ಆಚಾರ್ಯಶಂಕರರು ಈ ಲೋಕದಲ್ಲಿ ಜೀವಿಸಿದ್ದುದು ಕೇವಲ 32 ವರ್ಷಗಳೆಂದು ಹೇಳುತ್ತಾರೆ. ಇಷ್ಟು ಸ್ವಲ್ಪ ಕಾಲದಲ್ಲಿ ಅವರು ಸಾಧಿಸಿದುದು ಅಪಾರ. ಮುಕ್ತಿಕೋಪನಿಷತ್ತಿನಲ್ಲಿ ನೂರೆಂಟು ಉಪನಿಷತ್ತುಗಳ ಹೆಸರುಗಳು ಬರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾದ ಈಶಾವಾಸ್ಯ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ವಿತರೇಯ, ಛಾಂದೋಗ್ಯ, ಬೃಹದಾರಣ್ಯಕ ಎಂಬ ಹತ್ತು ಉಪನಿಷತ್ತುಗಳಿಗೂ ಆಚಾರ್ಯರು ಭಾಷ್ಯಗಳನ್ನು ಬರೆದರು. ಇದು ಭಾರತೀಯ ದಾರ್ಶನಿಕ ಸಾಹಿತ್ಯಕ್ಕೆ ಅನುಪಮ ಕೊಡುಗೆ.
ಶ್ರುತಿಸ್ಮೃತಿ ಪುರಾಣಾನಾಮಾಲಯಂ ಕರುಣಾಲಯಮ್
ನಮಾಮಿ ಭಗವತ್ಪಾದ ಶಂಕರಂ ಲೋಕಶಂಕರಮ್||
ಕ್ರಿ.ಶ. ಏಳನೆಯ ಅಥವಾ ಎಂಟನೆಯ ಶತಮಾನದಲ್ಲಿ ಭಾರತದ ದಕ್ಷಿಣ ಭಾಗ ದಲ್ಲಿ ಜನಿಸಿ ಅಪಾರ ಪ್ರತಿಭೆಯಿಂದ ಸಮಸ್ತ ವೇದಗಳನ್ನೂ ಉಪನಿಷತ್ತುಗಳನ್ನು ಪುರಾಣಗಳನ್ನೂ ಅರಿತುಕೊಂಡು, ಅವು ಗಳ ಸಾರವನ್ನೆಲ್ಲ ತಮ್ಮ ಗ್ರಂಥಗಳಿಂದ ಲೋಕಕ್ಕೆ ತಿಳಿಸಿಕೊಟ್ಟು, ಭಾರತ ದೇಶದ ಸಂಸ್ಕøತಿಗೆ ಅಪೂರ್ವ ಅಸಾಧಾರಣ ಕೊಡುಗೆಯನ್ನು ಕೊಟ್ಟ ಮಹಾನುಭಾವರು ಶ್ರೀ ಶಂಕರಾಚಾರ್ಯರು. ಪ್ರಪಂಚದ ದಾರ್ಶನಿಕ ಸಾಹಿತ್ಯಕ್ಕೆ ಭಾರತ ಕೊಟ್ಟಿರುವ ಕೊಡುಗೆ ಏನು? ಎಂಬ ಪ್ರಶ್ನೆಗೆ ಉತ್ತರ ಕೊಡುವಾಗ ಶಂಕರರ ಹೆಸರನ್ನು ಹೇಳ ದಿರುವುದು ಅಸಾಧ್ಯ. ಅವರ ಅಭಿಪ್ರಾಯ ಗಳನ್ನು ಅನುಮೋದಿಸುವವರು ಹಾಗೂ ವಿರೋಧಿಸುವವರೂ ಅವರನ್ನು ನೆನೆ ಯಲೇಬೇಕಾಗುತ್ತದೆ.
ದರ್ಶನ ಎಂದರೇನು?: ದರ್ಶನ ಎಂದರೆ ಕಾಣ್ಕೆ, ನೋಟ, ಸತ್ಯ ಸಾಕ್ಷಾತ್ಕಾರ. ಜಗತ್ತಿನ ಸತ್ಯವನ್ನರಿತ ಜ್ಞಾನಿಗಳು ಅವರು ಕಂಡ ಸತ್ಯವನ್ನು ಗ್ರಂಥಗಳಲ್ಲಿ ಪ್ರತಿಪಾದಿಸಿದರು. ಆ ವಿಚಾರ ಸರಣಿಗಳು ದರ್ಶನಗಳೆಂದು ನಾವು ಕರೆಯುತ್ತೇವೆ. ಸತ್ಯವು ಒಂದೇ ಆದರೂ ಅದನ್ನು ಹೇಳುವ ರೀತಿಗಳು ಭಿನ್ನವಾದುದರಿಂದ ಅನೇಕ ದರ್ಶನ ಗಳು ಹುಟ್ಟಿವೆ. ಪ್ರಕೃತಿ–ಪುರುಷ ಎಂಬ ಎರಡೇ ಮೂಲ ತತ್ತ್ವಗಳು, ಪ್ರಕೃತಿ ಅಚೇತನ, ಪುರುಷ ಚೇತನ ಎಂಬ ಸಿದ್ಧಾಂತವನ್ನಿಟ್ಟುಕೊಂಡು ಹೊರಟ ದರ್ಶನ ವನ್ನು ಸಾಂಖ್ಯದರ್ಶನ ಎಂದು ಕರೆಯು ತ್ತಾರೆ. ಪ್ರಕೃತಿ–ಪುರುಷ ವಿವೇಕ ಜ್ಞಾನವೇ ಮೋಕ್ಷಕ್ಕೆ ಕಾರಣ ಎಂದು ಇವರು ಹೇಳಿ ದರು. ಇವೆರಡು ತತ್ತ್ವಗಳ ಜೊತೆಗೆ ಈಶ್ವರ ಎಂಬ ತತ್ತ್ವವನ್ನೂ ಒಪ್ಪಿಕೊಂಡು ಈಶ್ವರ ಪ್ರಣಿಧಾನದಿಂದ, ಎಂದರೆ ಆ ಈಶ್ವರನಿಗೆ ಶರಣಾಗಿ ಧ್ಯಾನವನ್ನು ಮಾಡಿ ಸಮಾಧಿ ಯನ್ನು ಪಡೆಯುವುದರಿಂದ ಮೋಕ್ಷ ಎಂದು ಯೋಗದರ್ಶನವು ತಿಳಿಸಿತು. ಹಾಗೆ ಸಮಾಧಿಯನ್ನು ಪಡೆಯಲು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾ ಹಾರ, ಧಾರಣಾ, ಧ್ಯಾನ ಎಂಬ ಮೆಟ್ಟಿಲು ಗಳನ್ನು ಏರಬೇಕೆಂದು ಯೋಗ ದರ್ಶನವು ತಿಳಿಸಿತು. ವೈಶೇಷಿಕ ಮತ್ತು ನ್ಯಾಯ ದರ್ಶನಗಳು ಚಿಂತನೆಗೆ ಆದ್ಯತೆ ಯನ್ನು ಕೊಟ್ಟು ಜಗತ್ತನ್ನು ವಿಶ್ಲೇಷಿಸಿ ಈ ಪ್ರಪಂಚದ ರಚನೆಗೆ ಮೂಲವಸ್ತುಗಳು ಪರಮಾಣು ಗಳು, ಈಶ್ವರನ ಇಚ್ಛೆಯಿಂದ ಅವುಗಳಲ್ಲಿ ಕ್ರಿಯೆ ಉಂಟಾಗಿ ಪೃಥಿವೀ ಮುಂತಾದ ಸ್ಥೂಲ ಪದಾರ್ಥಗಳು ಹುಟ್ಟುತ್ತವೆ ಎಂದು ತೀರ್ಮಾನಿಸಿದುವು.
ಪ್ರಪಂಚದಲ್ಲಿದ್ದು, ನಾನಾ ದುಃಖಗಳನ್ನು ಅನುಭವಿಸುತ್ತಿರುವ ಆತ್ಮಗಳು ತತ್ತ್ವಜ್ಞಾನ ದಿಂದ ಮೋಕ್ಷವನ್ನು ಪಡೆಯಬಹುದು. ಆಗ ಎಲ್ಲ ದುಃಖಗಳೂ ಶಾಶ್ವತವಾಗಿ ದೂರವಾಗುತ್ತವೆ ಎಂದು ಇವರ ಸಿದ್ಧಾಂತ ವಾಗಿತ್ತು. ಮೀಮಾಂಸಾ ದರ್ಶನವು ವೇದ ಗಳಿಗೆ ಅತ್ಯುನ್ನತ ಸ್ಥಾನವನ್ನು ಕೊಟ್ಟು ನಿತ್ಯ ಸತ್ಯವಾದ ವೇದಗಳು ಹೇಳಿದ ಕರ್ಮ ಗಳನ್ನು ವಿಧ್ಯುಕ್ತವಾಗಿ ಆಚರಿಸಿ ಸ್ವರ್ಗವನ್ನು ಪಡೆಯುವ ಮಾನವರೇ ಶ್ರೇಷ್ಠ ರೆಂದು ಪ್ರತಿಪಾದಿಸಿತು. ಇದು ವೇದಗಳ ಕರ್ಮ ಕಾಂಡಕ್ಕೆ ಪ್ರಾಧಾನ್ಯವನ್ನು ನೀಡಿತು.
ಇದೇ ಸಂದರ್ಭದಲ್ಲಿ ವೇದಗಳ ಪ್ರಾಮಾಣ್ಯ ವನ್ನು ಒಪ್ಪಿಕೊಳ್ಳದ ಭೌದ್ಧ ದರ್ಶನವು ಜಗತ್ತಿನಲ್ಲಿ ಪ್ರತಿಯೊಂದೂ ಕ್ಷಣಿಕ, ಶಾಶ್ವತ ವಾದ ಆತ್ಮವೆಂಬ ವಸ್ತುವಿಲ್ಲ, ವಿಜ್ಞಾನ ಸಂತತಿಯೇ ಆತ್ಮ, ಅದರ ಆರಿ ಹೋಗು ವಿಕೆಯೇ ನಿರ್ವಾಣ ಎಂಬ ಸಿದ್ಧಾಂತವನ್ನು ಮುಂದಿಟ್ಟಿತು. ದೀರ್ಘವಾದ ಇತಿಹಾಸ ವನ್ನು ಹೊಂದಿದ್ದ ಜೈನ ದರ್ಶನವಾದರೋ ಶಾಶ್ವತವಾದ ಆತ್ಮನ ಅಸ್ತಿತ್ವವನ್ನು ಒಪ್ಪಿ ಸಮ್ಯಗ್ಜ್ಞಾನ, ಸಮ್ಯಕ್ ಚಾರಿತ್ರ, ಸಮ್ಯಗ್ ದರ್ಶನಗಳಿಂದ ಮೋಕ್ಷ, ಜಗತ್ತನ್ನು ಸೃಷ್ಟಿ ಸುವ ಅಥವಾ ಸಂಹರಿಸುವ ದೇವರು ಯಾರೂ ಇಲ್ಲ, ಪರಮ ವೈರಾಗ್ಯದಿಂದ ರಾಗ–ದ್ವೇಷಗಳನ್ನ ತ್ಯಜಿಸಿ ಕೇವಲ ಜ್ಞಾನ ವನ್ನು ಗಳಿಸಿ ಅದರಿಂದ ಮುಕ್ತಿಯನ್ನು ಪಡೆಯ ಬೇಕು ಎಂದು ಪ್ರತಿಪಾದಿಸಿತು. ಆತ್ಮ ಪರ ಲೋಕ, ಪರಮಾತ್ಮ, ಬಂಧ, ಮೋಕ್ಷ ಇವೆಲ್ಲ ಕೇವಲ ಕಲ್ಪನೆಗಳು, ಇವು ಯಾವುವೂ ಇಲ್ಲ. ಆಕಸ್ಮಿಕವಾಗಿ ಹುಟ್ಟಿರುವ ಎಲ್ಲ ಜೀವಿಗಳೂ ಆದಷ್ಟು ಸುಖವನ್ನು ಪಡೆಯಬೇಕು. ಸತ್ತ ಮೇಲೆ ಏನೂ ಇಲ್ಲ ಎಂದು ನಾಸ್ತಿಕ ವಾದ ವನ್ನು ಮುಂದಿಟ್ಟ ಚಾರ್ವಾಕರು ತಿಳಿಸಿದರು.
ಹೀಗೆ ನಾನಾ ವಿಚಾರಗಳೂ ವಿವಾದ ಗಳೂ ನಡೆಯುತ್ತಿದ್ದ ಕಾಲದಲ್ಲಿ ಶಂಕರಾ ಚಾರ್ಯರು ಅವತರಿಸಿದರು. ವೇದಗಳಲ್ಲಿ ಜ್ಞಾನಕಾಂಡ ಎಂದು ಕರೆಸಿಕೊಳ್ಳುವ ಉಪ ನಿಷತ್ತುಗಳ ಉಪದೇಶಕ್ಕೆ ಅವರು ಪ್ರಾಮುಖ್ಯ ವನ್ನು ಕೊಟ್ಟರು. ವೇದಗಳ ಎಲ್ಲ ಭಾಗಗಳೂ ಪ್ರಮಾಣ, ಆದರೆ ಕರ್ಮಕಾಂಡವು ತಿಳಿಸುವ ಯಜ್ಞಗಳ ಅನುಷ್ಠಾನದಿಂದ ದೊರಕುವ ಸ್ವರ್ಗವಾಸಾದಿಗಳು ಅಶಾಶ್ವತ, ದುಃಖ ಗಳಿಗೆ ಅದು ಶಾಶ್ವತ ಪರಿಹಾರವನ್ನು ಕೊಡುವು ದಿಲ್ಲ. ಜನನ–ಮರಣ–ವ್ಯಾಧಿ ವಿಯೋಗ ಮುಂತಾದುವುಗಳ ದುಃಖವನ್ನು ಶಾಶ್ವತ ವಾಗಿ ನಿವಾರಿಸಲು ಮೋಕ್ಷವನ್ನೇ ಪಡೆಯ ಬೇಕು. ಇದಕ್ಕಾಗಿ ಉಪನಿಷತ್ತುಗಳ ಶ್ರವಣ– ಮನನ–ನಿದಿಧ್ಯಾಸನಗಳನ್ನು ಮಾಡಬೇಕು ಎಂದು ಔಪನಿಷದ ದರ್ಶನವನ್ನು ಶಂಕರಾ ಚಾರ್ಯರು ಪ್ರತಿಪಾದಿಸಿದರು. ಉಪನಿ ಷತ್ತುಗಳು ಸಾಮಾನ್ಯವಾಗಿ ವೇದಗಳ ಕೊನೆಯ ಭಾಗದಲ್ಲಿ ಬರುವುದರಿಂದ ಇದನ್ನು ವೇದಾಂತ ದರ್ಶನವೆಂದೂ ಕರೆಯುತ್ತಾರೆ. ವೇದಗಳ ಉತ್ತರ ಭಾಗದಲ್ಲಿ ಬರುವ ಆತ್ಮನ ವಿಚಾರ ಇದರಲ್ಲಿ ಪ್ರಧಾನವಾಗಿರುವುದರಿಂದ ಉತ್ತರ ಮೀಮಾಂಸಾ ಎಂಬ ಹೆಸರೂ ರೂಢಿಯಲ್ಲಿದೆ. ಈ ದರ್ಶನವನ್ನು ಎತ್ತಿ ಹಿಡಿದು ತಮ್ಮ ಪಾಂಡಿತ್ಯದಿಂದ ಪ್ರತಿಷ್ಠಾಪಿಸಿದ ಕೀರ್ತಿ ಆಚಾರ್ಯ ಶಂಕರರಿಗೆ ಸಲ್ಲುತ್ತದೆ.
ಆಚಾರ್ಯಶಂಕರರು ಈ ಲೋಕದಲ್ಲಿ ಜೀವಿಸಿದ್ದುದು ಕೇವಲ 32 ವರ್ಷಗಳೆಂದು ಹೇಳುತ್ತಾರೆ. ಇಷ್ಟು ಸ್ವಲ್ಪ ಕಾಲದಲ್ಲಿ ಅವರು ಸಾಧಿಸಿದುದು ಅಪಾರ. ಮುಕ್ತಿಕೋಪ ನಿಷತ್ತಿನಲ್ಲಿ ನೂರೆಂಟು ಉಪನಿಷತ್ತುಗಳ ಹೆಸರುಗಳು ಬರುತ್ತವೆ. ಅವುಗಳಲ್ಲಿ ಅತ್ಯಂತ ಮುಖ್ಯವಾದ ಈಶಾವಾಸ್ಯ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ವಿತ ರೇಯ, ಛಾಂದೋಗ್ಯ, ಬೃಹದಾರಣ್ಯಕ ಎಂಬ ಹತ್ತು ಉಪನಿಷತ್ತುಗಳಿಗೂ ಆಚಾರ್ಯರು ಭಾಷ್ಯಗಳನ್ನು ಬರೆದರು. ಇದು ಭಾರತೀಯ ದಾರ್ಶನಿಕ ಸಾಹಿತ್ಯಕ್ಕೆ ಅನುಪಮ ಕೊಡುಗೆ. ಶಂಕರ ಪೂರ್ವ ಯುಗದಲ್ಲಿ ಯಾರಾದರೂ ಉಪನಿಷತ್ತುಗಳಿಗೆ ಭಾಷ್ಯ ಆಥವಾ ವ್ಯಾಖ್ಯಾನ ವನ್ನು ರಚಿಸಿದ್ದರೆ ಅದರ ಬಗೆಗೆ ಮಾಹಿತಿ ಯಾವುದೂ ಲಭ್ಯವಿಲ್ಲ. ಶಂಕರೋತ್ತರ ಯುಗ ದಲ್ಲಿ ಹಲವು ಭಾಷ್ಯಗಳೂ ವ್ಯಾಖ್ಯಾನಗಳೂ ರಚಿತವಾಗಿರುವುದು ಸರ್ವವಿದಿತ.
ಭಗವದ್ಗೀತೆ: ಮಹಾಭಾರತದ ಭೀಷ್ಮ ಪರ್ವದಲ್ಲಿ ಬರುವ ಭಗವದ್ಗೀತೆ ಇಂದು ಸುಪ್ರಸಿದ್ಧ ಗ್ರಂಥವಾಗಿದೆ. ಇದಕ್ಕೂ ಶಂಕರರು ಬರೆದ ಭಾಷ್ಯವೇ ಈಗ ಲಭ್ಯವಾಗಿರುವ ಭಾಷ್ಯಗಳಲ್ಲಿ ಪ್ರಾಚೀನ. ಅವರ ಉಕ್ತಿಗಳಿಂದಲೇ ಭಗವದ್ಗೀತೆಗೆ ಹಿಂದಿನ ವ್ಯಾಖ್ಯಾನಗಳಿದ್ದು ವೆಂದು ಗೊತ್ತಾಗುತ್ತದೆ. ಆದರೆ ಅವು ಉಪಲಬ್ಧ ವಾಗಿಲ್ಲ. ಭಾರತೀಯ ಸಂಸ್ಕøತಿಯಲ್ಲಿ ಭಗ ವದ್ಗೀತೆಗೆ ಉನ್ನತ ಸ್ಥಾನವು ದೊರಕಲು ಶಂಕರಾಚಾರ್ಯರ ಭಾಷ್ಯವೂ ಕಾರಣ. ಅನಂತರ ಕಾಲದಲ್ಲಿ ಶಾಂಕರಭಾಷ್ಯವನ್ನನು ಸರಿಸಿ ಅನೇಕರು ಬರೆದರು, ಬರೆಯುತ್ತಿದ್ದಾರೆ..
ಬ್ರಹ್ಮಸೂತ್ರಗಳು: ಬಾದರಾಯಣರಿಂದ ರಚಿತವಾದ ಬ್ರಹ್ಮಸೂತ್ರಗಳು ವೇದಾಂತ ದರ್ಶನದ ಮೇರು ಶಿಖರ. ಉಪನಿಷತ್ತು ಗಳಲ್ಲಿ ಹಂಚಿಹೋಗಿದ್ದ ಶಾಸ್ತ್ರ ವಿಷಯ ಗಳನ್ನೆಲ್ಲ ಒಟ್ಟುಗೂಡಿಸಿ ತರ್ಕಬದ್ಧವಾಗಿ ನಿರೂಪಿಸುವುವು ಈ ಸೂತ್ರಗಳೇ. ಇವು ಗಳಿಗೆ ಆಚಾರ್ಯ ಶಂಕರರು ಬರೆದಿರುವ ಶಾರೀರಕ ಭಾಷ್ಯವು ಸಂಸ್ಕøತ ಸಾಹಿತ್ಯ ದಲ್ಲೇ ಅನುಪಮವಾದ ಶ್ರೇಷ್ಠ ಕೃತಿ. ಸಂಸ್ಕøತ ಗದ್ಯವನ್ನು ಬರೆಯುವವರಿಗೆ ಇದೊಂದು ಮಾದರಿ. ಶ್ರುತಿಗಳಲ್ಲೂ ಸ್ಮøತಿ ಗಳಲ್ಲೂ ಆಚಾರ್ಯರಿಗೆ ಇದ್ದ ಪುಷ್ಕಲ ಜ್ಞಾನಕ್ಕೆ ಮತ್ತು ಅವರ ನಿಶಿತ ಮತಿಗೆ ಈ ಭಾಷ್ಯವು ಸಾಕ್ಷಿಯಾಗಿದೆ. ಇದಕ್ಕೆ ವಾಚಸ್ಪತಿ ಮಿತ್ರರು ಬರೆದ ಭಾಮತೀ ಎಂಬ ವ್ಯಾಖ್ಯಾ ನವು ಜಗತ್ ಪ್ರಸಿದ್ಧವಾಗಿದೆ.
ಬ್ರಹ್ಮಸೂತ್ರ ಭಾಷ್ಯವೊಂದನ್ನೇ ಬರೆ ದಿದ್ದರೂ ಶಂಕರರು ಜಗತ್ತಿನ ಶ್ರೇಷ್ಠ ದಾರ್ಶನಿಕ ರಲ್ಲೊಬ್ಬರೆಂದು ಪರಿಗಣಿಸಲ್ಪಡುತ್ತಿದ್ದರು. ಅದರ ಜೊತೆಗೆ ಸಾಮಾನ್ಯ ಜನರಿಗಾಗಿ ಆತ್ಮಬೋಧ, ವಿವೇಕ ಚೂಡಾಮಣಿ ಮುಂತಾದ ಪ್ರಕರಣ ಗ್ರಂಥಗಳನ್ನೂ, ಶಿವಾ ನಂದ ಲಹರೀ, ಸೌಂದರ್ಯ ಲಹರೀ ಮುಂತಾದ ಸ್ತೋತ್ರ ಕಾವ್ಯಗಳನ್ನೂ ಅವರು ರಚಿಸಿದ್ದಾರೆಂದು ನಂಬಲಾಗಿದೆ. ಹೀಗೆ ಅವರು ಶ್ರೇಷ್ಠ ಕವಿಗಳೂ ಆಗಿದ್ದಾರೆ.
ತತ್ತ್ವಗಳು: ಸಮಸ್ತ ವಿಶ್ವದಲ್ಲಿ `ಬ್ರಹ್ಮ’ ವೊಂದೇ ನಿತ್ಯಸತ್ಯ. ಉಳಿದುದೆಲ್ಲ ದೇಶ ಕಾಲ ಸೀಮಿತ. ಬೆಟ್ಟಗಳು, ಸಮುದ್ರಗಳು, ಪೃಥಿವೀ, ಗ್ರಹಸಮೂಹ, ಸೂರ್ಯ, ಚಂದ್ರರು, ನಕ್ಷತ್ರ ಸಮೂಹ–ಇತ್ಯಾದಿಗಳು ಸಾಪೇಕ್ಷವಾಗಿ ಶಾಶ್ವತವೆನಿಸಿದರೂ, ವಸ್ತುತಃ ಶಾಶ್ವತವಲ್ಲ. ಅದೆಲ್ಲ ಪ್ರವಾಹನಿತ್ಯ ಮಾತ್ರ. ಬ್ರಹ್ಮವೇ ಸೋಪಾಧಿಕವಾಗಿ ಸೃಷ್ಟಿ–ಸ್ಥಿತಿ– ಸಂಹಾರಗಳಲ್ಲಿ ತೊಡಗಿದ್ದಾಗ `ಈಶ್ವರ’. ಆಬ್ರಹ್ಮವೇ ಶರೀರೋ ಪಾಧಿಕವಾಗಿದ್ದಾಗ ಜೀವ. ಅನಾದಿಯಾದ ಅವಿದ್ಯೆಯಿಂದ ಮೂಢನಾದ ಜೀವನು ಜನನ–ಮರಣ ಚಕ್ರದಲ್ಲಿ ಸಿಲುಕಿ ದುಃಖ ಪೀಡಿತನಾಗಿರು ತ್ತಾನೆ. ಕರುಣಾಳುವಾದ ಗುರು ಅಂಥ ಶಿಷ್ಯನಿಗೆ ಮಹಾವಾಕ್ಯೋಪದೇಶವನ್ನು ಮಾಡಿ ಅಜ್ಞಾನವನ್ನು ತೊಲಗಿಸಿದಾಗ ಜೀವನಿಗೆ ಮುಕ್ತಿ. ಆ ಉಪದೇಶವನ್ನು ಪಡೆಯಲು ಮೊದಲು ಶಿಷ್ಯನು ಅರ್ಹತೆ ಯನ್ನು ಪಡೆಯಬೇಕು. ನಿತ್ಯಾ ನಿತ್ಯ ವಸ್ತು ವಿವೇಕ, ಇಹಾ ಮುತ್ರ ಫಲ ಭೋಗ ವಿರಾಗ, ಶಮಾದಿಷಟ್ಕ ಸಂಪತ್ತಿ, ಮುಮುಕ್ಷುತ್ವ ಎಂಬ ನಾಲ್ಕು ಶಿಷ್ಯ ನಿಗೆ ಅರ್ಹತೆಗಳು. ವೈರಾಗ್ಯವೂ ಮುಮು ಕ್ಷುತ್ವವೂ ತೀವ್ರ ವಾಗಿದ್ದಾಗ ಮಾತ್ರ ಉಳಿದ ಎಲ್ಲವೂ ಅರ್ಥವತ್ತಾಗುತ್ತವೆ. ಅಂಥ ಶಿಷ್ಯನು ಗುರು ವಿಗೆ ದುರ್ಲಭ. ತಾನು ಜ್ಞಾನಿಯಾಗಿ, ಬ್ರಹ್ಮಾನುಭವಿಯಾಗಿ ಉಪದೇಶವನ್ನು ಕೊಡುವ ಗುರು ಶಿಷ್ಯನಿಗೂ ದುರ್ಲಭ. ಭುವನದ ಭಾಗ್ಯದಿಂದ ಯಾರೋ ಒಬ್ಬಿಬ್ಬರು ಹಾಗೆ ಮುಕ್ತರಾಗಬಹುದಷ್ಟೆ.
ಜೀವನೂ ಬ್ರಹ್ಮವೂ ಒಂದೇ, ಪರ ಸ್ಪರ ಭಿನ್ನರಲ್ಲ ಎಂಬುದು ಆಚಾರ್ಯ ಶಂಕರರ ಪರಮ ಸಿದ್ಧಾಂತ. ಆದ್ದರಿಂದಲೇ ಅವರ ಸಿದ್ಧಾಂತವನ್ನು ಅದ್ವೈತ ಎಂದು ಕರೆಯುವುದು. ಇದಕ್ಕೆ ಆಧಾರವಾಗಿ `ಅಯಮಾತ್ಮಾ ಬ್ರಹ್ಮ’, `ತತ್ತ್ವಮಸಿ’, `ಅಹಂ ಬ್ರಹ್ಮಾಸ್ಮಿ’ ಮುಂತಾದ ಮಹಾ ವಾಕ್ಯಗಳನ್ನು ಆಚಾರ್ಯರು ಉದಾಹರಿಸಿದ್ದಾರೆ. ಈ ಅದ್ವೈತಕ್ಕೆ ಅನುಭವವೂ ಪ್ರಮಾಣ ಎಂದೂ ಅವರು ಹೇಳಿದ್ದಾರೆ. ತಮ್ಮ ಸಿದ್ಧಾಂತ ವನ್ನು ಸ್ಥಾಪಿಸಲು ಶ್ರುತಿ ಸಮ್ಮತವಾದ ತರ್ಕವನ್ನು ಅವರು ಬಳಸಿಕೊಂಡಿದ್ದಾರೆ.
ಆಚಾರ್ಯ ಶಂಕರರು ಸಾಕ್ಷಾತ್ ಭಗ ವಾನ್ ಶಂಕರನ ಅವತಾರ, ಅಜ್ಞಾನದ ಅರಣ್ಯದಲ್ಲಿ ತೊಳಲುತ್ತಿದ್ದ ಜೀವರನ್ನು ಉದ್ಧರಿಸಲು ಶಂಭುವೇ ಹೀಗೆ ಕಾಣಿಸಿ ಕೊಂಡನೆಂಬುದು ಭಕ್ತರ ನಂಬಿಕೆ.
ಅಜ್ಞಾನಾಂತರ್ಗಹನ ಪತಿತಾನ್ ಆತ್ಮವಿದ್ಯೋಪದೇಶೈಃ
ತ್ರಾತುಂ ಲೋಕಾನ್ ಭವದವ ಶಿಖಾತಾಪಪಾಪಚ್ಯಮಾನಾನ್|
ಮುಕ್ತ್ವಾಮೌನಂ ವಟವಿಟಪಿನೋ ಮೂಲತೋ ನಿಸ್ಸರಂತೀ
ಶಂಭೋರ್ಮೂರ್ತಿರ್ಜಯತಿ ಭುವನೇ ಶಂಕರಾಚಾರ್ಯ ರೂಪಾ|