫೆ.17(ಎಸ್‍ಪಿಎನ್)- ರಂಗಭೂಮಿ ತರಬೇತಿ ಶಿಬಿರಗಳಿಂದ ಹೆಣ್ಣು ಮಕ್ಕಳಲ್ಲಿ ಸ್ವಾವಲಂಬನೆ, ಲೋಕ ಜ್ಞಾನ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಬಿ.ಜಯಶ್ರೀ ಅಭಿಪ್ರಾಯಪಟ್ಟರು.

ಮೈಸೂರು ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಮೈಸೂರು ಸಂಚಲನ ಸಂಸ್ಥೆ ಬುಧವಾರ ಆಯೋಜಿ ಸಿದ್ದ `ಮಹಿಳಾ ರಂಗ ತರಬೇತಿ ಶಿಬಿರ’ದ ಸಮಾರೋಪ ಮತ್ತು ಸಂಚಲನ ಮಹಿಳಾ ರಂಗತಂಡದ ಕಲಾವಿದೆಯರು ಅಭಿನಯಿ ಸಿದ `ರೂಪ ರೂಪಗಳನು ದಾಟಿ’ ನಾಟ ಕದ 2ನೇ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಂಚಲನ ಸಂಸ್ಥೆಯ ದೀಪಕ್ ಮೈಸೂರು ಅವರು ಮಹಿಳೆಯರಿಗಾಗಿಯೇ ರಂಗ ತರಬೇತಿ ಶಿಬಿರ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಇದು ಹೆಣ್ಣು ಮಕ್ಕಳ ಸ್ವಾವ ಲಂಬನೆ ಸಂಕೇತ. ಅಲ್ಲದೆ, ಹೆಣ್ಣು ಮಕ್ಕಳ ಕಲಿಕೆಗೆ ಗಂಡಸರು ಸ್ವಲ್ಪ ತ್ಯಾಗ ಮಾಡಬೇಕು. ಇಂತಹ ಶಿಬಿರಗಳಲ್ಲಿ ಹೆಣ್ಣು ಮಕ್ಕಳು ಭಾಗವಹಿಸುವುದರಿಂದ ಸಮಾಜದ ಆಗು -ಹೋಗುಗಳನ್ನು ತಿಳಿಯಲು ಸಹಕಾರಿ ಎಂದರು. ಈ ಸಂದರ್ಭದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತರಾದ ಬಿ.ಆರ್. ಪೂರ್ಣಿಮಾ, ಯುವ ಕಲಾವಿದೆ ಆರ್.ಜೆ.ರಶ್ಮಿ, ನವೀನ್ ಮತ್ತಿತರಿದ್ದರು.

Translate »