`ಮೆದುಳಿನ ಆಘಾತ-ವಾಸ್ತವಾಂಶಗಳು’ ಕೃತಿ ಲೋಕಾರ್ಪಣೆ
ಮೈಸೂರು

`ಮೆದುಳಿನ ಆಘಾತ-ವಾಸ್ತವಾಂಶಗಳು’ ಕೃತಿ ಲೋಕಾರ್ಪಣೆ

October 21, 2021

ಮೈಸೂರು, ಅ.20(ಎಂಟಿವೈ)-ಡಾ. ಎನ್.ಕೆ.ವೆಂಕಟರಮಣ ಅನುವಾದಿಸಿರುವ `ಮೆದುಳಿನ ಆಘಾತ-ವಾಸ್ತವಾಂಶಗಳು’ ಕೃತಿಯನ್ನು ಸುತ್ತೂರು ಮಠದ ಶ್ರೀ ಶಿವ ರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇಂದು ಲೋಕಾ ರ್ಪಣೆ ಮಾಡಿ, ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವತ್ತ ಎಲ್ಲರೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಬುಧವಾರ ಬೆಳಗ್ಗೆ ನಡೆದ ಸರಳ ಸಮಾರಂಭದಲ್ಲಿ ಕೃತಿ ಲೋಕಾರ್ಪಣೆ ಮಾಡಿದ ಬಳಿಕ ಸುತ್ತೂರು ಶ್ರೀಗಳು ಮಾತನಾಡಿ, ಮೆದುಳಿನ ಆರೋ ಗ್ಯದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಡಾ.ಎನ್.ಕೆ.ವೆಂಕಟರಮಣ ಅವರ `ಮೆದುಳಿನ ಆಘಾತ-ವಾಸ್ತವಾಂಶ ಗಳು’ ಕೃತಿ ಪ್ರಸ್ತುತ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತ ಗಳಲ್ಲಿ ಹಲವು ಮಂದಿ ತಲೆಗೆ ಗಂಭೀರ ವಾಗಿ ಗಾಯ ಮಾಡಿಕೊಳ್ಳುತ್ತಿದ್ದಾರೆ. ಹೆಲ್ಮೆಟ್ ಧರಿಸದೇ ಪೆÇಲೀಸರ ಕಣ್ತಪ್ಪಿಸಿ ದ್ವಿಚಕ್ರ ವಾಹನ ಚಾಲನೆ ಮಾಡುವುದನ್ನು ಗಮನಿಸಿದ್ದೇವೆ. ಪೊಲೀಸರಿಂದ ತಪ್ಪಿಸಿ ಕೊಳ್ಳುವುದೇ ದೊಡ್ಡ ಸಾಹಸ ಎಂಬಂತೆ ಯುವಕರು ಬಿಂಬಿಸಿಕೊಳ್ಳುತ್ತಿದ್ದಾರೆ. ಹೆಲ್ಮೆಟ್ ಧರಿಸುವುದು ಯಾರ ಸುರಕ್ಷತೆಗಾಗಿ ಎಂದು ತಿಳಿದುಕೊಳ್ಳಬೇಕು. ಪೆÇಲೀಸರಿಗಾಗಿಯೋ ಅಥವಾ ಪ್ರಾಣ ರಕ್ಷಿಸಿಕೊಳ್ಳಲು ಧರಿಸ ಬೇಕೋ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಇಂದಿನ ಯುವ ಪೀಳಿಗೆಯವರ ವರ್ತನೆಯನ್ನು ಬಿಚ್ಚಿಟ್ಟರು.
ದೇಹದ ಅತ್ಯಂತ ಸೂಕ್ಷ್ಮ ಅಂಗವೇ ಮೆದುಳು. ಯಾವುದೇ ಅಂಗ ಊನವಾದರೂ ಚಿಕಿತ್ಸೆ ಪಡೆದು ಗುಣ ಮಾಡಿಕೊಳ್ಳಬಹುದು. ಆದರೆ ಮೆದುಳಿಗೆ ಒಮ್ಮೆ ಹಾನಿಯಾದರೆ, ಇಡೀ ದೇಹವೇ ನಿಸ್ತೇಜವಾಗುತ್ತದೆ. ದೇಹದ ಎಲ್ಲ ಅಂಗಗಳು ಸರಿಯಾಗಿದ್ದರೆ ಮನುಷ್ಯ ಸಂತೋಷವಾಗಿರಲು ಸಾಧ್ಯ. ಅಪಘಾತ ದಿಂದ ಮೆದುಳು ನಿಸ್ತೇಜಗೊಂಡ ವ್ಯಕ್ತಿಯ ಅಂಗಾಂಗಗಳ ದಾನ ಮಾಡುವುದನ್ನು ಕಾಣಬಹುದಾಗಿದೆ. ಮೆದುಳಿನ ಆರೋಗ್ಯ ಕುರಿತು ಕಾಳಜಿ ಮಾಡಬೇಕು. ವೈದ್ಯರ ನೀಡುವ ಸಲಹೆ ಗಳನ್ನು ಗಂಭೀರವಾಗಿ ಸ್ವೀಕರಿಸಬೇಕು. ದೈಹಿಕ, ಮಾನಸಿಕ ಆರೋಗ್ಯದಲ್ಲಿ ಸಮತೋಲನ ಕಾಪಾಡಿ ಕೊಳ್ಳಬೇಕು ಎಂದು ಹೇಳಿದರು.

ವಾಲ್ಮೀಕಿ ಜಯಂತಿ ಶುಭದಿನದಂದೇ ಮೆದುಳಿನ ಆರೋಗ್ಯ ಕುರಿತ ಕೃತಿ ಲೋಕಾ ರ್ಪಣೆ ಮಾಡಿದ್ದೇವೆ ಎಂದ ಶ್ರೀಗಳು, ರಾಮಾ ಯಣ ಮತ್ತು ಮಹಾಭಾರತ ಈ ದೇಶದ ಅವಿಭಾಜ್ಯ ಭಾಗ. ಈ ದೇಶದ ಸಾಂಸ್ಕೃತಿಕ ಪರಂಪರೆ ಅರ್ಥ ಮಾಡಿಕೊಳ್ಳಬೇಕಾದರೆ ಅವುಗಳಲ್ಲಿ ಬರುವಂತಹ ಸಂಗತಿಗಳನ್ನು ಅರಿಯಬೇಕು. ಈ ಎರಡೂ ಮಹಾಕಾವ್ಯ ಗಳನ್ನು ಯುವಕರು ಅಧ್ಯಯನ ಮಾಡ ಬೇಕು ಎಂದು ಸೂಚಿಸಿದರು.
ನ್ಯೂರೋ ಸರ್ಜನ್ ಡಾ.ಎನ್.ಕೆ. ವೆಂಕಟ ರಮಣ ಮಾತನಾಡಿ, ಮೆದುಳಿನ ಆಘಾತ ಎನ್ನುವುದು ಇಂದು ಸಾಮಾನ್ಯವಾಗಿ ಬಿಟ್ಟಿದೆ. ಅದಕ್ಕೆ ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಿದರೆ ಬೇಗ ಗುಣಮುಖರಾಗಬಹುದು. ಮೆದು ಳಿನ ರಕ್ತ ಸಂಚಾರಕ್ಕೆ ತೊಂದರೆಯಾದಾಗ ಆಘಾತಗಳು ಸಂಭವಿಸುತ್ತವೆ. 30 ವರ್ಷದ ಅನುಭವವನ್ನು ಒಂದು ದಾಖಲೆಯ ರೂಪ ದಲ್ಲಿ ಈ ಕೃತಿಯಲ್ಲಿ ತಿಳಿಸಲಾಗಿದೆ ಎಂದರು.

ಕೃತಿ ಸಂಪಾದಕ ಡಾ.ಕೆ.ಆರ್. ಕಮಲೇಶ್ ಮಿದುಳಿಗೆ ಸಂಬಂಧಪಟ್ಟ ಅನೇಕ ಖಾಯಿಲೆಗಳಿಗೆ ಹೆಚ್ಚಿನ ಔಷಧಗಳನ್ನು ನೀಡದೇ ಧ್ಯಾನ, ವ್ಯಾಯಾಮ ಮತ್ತು ಆಹಾರ ಪದ್ಧತಿಯ ಮೂಲಕವೇ ಚಿಕಿತ್ಸೆಯನ್ನು ಡಾ. ವೆಂಕಟರಮಣರವರು ನೀಡುತ್ತಿದ್ದಾರೆ. ಇದುವರೆಗೂ 40 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ಮಾಡಿ, ಅನೇಕರಿಗೆ ಪುನರ್ಜನ್ಮ ನೀಡಿದ್ದಾರೆ ಎಂದರು. ಕಾರ್ಯ ಕ್ರಮದಲ್ಲಿ ಕೃತಿ ಅನುವಾದಕ ಬಿ.ಎಸ್. ವೆಂಕ ಟೇಶ್ ಪ್ರಸಾದ್, ಎಂ.ಕೆ. ಶಿವಶಂಕರ್, ಸಪ್ನ ಬುಕ್‍ಹೌಸ್ ಸಂಸ್ಥೆಯ ಎನ್.ವಿಜಯ್, ರುದ್ರ ದೇವರು, ಬಿ.ನಿರಂಜನಮೂರ್ತಿ, ಡಾ. ರುದ್ರಮುನಿ ಉಪಸ್ಥಿತರಿದ್ದರು.

Translate »