ಅಯ್ಯೋ ಪಾಪ…! ಇಳಿ ವಯಸ್ಸಿನಲ್ಲಿ ಅವರಿಗೆ ಹೀಗಾಗಬಾರದಿತ್ತು
ಮೈಸೂರು

ಅಯ್ಯೋ ಪಾಪ…! ಇಳಿ ವಯಸ್ಸಿನಲ್ಲಿ ಅವರಿಗೆ ಹೀಗಾಗಬಾರದಿತ್ತು

December 2, 2020

ಮೈಸೂರು, ಡಿ.1(ಆರ್‍ಕೆಬಿ)- ಅಯ್ಯೋ ಪಾಪ…, ಈ ಇಳಿ ವಯಸ್ಸಿನಲ್ಲಿ ಅವರಿಗೆ ಹೀಗಾಗಬಾರದಿತ್ತು.
ಸಚಿವರಾಗಲು ಎ.ಹೆಚ್.ವಿಶ್ವನಾಥ್ ಅನ ರ್ಹರು ಎಂದು ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಮಾಜಿ ಸಚಿವರೂ ಆದ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಅವರು ಅಡಗೂರು ಹೆಚ್.ವಿಶ್ವನಾಥ್ ಬಗ್ಗೆ ಮಂಗಳವಾರ ಮೈಸೂರಿನ ರಮಾವಿಲಾಸ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ನೀಡಿದ ಪ್ರತಿಕ್ರಿಯೆ ಇದು.

ಚುನಾವಣೆಯಲ್ಲಿ ಸೋತು, ವಿಧಾನ ಪರಿಷತ್‍ಗೆ ನಾಮ ನಿರ್ದೇಶನಗೊಂಡಿ ದ್ದರೂ ಸಚಿವರಾಗಲು ಸಾಧ್ಯವಿಲ್ಲ ಎಂದು ನಿನ್ನೆಯಷ್ಟೇ ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಇಂದು ಸಾ.ರಾ. ಮಹೇಶ್ ಚಾಮುಂಡಿಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.

ವಿಶ್ವನಾಥ್ ಅವರ ಕಥೆ ಹೀಗೇ ಆಗುತ್ತ ದೆಂದು ನಾನು ವರ್ಷದ ಹಿಂದೆಯೇ ಹೇಳಿದ್ದೆ. ಆದರೆ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಹೈಕೋರ್ಟ್ ಬಿ.ಎಸ್.ಯಡಿಯೂರಪ್ಪರ ಸಂಪುಟ ಸೇರಲು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಅನರ್ಹರು ಎಂದು ತೀರ್ಪು ನೀಡಿದೆ. ನಾನು ಬಿಜೆಪಿಗೆ ಸೇರಲು ಹಣ ತೆಗೆದುಕೊಂಡಿಲ್ಲ ಎಂದು ಪ್ರತಿಜ್ಞೆ ಮಾಡಲು ವಿಶ್ವನಾಥ್‍ಗೆ ಚಾಮುಂಡಿಬೆಟ್ಟಕ್ಕೆ ಬರಬೇಕೆಂದು ನಾನು ಸವಾಲು ಹಾಕಿದ್ದೆ. ಈಗ ಚಾಮುಂಡೇಶ್ವರಿ ದೇವಿ ನ್ಯಾಯಾಧೀಶರ ಮೂಲಕ ವಿಶ್ವನಾಥ್ ಅವರಿಗೆ ಪಾಠ ಕಲಿಸಿದ್ದಾಳೆ ಎಂದರು.

ವಿಶ್ವನಾಥ್ ಅವರ ಸ್ಥಿತಿಯನ್ನು ನಿಷ್ಕ್ರಿಯ ವಾಹನಕ್ಕೆ ಹೋಲಿಸಿದ ಸಾ.ರಾ.ಮಹೇಶ್, ಕಾಂಗ್ರೆಸ್‍ನಲ್ಲಿ ನಿರ್ಲಕ್ಷ್ಯಕ್ಕೊಳಗಾಗಿ ಓಡದೆ ಮೂಲೆಯಲ್ಲಿ ನಿಂತಿದ್ದ ವಾಹನಕ್ಕೆ ಹಳೆಯ ಮೋಟಾರು ಅಳವಡಿಸಿ, ಅದಕ್ಕೆ ಬಣ್ಣ ಬಳಿದು ಓಡುವಂತೆ ನಾವು ಮಾಡಿದ್ದೆವು. ಅವರನ್ನು ಜಾತ್ಯತೀತ ಜನತಾದಳಕ್ಕೆ ಕರೆ ದೊಯ್ದು, 2018ರ ವಿಧಾನಸಭಾ ಚುನಾ ವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಗೆಲ್ಲು ವಂತೆ ಮಾಡಲಾಯಿತು. ಆದರೆ ರಾಜಕೀಯ ಪುನರ್ಜನ್ಮ ನೀಡಿದ ಜೆಡಿಎಸ್‍ನ ನಾಯ ಕರು ಮತ್ತು ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ಧನ್ಯವಾದಗಳನ್ನು ಹೇಳಿ ಪಕ್ಷಕ್ಕೆ ನಿಷ್ಠರಾಗಿ ರಬೇಕಾಗಿದ್ದ ವಿಶ್ವನಾಥ್, ಕೆಲವು ಸಂಸದ, ಶಾಸಕರೊಂದಿಗೆ ಕೈಜೋಡಿಸಿ, ಮುಖ್ಯ ಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ತಮಗೆ ಆಶ್ರಯ ನೀಡಿ ದವರಿಗೆ ಯಾವುದೇ ಗೌರವ ನೀಡುವ ಸಂಸ್ಕøತಿಯೇ ಗೊತ್ತಿಲ್ಲ. ಇದಕ್ಕೆಲ್ಲ ಸಾ.ರಾ. ಮಹೇಶ್ ಕಾರಣ ಎಂದು ನನ್ನ ಮೇಲೆ ದೂರುತ್ತಾ ಬಂದರು. ಆದರೆ ನಾನು ಇದ ನ್ನೆಲ್ಲಾ ಚಾಮುಂಡೇಶ್ವರಿ ನೀನೇ ನೋಡಿಕೋ ಎಂದು ಪ್ರಾರ್ಥಿಸಿದ್ದೆ. ಅವರ ಪ್ರಸ್ತುತ ಸ್ಥಿತಿಯನ್ನು ನೋಡಿದರೆ ಮರುಕ ಉಂಟಾಗುತ್ತದೆ ಎಂದು ಹೇಳಿದರು.

ವಿಶ್ವನಾಥ್‍ರ ಈ ಸ್ಥಿತಿಗೆ ಕಾರಣ ನಾನಲ್ಲ. ಈ ಹಿರಿಯ ವಯಸ್ಸಿನಲ್ಲಿಯೂ ಅವರಿಗೆ ಆಸೆ ಬಂದಿದ್ದೇ ಮುಖ್ಯ ಕಾರಣ. ಅಲ್ಲದೆ ಅವರ ವಿರುದ್ಧ ನ್ಯಾಯಾಲಯಕ್ಕೆ ಸಾರ್ವ ಜನಿಕ ಹಿತಾಸಕ್ತಿ ಮೊಕದ್ದಮೆ ಹಾಕಿದವರೂ ಅವರೊಟ್ಟಿಗಿದ್ದ, ಅವರ ಪಕ್ಷದವರೇ ಎಂದು ಅವರ ಪಕ್ಷದವರೇ ಬೇರೆಯವರೊಂದಿಗೆ ಹೇಳಿಕೊಂಡಿದ್ದಾರಂತೆ ಎಂದು ತಿಳಿಸಿದರು.

ವಿಶ್ವನಾಥ್ ಅವರ ರಾಜಕೀಯ ಭವಿ ಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್, ಮಾಜಿ ಶಾಸಕ, ಸಂಸದ, ಸಚಿವರಾಗಿರುವ ವಿಶ್ವನಾಥ್ ಮುಂದೆ ಮಾಜಿ ಎಂಎಲ್‍ಸಿ ಕೂಡ ಆಗಲಿದ್ದಾರೆ ಎಂದು ನುಡಿದರು.

ಸತ್ಯವು ಯಾವಾಗಲೂ ಮೇಲುಗೈ ಸಾಧಿ ಸುತ್ತದೆ. ಜನರಿಗೆ ಏನೇ ಸುಳ್ಳು ಹೇಳಿ ದರೂ ನಿಧಾನವಾಗಿಯಾದರೂ ಸತ್ಯಕ್ಕೆ ಜಯ ಸಿಕ್ಕಿದೆ. ಅಧಿಕಾರಕ್ಕಾಗಿ ಬಿಜೆಪಿಗೆ ಸೇರಿದ ಅವರಿಗೆ ನ್ಯಾಯಾಲಯ ತನ್ನ ತೀರ್ಪಿನ ಮೂಲಕ ಸತ್ಯಮೇವ ಜಯತೇ ಎಂಬುದನ್ನು ಎತ್ತಿ ಹಿಡಿದಿದೆ. ಇನ್ನಾದರೂ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಬೇಡಿ, ಸಂಸ್ಕಾರ ಕಲಿಯಿರಿ ಎಂದು ವಿಶ್ವನಾಥ್ ಅವರಿಗೆ ಶಾಸಕ ಸಾ.ರಾ. ಮಹೇಶ್ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ನಗ ರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಮಾಜಿ ಮೇಯರ್ ಆರ್.ಲಿಂಗಪ್ಪ, ಮಾಜಿ ಉಪ ಮೇಯರ್ ಶೈಲೇಂದ್ರ, ನಗರಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಜೀಜ್ ಅಬ್ದುಲ್ಲಾ ಇನ್ನಿತರರು ಉಪಸ್ಥಿತರಿದ್ದರು.

Translate »