ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಜಾತಿಯ ವಿಷ ಬೀಜ ಬಿತ್ತುತ್ತಿವೆ
ಮೈಸೂರು

ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಜಾತಿಯ ವಿಷ ಬೀಜ ಬಿತ್ತುತ್ತಿವೆ

February 7, 2022

ಮೈಸೂರು, ಫೆ.6-ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ರಮಾಬಾಯಿನಗರದ ದೀನದಯಾಳ್ ಉಪಾಧ್ಯಾಯ ಬಡಾವಣೆಯ 4ನೇ ಬ್ಲಾಕ್‍ನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಹಾಗೂ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,

ಈ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರಿಗೌಡರು, ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಜನ ಸಾಮಾನ್ಯರಿಗೆ ಉಪಯೋಗವಾಗುವಂತೆ ಯಾವುದೇ ಜನಪರ ಕಾರ್ಯಕ್ರಮಗಳನ್ನು ನೀಡದೆ ಜಾತಿ ಜಾತಿಗಳನ್ನು ಎತ್ತಿ ಕಟ್ಟುತ್ತಾ, ಹಿಂದೂ-ಮುಸ್ಲಿಂ ಎಂಬ ಭೇದಭಾವ ವನ್ನು ಎಲ್ಲಾ ಕಡೆ ಹರಡಿ, ಜನರು ಅಶಾಂತಿ ಯಲ್ಲಿ ಬದುಕುವಂತೆ ಮಾಡುವುದೇ ದೊಡ್ಡ ಸಾಧನೆಯಾಗಿದೆ ಎಂದು ಟೀಕಿಸಿದರು.
ಶ್ರೀರಾಂಪುರ ಗ್ರಾಮ ಪಂಚಾಯಿತಿ ಈಗ ಪಟ್ಟಣ ಪಂಚಾಯಿತಿಯಾಗಿದ್ದು, 18 ವಾರ್ಡ್ ಗಳಾಗಿ ಪರಿವರ್ತನೆಯಾಗಿದೆ, ಶ್ರೀರಾಂ ಪುರ ಪಟ್ಟಣ ಪಂಚಾಯತಿಯ ವಾರ್ಡ್‍ಗಳ ಮೀಸಲಾತಿ ಮುಗಿದ ನಂತರ ಚುನಾವಣಾ ಆಯೋಗ ಯಾವಾಗಬೇಕಾದರೂ ಚುನಾ ವಣೆ ಘೋಷಿಸಬಹುದು. ಆದ್ದರಿಂದ ಈ ಭಾಗದ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಬೇಕೆಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸೂಚನೆಯಂತೆ ಶ್ರೀರಾಂಪುರ ಪಟ್ಟಣ ಪಂಚಾಯಿತಿಯ 19 ಮತಗಟ್ಟೆಗಳಲ್ಲಿ ಪ್ರತಿ ಯೊಂದು ಮತಗಟ್ಟೆಗೆ ಒಬ್ಬರು ಪುರುಷರು ಹಾಗೂ ಒಬ್ಬರು ಮಹಿಳೆಯರನ್ನು ಆಯ್ಕೆ ಮಾಡಿ, ಮತಗಟ್ಟೆಯ ಪಕ್ಷದ ಸದಸ್ಯತ್ವದ ನೋಂದಣಿಗಾರರಾಗಿ ಮಾಡುತ್ತೇವೆ, ಅವರು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಯಲ್ಲಿ ಪ್ರತಿಯೊಂದು ಮನೆಗೆ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ಡಿಜಿಟಲ್ ಸದಸ್ಯತ್ವ ನೋಂದಣಿ ಮಾಡುವುದರ ಮುಖಾಂತರ ಹೆಚ್ಚಿನ ಸದಸ್ಯರನ್ನು ಮಾಡಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಚಾಮುಂ ಡೇಶ್ವರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಸತೀಶ್ ಕುಮಾರ್ ವಹಿಸಿದ್ದರು. ಕೆಪಿಸಿಸಿ ಕಾರ್ಯ ದರ್ಶಿ ಗುರುಪಾದಸ್ವಾಮಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಕ್ಷದ ಸದಸ್ಯತ್ವ ಮುಖ್ಯ ನೊಂದಣಿಗಾರರಾದ ಯೋಗ ಶ್ರೀನಿ ವಾಸ್, ಚಾಮುಂಡೇಶ್ವರಿ ಬ್ಲಾಕ್ ಕಾಂಗ್ರೆಸ್ಸಿನ ಪರಿಶಿಷ್ಟ ಜಾತಿ ಪಂಗಡದ ವಿಭಾಗದ ಅಧ್ಯಕ್ಷ ಲಕ್ಷ್ಮಣ್ ಪ್ರಭು, ಮುಖಂಡರಾದ ಶಿವಲಿಂಗ ಸ್ವಾಮಿ, ಸುಂದರಪ್ಪ, ಸೋಮು, ರಾಜಪ್ಪ ಚಾರಿ, ಕೆ.ಎಸ್.ಪುಟ್ಟಪ್ಪ, ಕಮಲಾಕ್ಷಿ, ಪುಷ್ಪ, ಗಾಯತ್ರಿ ನಾಗರಾಜು,ಶೈಲಜಾ,ನಾಗಮ್ಮ, ದಿನೇಶ್, ಸೋಮಶೇಖರ್, ಸಂತು, ಕೃಷ್ಣಪ್ಪ, ಬೈರಾಚಾರಿ, ನಂದೀಶ್, ಸಿದ್ದರಾಮ, ರಮೇಶ್‍ಕುಮಾರ್, ತಾಜುದ್ದೀನ್, ಸುಜಿತ್ ಕುಮಾರ್, ಅರಸು, ಮಲ್ಲೇಶ್ ಹಾಗೂ ಇನ್ನಿತರ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Translate »