ಕೊಡಗಿನ ನೆರೆ ಸಂತ್ರಸ್ತರಿಗೆ ರೋಟರಿಯಿಂದ 50 ಮನೆ ಹಸ್ತಾಂತರ
ಕೊಡಗು

ಕೊಡಗಿನ ನೆರೆ ಸಂತ್ರಸ್ತರಿಗೆ ರೋಟರಿಯಿಂದ 50 ಮನೆ ಹಸ್ತಾಂತರ

May 16, 2020

ಮಡಿಕೇರಿ, ಮೇ 15- ಕೊಡಗು ಜಿಲ್ಲೆ ಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತ ರಾದ 25 ಬಡ ಕುಟುಂಬಗಳಿಗೆ ಅಂತ ರಾಷ್ಟ್ರೀಯ ರೋಟರಿ ವತಿಯಿಂದ ಕೊಡಗು ರೀ ಬಿಲ್ಡ್ ಯೋಜನೆ ಅಡಿಯಲ್ಲಿ 25 ಮನೆ ಗಳನ್ನು ಹಸ್ತಾಂತರ ಮಾಡಲಾಗಿದ್ದು, ಒಟ್ಟಾರೆ 50 ಮನೆಗಳನ್ನು ಹಸ್ತಾಂತರಿಸಲಾಗಿದೆ.

ಇತ್ತೀಚೆಗೆ ಜಂಬೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ರೋಟರಿ ಪದಾಧಿಕಾರಿ ಗಳು ಮನೆಗಳನ್ನು ಹಸ್ತಾಂತರ ಮಾಡಿ ದರು. ಮಾದಾಪುರ, ಗರಗಂದೂರು ವ್ಯಾಪ್ತಿಯ ನಿವಾಸಿಗಳಿಗೆ ಅವರ ಸ್ವಂತ ಜಾಗಗಳ ಲ್ಲಿಯೇ ಮನೆಗಳನ್ನು ನಿರ್ಮಿಸಿ ನೀಡ ಲಾಗಿದೆ ಎಂದು ರೋಟರಿ ಜಿಲ್ಲಾಧ್ಯಕ್ಷ ಡಾ. ರವಿ ಅಪ್ಪಾಜಿ ತಿಳಿಸಿದ್ದಾರೆ.

ಈವರೆಗೆ ವಿವಿಧ ರೋಟರಿ ಕ್ಲಬ್‍ಗಳು ನೀಡಿದ ಸಹಾಯಧನ ಬಳಸಿ 2.56 ಕೋಟಿ ರೂ. ವೆಚ್ಚದಲ್ಲಿ ಹ್ಯಾಬಿಟೇಟ್ ಫಾರ್ ಹ್ಯೂಮಾ ನಿಟಿ ಇಂಡಿಯಾ ಸಂಸ್ಥೆ ವತಿಯಿಂದ ಮನೆ ಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆಗೆ 5.5 ಲಕ್ಷ ರೂ. ವೆಚ್ಚ ತಗುಲಿದೆ. ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಪ್ರಮುಖರು ಹಾಗೂ ಭಾರತದ ರೋಟರಿ ನಾಯಕರ ಬೆಂಬಲದೊಂದಿಗೆ ಈ ಯೋಜನೆ ಸಾಕಾರಗೊಂಡಿದೆ ಎಂದು ಡಾ. ರವಿ ಅಪ್ಪಾಜಿ ಮಾಹಿತಿ ನೀಡಿದ್ದಾರೆ.

ಲಾಕ್‍ಡೌನ್ ನಿಯಮವಿದ್ದ ಹಿನ್ನಲೆ ಯಲ್ಲಿ ಸರಳವಾಗಿ ಮನೆಗಳನ್ನು ಹಸ್ತಾಂ ತರ ಮಾಡಲಾಗಿದ್ದು, ಈವರೆಗೆ ಒಟ್ಟು 50 ಮನೆಗಳನ್ನು ಫಲಾನುಭವಿಗಳಿಗೆ ನೀಡ ಲಾಗಿದೆ. ಕೆಲವು ನಿರ್ದಿಷ್ಟ ಮಾನದಂಡ ಗಳ ಆಧಾರದ ಮೇಲೆ ಈ 50 ಕುಟುಂಬ ಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲವನ್ನೂ ಕಳೆದುಕೊಂಡು ತೀರಾ ಸಂಕಷ್ಟದ ಪರಿಸ್ಥಿತಿ ಯಲ್ಲಿದ್ದ ಫಲಾನುಭವಿಗಳನ್ನು ಮಾತ್ರ ನಾವು ಆಯ್ಕೆ ಮಾಡಿದ್ದೇವೆ ಎಂದು ಡಾ.ರವಿ ಅಪ್ಪಾಜಿ ತಿಳಿಸಿದರು.

ಮಾಜಿ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಗಳಾದ ಪಿ.ರೋಹಿನಾಥ್ ಅವರು ರಿಬಿಲ್ಡ್ ಕೊಡಗು ಟ್ರಸ್ಟ್ ಪ್ರಾಜೆಕ್ಟಿನ ಅಧ್ಯಕ್ಷ ರಾಗಿದ್ದು, ಮಾಜಿ ರೋಟರಿ ಡಿಸ್ಟ್ರಿಕ್ಟ್ ಗವ ರ್ನರ್ ಕೃಷ್ಣ ಶೆಟ್ಟಿ ಅವರು ಖಜಾಂಚಿ ಹಾಗೂ ಡಿಸ್ಟ್ರಿಕ್ಟ್ ಗವರ್ನರ್ ಜೋಸೆಫ್ ಮ್ಯಾಥ್ಯೂ ಮತ್ತು ಚುನಾಯಿತ ಡಿಸ್ಟ್ರಿಕ್ಟ್ ಗವರ್ನರ್ ರಂಗನಾಥ್ ಭಟ್ ರಿಬಿಲ್ಡ್ ಕೊಡಗು ಟ್ರಸ್ಟ್ ಪ್ರಾಜೆಕ್ಟಿನ ಸದಸ್ಯರಾಗಿದ್ದಾರೆ.

ಲಾಕ್‍ಡೌನ್‍ನಿಂದಾಗಿ ಫಲಾನುಭವಿ ಗಳಿಗೆ ನಿರ್ಮಿಸಲಾಗಿರುವ ಮನೆಗಳನ್ನು ಹಸ್ತಾಂತರಿಸಲು ಸರಳ ಸಮಾರಂಭ ವೊಂದನ್ನು ಇತ್ತೀಚಿಗೆ ಏರ್ಪಡಿಸಲಾಗಿತ್ತು. “ಮುಂಗಾರು ಮಳೆ ಪ್ರಾರಂಭವಾಗುವ ಮೊದಲೇ ಫಲಾನುಭವಿಗಳೆಲ್ಲರೂ ಹೊಸ ದಾಗಿ ನಿರ್ಮಿಸಲಾಗಿರುವ ಈ ಮನೆಗಳಲ್ಲಿ ವಾಸಿಸುವಂತಾಗಲು ಇವುಗಳನ್ನು ಈಗಲೇ ವಿತರಿಸಿದ್ದೇವೆ. ಇವುಗಳೆಲ್ಲವೂ ವಸತಿ ಯೋಗ್ಯ ವಾಗಿದ್ದರೂ ಕೊನೆಯ ಹಂತದ ಸುಣ್ಣ ಬಣ್ಣ ಮತ್ತಿತರ ಕೆಲ ಕಾಮಗಾರಿಗಳನ್ನು ಕೆಲವೇ ದಿನಗಳಲ್ಲಿ ಮುಗಿಸಲಾಗುತ್ತದೆ’’ ಎಂದು ಡಾ. ಅಪ್ಪಾಜಿ ಹೇಳಿದರು.

ಹ್ಯಾಬಿಟೇಟ್ ಫಾರ್ ಹ್ಯುಮಾನಿಟಿ ಹಾಗೂ ಸಂಸ್ಥೆಯ ಹಿರಿಯ ಸದಸ್ಯರು, ಮಾಜಿ ರೋಟರಿ ಇಂಟರ್ ನ್ಯಾಷನಲ್ ಅಧ್ಯಕ್ಷರೂ ಆದ ಕಲ್ಯಾಣ್ ಬ್ಯಾನರ್ಜಿ ಮತ್ತು ಮಾಜಿ ರೋಟರಿ ಇಂಟರ್ ನ್ಯಾಷನಲ್ ಡೈರೆಕ್ಟರ್ ಆದ ಸಿ.ಭಾಸ್ಕರ್ ಸಹಯೋಗದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ.

ಸಮಾರಂಭದಲ್ಲಿ ರೋಟರಿ ಡಿಸ್ಟ್ರಿಕ್ಟ್ ಗವರ್ನರ್, ಬಿರ್ಲಾ ಗ್ರೂಪಿನ ಚೇರ್‍ಮನ್ ರಾಜಶ್ರೀ ಬಿರ್ಲಾ, ಮಾಜಿ ರೋಟರಿ ಇಂಟರ್ ನ್ಯಾಷನಲ್ ಅಧ್ಯಕ್ಷ ರಾಜಾ ಸಾಬೂ, ರೋಟರಿ ಇಂಟರ್‍ನ್ಯಾಷನಲ್ ನಾಮನಿರ್ದೇಶಿತ ಅಧ್ಯಕ್ಷ ಶೇಖರ್ ಮೆಹ್ತಾ, ರೋಟರಿ ಇಂಟರ್ ನ್ಯಾಷ ನಲ್ ಡೈರೆಕ್ಟರ್‍ಗಳಾದ ಡಾ.ಭರತ್ ಪಾಂಡ್ಯ ಹಾಗೂ ಕಮಲ್ ಸಾಂಗ್ವಿ, ರೋಟರಿ ಇಂಡಿಯಾ ಲಿಟರಸಿ ಮಿಷನ್, ರೋಟರಿ ನ್ಯೂಸ್ ಟ್ರಸ್ಟ್, ರೋಟರಿ ಇಂಟರ್ ನ್ಯಾಷ ನಲ್ ನಾಮನಿರ್ದೇಶಿತ ಅಧ್ಯಕ್ಷರಾದ ಡಾ.ರವಿ ವಡ್ಲಮಣಿ, ವೆಂಕಟೇಶ್, ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಡಾ.ದೇವದಾಸ್ ರೈ, ರೋಟರಿ ಡಿಸ್ಟ್ರಿಕ್ಟ್ 3181 ಗ್ರ್ಯಾಂಟ್ಸ್, ಡಿಸ್ಟ್ರಿಕ್ಟ್ ಗವರ್ನರ್ ಗಳು, ಮಾಜಿ ಗವರ್ನರ್‍ಗಳು, ವಿವಿಧ ರೋಟರಿ ಕ್ಲಬ್‍ಗಳ ಅಧ್ಯಕ್ಷರು, ರೋಟರಿ ಯನ್ನರು, ದಾನಿಗಳು ಉಪಸ್ಥಿತರಿದ್ದರು.

Translate »