ಖಾದಿ ಬಳಕೆ ಕುರಿತು ಜಾಗೃತಿ ಮೂಡಿಸಿ
ಮೈಸೂರು

ಖಾದಿ ಬಳಕೆ ಕುರಿತು ಜಾಗೃತಿ ಮೂಡಿಸಿ

October 3, 2021

ಮೈಸೂರು,ಅ.೨-ಬಿಜೆಪಿ ವ್ಯಾಪಾರ ಮತ್ತು ವಾಣ ಜ್ಯ ಪ್ರಕೋಷ್ಠ ಬಿಜೆಪಿ ಮೈಸೂರು ನಗರ ವತಿಯಿಂದ ಗಾಂಧಿ ಜಯಂತಿ ಆಚರಣೆ ಹಾಗೂ ಸೇವಾ ಮತ್ತು ಸಮರ್ಪಣಾ ಅಭಿಯಾನ ಅಂಗವಾಗಿ ವಸ್ತುಪ್ರದ ರ್ಶನ ಆವರಣದ ತೋಟಗಾರಿಕೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಖಾದಿ ವಸ್ತç ವಿತರಿಸಿ, ಜಾಗೃತಿ ಮೂಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್‌ಗೌಡ ಮಾತನಾಡಿ, ಮಹಾತ್ಮ ಗಾಂಧೀಜಿ ಸ್ವತಃ ಚರಕದಲ್ಲಿ ನೇಯ್ದ ಖಾದಿಯನ್ನು ಧರಿಸುತ್ತಿ ದ್ದರು. ವಿದೇಶಿ ಬಟ್ಟೆಗಳ ವ್ಯಾಮೋಹಕ್ಕೆ ಒಳಗಾಗದೆ, ಖಾದಿ ಗ್ರಾಮೋದ್ಯೋಗಕ್ಕೆ ಹೆಚ್ಚಿನ ಒತ್ತು ನೀಡಿದರು. ಹಾಗೆಯೇ ನಂಜನಗೂಡು ತಾಲೂಕಿನ ಬದನ ವಾಳು ಗ್ರಾಮಕ್ಕೆ ಬಂದು ಖಾದಿ ಗ್ರಾಮೋದ್ಯೋಗ ವನ್ನು ಪರಿಚಯಿಸಿದರು ಎಂದರು.

ಯುವಕ-ಯುವತಿಯರು ಖಾದಿಯನ್ನು ಬಳ ಸುವ ಕುರಿತು ಜಾಗೃತಿ ಮೂಡಿಸಬೇಕು. ಖಾದಿ ಬಟ್ಟೆ ಧರಿಸುವುದರಿಂದ ಸ್ವಾತಂತ್ರö್ಯಕ್ಕೆ ಗೌರವ ನೀಡಿದಂತಾ ಗುತ್ತದೆ ಎಂದರು. ವ್ಯಾಪಾರ ಮತ್ತು ವಾಣ ಜ್ಯ ಪ್ರಕೋ ಷ್ಠದ ರಾಜ್ಯ ಸಮಿತಿ ಸದಸ್ಯೆ ವಿದ್ಯಾ ಅರಸು, ನಗರ ಬಿಜೆಪಿ ವ್ಯಾಪಾರ-ವಾಣ ಜ್ಯ ಪ್ರಕೋಷ್ಠದ ಸಂಚಾಲಕ ಅಪೂರ್ವ ಸುರೇಶ್, ಸಹ ಸಂಚಾಲಕ ಪರಮೇಶ್ ಗೌಡ, ನಗರ ಉಪಾಧ್ಯಕ್ಷ ದಿನೇಶ್, ಪೂಣ ðಮಾ ಚಂದ್ರಪ್ಪ, ಗೋಕುಲ್ ಗೋವರ್ಧನ, ನವೀನ್, ಪ್ರದೀಪ್ ಕುಮಾರ್, ಕಿರಣ್, ಬೆಳಕು ಮಂಜು, ಲೋಹಿತ್, ಮಧುಸೂದನ್, ಕುಮಾರ್ ಇಟ್ಟಿಗೆಗೂಡು, ಜೈ ಗಣೇಶ್, ಕೃಷ್ಣ, ಸುರೇಂದ್ರ ಮತ್ತಿತರರು ಇದ್ದರು.

Translate »