ಅಪರಾಧ ತಡೆ ಮಾಸಾಚರಣೆ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಎಸಿಪಿ ಶಿವಶಂಕರ್
ಮೈಸೂರು

ಅಪರಾಧ ತಡೆ ಮಾಸಾಚರಣೆ ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಎಸಿಪಿ ಶಿವಶಂಕರ್

December 2, 2020

ಮೈಸೂರು, ಡಿ.1(ಆರ್‍ಕೆ)-ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿ ಸಾರ್ವ ಜನಿಕರಿಗೆ ಕಿರುಕುಳ ನೀಡುವುದು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಜರು ಗಿಸುವುದಾಗಿ ಎನ್.ಆರ್. ಉಪ ವಿಭಾ ಗದ ಎಸಿಪಿ ಎಂ.ಶಿವಶಂಕರ್, ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇಂದು ಆರಂಭವಾದ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮೈಸೂರಿನ ಮೇಟಗಳ್ಳಿ ಠಾಣೆ ಆವರಣದಲ್ಲಿ ರೌಡಿ ಪರೇಡ್ ನಡೆಸಿದ ಅವರು, ಯಾವುದೇ ರೀತಿಯ ಅಕ್ರಮ ರಿಯಲ್ ಎಸ್ಟೇಟ್ ದಂಧೆ ಯಲ್ಲಿ ತೊಡಗಿ ಸಾರ್ವಜನಿಕರಿಗೆ ಕಿರು ಕುಳ ನೀಡುವುದು, ಧಮ್ಕಿ ಹಾಕುವುದು, ಆಸ್ತಿ-ಪಾಸ್ತಿಗೆ ಹಾನಿ ಉಂಟು ಮಾಡು ವಂತಹ ಕಾನೂನು ಬಾಹಿರ ಚಟುವಟಿಕೆ ಗಳಲ್ಲಿ ತೊಡಗುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸ ಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೋಲ್‍ಕಾಲ್, ಹಫ್ತಾ ವಸೂಲಿ, ಗುಂಪು ಘರ್ಷಣೆಯಂತಹ ಕೃತ್ಯಗಳಲ್ಲಿ ತೊಡಗದೆ, ಅಪರಾಧ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಬೇಕು. ಎಲ್ಲೆಡೆ ಪೊಲೀಸ್ ಕಣ್ಗಾವಲಿ ರುವುದರಿಂದ ಅಹಿತಕರ ಘಟನೆ ನಡೆಯ ದಂತೆ ಎಚ್ಚರ ವಹಿಸಲಾಗಿದೆ.

ಸಮಾಜದ ಶಾಂತಿ ಕದಡದೆ ಎಲ್ಲರಂತೆ ಗೌರವಯುತವಾಗಿ ಜೀವನ ನಡೆಸುವಂತೆ ಶಿವಶಂಕರ್ ಅವರು ರೌಡಿಶೀಟರ್‍ಗಳಿಗೆ ಕಿವಿಮಾತು ಹೇಳಿದರು. ಮೇಟಗಳ್ಳಿ ಠಾಣೆ ಇನ್ಸ್‍ಪೆಕ್ಟರ್ ಎ.ಮಲ್ಲೇಶ್, ಸಬ್‍ಇನ್ಸ್‍ಪೆಕ್ಟರ್ ಗಳು ಉಪಸ್ಥಿತರಿದ್ದರು. ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮೈಸೂರಿನ ಎಲ್ಲಾ ಠಾಣೆಗಳಲ್ಲಿ ಮಾನವ ಕಳ್ಳ ಸಾಗಣೆ, ವ್ಯಕ್ತಿ ಕಣ್ಮರೆ ಪ್ರಕರಣಗಳ ಪತ್ತೆ, ಮಾದಕ ವಸ್ತುಗಳ ಸಾಗಣೆ, ಮಾರಾಟ ತಡೆಗಟ್ಟು ವುದು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ನಿಯಂತ್ರಿಸುವುದೂ ಸೇರಿದಂತೆ ಹಲವು ಅಪರಾಧಗಳು ನಡೆಯದಂತೆ ಪೊಲೀಸರು ಎಚ್ಚರ ವಹಿಸುತ್ತಾರೆ ಎಂದು ಕಾನೂನು-ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್.ಪ್ರಕಾಶಗೌಡ ತಿಳಿಸಿದ್ದಾರೆ.

 

 

Translate »