ಕನ್ನಡದಲ್ಲೂ ಬರಲಿದೆ ಕ್ರೇಜಿಸ್ಟಾರ್ ದೃಶ್ಯ-2
ಸಿನಿಮಾ

ಕನ್ನಡದಲ್ಲೂ ಬರಲಿದೆ ಕ್ರೇಜಿಸ್ಟಾರ್ ದೃಶ್ಯ-2

April 24, 2021

ನಿರ್ದೇಶಕ ಪಿ.ವಾಸು ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕಾಂಬಿನೇಶನ್ ನಲ್ಲಿ ಏಳು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ದೃಶ್ಯ ಚಿತ್ರ ಫ್ಯಾಮಿಲಿ ಪ್ರೇಕ್ಷಕರ ಮನಗೆದ್ದಿತ್ತು. ಮಲಯಾಳಂನಲ್ಲಿ ಮುಂದುವರೆದ ಭಾಗವಾದ ದೃಶ್ಯಂ-2 ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವೀಗ ಕನ್ನಡದಲ್ಲೂ ನಿರ್ಮಾಣವಾಗಲಿದೆ. ಈ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೆ ರಾಜೇಂದ್ರ ಪೆÇನ್ನಪ್ಪನ ಪಾತ್ರದಲ್ಲಿ ಮಿಂಚಲಿz್ದÁರೆ.

ರವಿಚಂದ್ರನ್ ಹಾಗೂ ನಿರ್ದೇಶಕ ಪಿ.ವಾಸು ಜೋಡಿ ಇದೀಗ ದೃಶ್ಯ-2 ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದೆ. ಜೀತು ಜೋಸೆಫ್ ಅವರ ನಿರ್ದೇಶನದ ಮತ್ತು ಮೋಹನ್‍ಲಾಲ್ ಅಭಿನಯದ ದೃಶ್ಯಂ-2 ಅದ್ಭುತ ಯಶಸ್ಸು ಪಡೆದಿದೆ.

ಹಿಂದೆ ಕನ್ನಡದ ದೃಶ್ಯ ಸಿನಿಮಾದಲ್ಲಿ ಅಭಿನಯಿಸಿದ್ದ ಬಹುತೇಕ ನಟರು ದೃಶ್ಯ-2 ಸಿನಿಮಾದಲ್ಲಿಯೂ ಮುಂದುವರೆಯಲಿz್ದÁರೆ. ಇದರ ಜೊತೆ ಹೆಚ್ಚುವರಿ ಪಾತ್ರಗಳು ಸಹ ಸೇರಿಕೊಳ್ಳಲಿವೆ. ನವ್ಯಾನಾಯರ್, ಆರೋಹಿ ನಾರಾಯಣï, ಪ್ರಭು, ಆಶಾಶರತ್ ಮತ್ತು ಉನ್ನತಿ ಅವರ ಜೊತೆಗೆ ನಟ ಪ್ರಮೋದ್‍ಶೆಟ್ಟಿ ಅವರು ಈ ಚಿತ್ರತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಲಿz್ದÁರೆ. ಉಳಿದ ಪಾತ್ರವರ್ಗವನ್ನು ಇನ್ನೂ ಅಂತಿಮ ಗೊಳಿಸಲಾಗಿಲ್ಲ.

ಜಿ.ಎಸ್.ವಿ. ಸೀತಾರಾಂ ಅವರು ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ನಿರ್ವಹಿಸಲಿದ್ದು, ಸಂಗೀತ ನಿರ್ದೇಶಕರನ್ನು ಅಂತಿಮಗೊಳಿಸಿಲ್ಲ. ಈ ಚಿತ್ರವನ್ನು ಮುಖೇಶ್ ಆರ್. ಮೆಹ್ತಾ ಮತ್ತು ಸಿ.ವಿ.ಸಾರಥಿ ಸೇರಿ ನಿರ್ಮಿಸಲಿz್ದÁರೆ. ಮೇ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ಈಗಾಗಲೇ ತೆಲುಗಿಗೂ ರೀಮೇಕ್ ಆಗುತ್ತಿರುವ ಈ ಚಿತ್ರಕ್ಕೆ ಮಲಯಾಳಂನಲ್ಲಿ ನಿರ್ದೇಶಿಸಿದ್ದ ಜೀತು ಜೋಸೆಫ್ ಅವರೇ ನಿರ್ದೇಶನ ಮಾಡುತ್ತಿz್ದÁರೆ. ಅಲ್ಲದೆ ತಮಿಳು ಹಾಗೂ ಹಿಂದಿಗೂ ರೀಮೇಕ್ ಆಗುವ ಸಾಧ್ಯತೆ ಇದೆ. ಈ ಹಿಂದೆಯೂ ಮಲಯಾಳಂನಲ್ಲಿ ಮೊದಲು ತಯಾರಾಗಿದ್ದ ದೃಶ್ಯಂ ಚಿತ್ರವು ನಂತರ ಕನ್ನಡ, ತೆಲುಗು, ತಮಿಳು, ಹಿಂದಿ, ಸಿಂಹಿಳಿ ಹಾಗೂ ಚೈನೀಸ್ ಭಾಷೆಗಳಿಗೆ ರೀಮೇಕ್ ಆಗಿ ಎಲ್ಲಾ ಭಾಷೆಗಳಲ್ಲೂ ಯಶಸ್ವಿಯಾಗಿತ್ತು.

Translate »