ಕೆ.ಆರ್.ಸರ್ಕಲ್‍ನಲ್ಲಿ `ಡೆಕೊರೇಟಿವ್ ಹೆರಿಟೇಜ್ ಸ್ಟ್ರೀಟ್ ಲೈಟ್ಸ್’ ಅಳವಡಿಕೆ
ಮೈಸೂರು

ಕೆ.ಆರ್.ಸರ್ಕಲ್‍ನಲ್ಲಿ `ಡೆಕೊರೇಟಿವ್ ಹೆರಿಟೇಜ್ ಸ್ಟ್ರೀಟ್ ಲೈಟ್ಸ್’ ಅಳವಡಿಕೆ

October 28, 2021

ಮೈಸೂರು, ಅ.27(ಎಂಟಿವೈ)-ಮೈಸೂರಿನ ಕೆ.ಆರ್.ವೃತ್ತದಲ್ಲಿ ಪಾರಂಪರಿಕ ಶೈಲಿಯ ‘ಡೆಕೊರೇಟಿವ್ ಹೆರಿಟೇಜ್ ಸ್ಟ್ರೀಟ್‍ಲೈಟ್ಸ್’ ಅಳವಡಿಸುವ ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದೆ.

ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಪಾರಂಪರಿಕ ಶೈಲಿಯ 10 ವಿದ್ಯುತ್ ದೀಪದ ಕಂಬಗಳು ಮಧ್ಯಪ್ರದೇಶದ ವಿನ್ಯಾಸಕ ಸಂಸ್ಥೆಯಲ್ಲಿ ಪಾರಂ ಪರಿಕ ಶೈಲಿಯಲ್ಲಿ ಸಿದ್ಧಗೊಂಡಿದ್ದು, ಅವುಗಳು ಬುಧವಾರ ಮೈಸೂರು ತಲುಪಿದವು. 7 ಮೀಟರ್ ಎತ್ತರ ವಿರುವ ಈ ಕಂಬದ ಮಧ್ಯಭಾಗ ದಲ್ಲಿ ನಾಲ್ಕು ದಿಕ್ಕಿಗೂ ಆನೆಗಳ ತಲೆ ಮಾದರಿಯಲ್ಲಿ ವಿನ್ಯಾಸಗೊಳಿಸ ಲಾಗಿದ್ದು ಆಕರ್ಷಕವಾಗಿದೆ. ಒಂದು ಡೆಕೊರೇಟಿವ್ ಹೆರಿಟೇಜ್ ಸ್ಟ್ರೀಟ್‍ಲೈಟ್‍ಗೆ ಸುಮಾರು 5.5 ಲಕ್ಷ ರೂ. ವೆಚ್ಚವಾಗಿದೆ. ಬುಧ ವಾರ ಮಧ್ಯಾಹ್ನ ಮೈಸೂರಿಗೆ ಬಂದ ಕಂಬವನ್ನು ಕ್ರೇನ್ ಸಹಾಯದಿಂದ ಕೆಳಗಿಳಿಸಿದ್ದು, ಈಗಾಗಲೇ ಹಾಕಿರುವ ಅಡಿಪಾಯಕ್ಕೆ ಅಲಂಕಾರಿಕ ವಿದ್ಯುತ್ ಕಂಬವನ್ನು ಅಳವಡಿಸ ಲಾಗುತ್ತಿದೆ. ಇನ್ನೆರಡು ದಿನದಲ್ಲಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಕಂಬ ಅಳವಡಿಸುವ ಪ್ರಕ್ರಿಯೆ ಪೂರ್ಣಗೊಂಡು ವಿದ್ಯುತ್ ಬಲ್ಬ್ ಅಳವಡಿಸಲಾಗುತ್ತದೆ.

Translate »