ಮೈಸೂರು, ಜೂ.27(ಎಂಟಿವೈ)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವರುಣಾ ವಿಧಾನಸಭಾ ಕ್ಷೇತ್ರ ಶಾಸಕ ಡಾ.ಯತೀಂದ್ರ ಸಿದ್ದ ರಾಮಯ್ಯ ಅವರ ಜನ್ಮದಿನ ವಾದ ಶನಿ ವಾರ ನಗರದ ವಿವಿಧೆಡೆ ಕಾಂಗ್ರೆಸ್ ಕಾರ್ಯ ಕರ್ತರು ಸಮಾಜ ಸೇವಾ ಕಾರ್ಯ ಕೈಗೊಂ ಡರು. ಆ ಮೂಲಕ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿ ಆಚರಿಸಿದರು.
ಮೈಸೂರಿನ ಬಂಬೂಬಜಾರ್‍ನಲ್ಲಿ ರುವ ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳ ಶಾಲೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಕರ್ನಾಟಕ ರಾಜ್ಯ ಹಿಂದು ಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಅಖಿಲ ಕರ್ನಾಟಕ ಸಿದ್ದರಾಮಯ್ಯ ಅಭಿಮಾನಿ ಬಳಗದ ಅಧ್ಯಕ್ಷ ಹಿನಕಲ್ ಪ್ರಕಾಶ್ ನೇತೃತ್ವದಲ್ಲಿ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಪ್ರೊ.ಕೆ.ಎಸ್. ಭಗವಾನ್ ವಿಶೇಷ ಮಕ್ಕಳಿಗೆ ಉಣಬಡಿ ಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಭಗವಾನ್, ಜನಸೇವೆಯಲ್ಲಿ ತೊಡಗಿರುವ ನಾಯಕರ ಹುಟ್ಟುಹಬ್ಬದಲ್ಲಿ ಇಂಥ ಸೇವಾಕಾರ್ಯ ಮಾಡುತ್ತಿರುವುದು ಅರ್ಥಪೂರ್ಣ. ಪ್ರಸ್ತುತ ಕಲುಷಿತಗೊಳ್ಳುತ್ತಿರುವ ರಾಜಕಾರಣದ ಮೌಲ್ಯ ಕಾಪಾಡಲು ಡಾ.ಯತೀಂದ್ರ ಅವರಂತಹ ಯುವನಾಯಕರ ಅಗತ್ಯ ಹೆಚ್ಚಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿಂದಲೂ ಸಾಮಾಜಿಕ ನ್ಯಾಯ, ಸಮಸಮಾಜ ನಿರ್ಮಾಣದ ಧ್ಯೇಯ ಇಟ್ಟುಕೊಂಡು ಹೋರಾಟ ಮಾಡಿ ಕೊಂಡೇ ಬಂದವರು. ಈಗ ಸಮ ಸಮಾಜ ನಿರ್ಮಾಣದ ರಥ ಮುನ್ನಡೆಸುವ ಜವಾ ಬ್ದಾರಿ ಡಾ.ಯತೀಂದ್ರ ಅವರ ಮೇಲಿದೆ. ಅವರಿಗೆ ಇನ್ನಷ್ಟು ಒಳ್ಳೆಯ ಅವಕಾಶ ಒದಗಿಬರಲಿ. ಅದಕ್ಕೆ ಎಲ್ಲರೂ ಹೆಗಲು ಕೊಟ್ಟು ಸಹಕರಿಸಲಿ ಎಂದು ಆಶಿಸಿದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಮಾತನಾಡಿ, ನಾಡು ಕಂಡು ಅಪರೂಪದ ರಾಜಕಾರಣಿ ಸಿದ್ದರಾಮಯ್ಯ. ಅವರ ಪುತ್ರ ರಾದ ಶಾಸಕ ಡಾ.ಯತೀಂದ್ರ ಅವರು ತಂದೆಯ ಹಾದಿಯಲ್ಲೇ ಸಮಾಜ ಸೇವೆ ಯಲ್ಲಿ ತೊಡಗಿದ್ದಾರೆ. ಬಡವರು, ದೀನ ದಲಿತರು, ಶೋಷಿತ ಸಮುದಾಯದವರ ಏಳಿಗೆಗೆ ಪಣತೊಟ್ಟು ಸೇವೆ ಸಲ್ಲಿಸುತ್ತಿ ದ್ದಾರೆ. ತಾಯಿ ಚಾಮುಂಡೇಶ್ವರಿ ಅವರಿಗೆ ಆಯುಷ್ಯ, ಆರೋಗ್ಯ ಕರುಣಿಸಲಿ, ಮತ್ತಷ್ಟು ಅವಕಾಶ ಒದಗಿಸಲಿ ಎಂದು ಪ್ರಾರ್ಥಿಸುವೆ ಎಂದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವ ರಾಮ ಮಾತನಾಡಿ, ರಾಕೇಶ್ ಸಿದ್ದ ರಾಮಯ್ಯ ಅವರ ಅಕಾಲಿಕ ನಿಧನದಿಂ ದಾಗಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ನೀಡಿದ ರಾಜಕೀಯ ಅನುಭವದ ಪಾಠ ದಿಂದಾಗಿ ಕಳೆದ 2 ವರ್ಷದಿಂದ ಶಾಸಕ ರಾಗಿ ಡಾ.ಯತೀಂದ್ರ ಅವರು ಅತ್ಯುತ್ತಮ ವಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಅಭಿ ವೃದ್ಧಿಗೆ, ಶೋಷಿತರ ಏಳಿಗೆಗೆ ಸಂಕಲ್ಪತೊಟ್ಟಿ ದ್ದಾರೆ. ರಾಜ್ಯದಲ್ಲಿ ಯುವ ಸಮು ದಾಯದ ನಾಯಕತ್ವ ವಹಿಸಿಕೊಂಡು ಪಕ್ಷ ಸಂಘಟಿಸುವ ಜವಾಬ್ದಾರಿಯನ್ನು ಡಾ. ಯತೀಂದ್ರ ಅವರಿಗೆ ನೀಡಿದರೆ ಸಂಘಟನೆ ಮತ್ತಷ್ಟು ಸದೃಢಗೊಳ್ಳಲಿದೆ ಎಂದರು.
ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಸಿ.ವೆಂಕಟೇಶ್, ಸೋಮಶೇಖರ್, ಕಾಡನಹಳ್ಳಿ ಸ್ವಾಮಿಗೌಡ, ಕೋ-ಆಪರೇ ಟಿವ್ ಬ್ಯಾಂಕ್ ನಿರ್ದೇಶಕ ರವಿ ಕುಮಾರ್, ಆರ್.ಕೆ.ರವಿ, ಕುರುಬಾರಹಳ್ಳಿ ಎಂ.ಎ. ಕಮಲಾ ಅನಂತರಾಮು ಇನ್ನಿತರರಿದ್ದರು.
ಫಲ ವಿತರಣೆ: ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವೇದಿಕೆಯಿಂದ ನಾಡನ ಹಳ್ಳಿಯ ಶ್ರೀ ವಾಸವಿ ಶಾಂತಿಧಾಮ ವೃದ್ಧಾ ಶ್ರಮ ನಿವಾಸಿಗಳಿಗೆ ಹಣ್ಣು ಮತ್ತಿತರ ವಸ್ತು ಗಳನ್ನು ವಿತರಿಸಲಾಯಿತು. ಹಣ್ಣು ವಿತರಿ ಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ರಾಷ್ಟ್ರ ಮತ್ತು ರಾಜ್ಯದ ರಾಜ ಕಾರಣ ದಲ್ಲಾಳಿ ಮತ್ತು ಮಾರುಕಟ್ಟೆ ರಾಜ ಕಾರಣಕ್ಕೆ ಬಲಿಯಾಗುತ್ತಿದೆ. ಜನರ ಕಲ್ಯಾ ಣದ ಬದಲಾಗಿ ಸ್ವಾರ್ಥ ಮತ್ತು ಜಾತಿ ಆಧಾ ರಿತ ರಾಜಕಾರಣ ವಿಜೃಂಭಿಸುತ್ತಿದೆ. ಈ ಮಾಲಿನ್ಯ ಶುದ್ಧೀಕರಣಕ್ಕೆ ಡಾ. ಯತೀಂದ್ರ ಸಿದ್ದರಾಮಯ್ಯ ಅಂತಹ ಯುವ ರಾಜ ಕಾರಣಿಗಳು ಅಗತ್ಯ ಎಂದರು.
ಸಮಾರಂಭದಲ್ಲಿ ವರುಣಾ ವಿಧಾನ ಸಭಾ ಕ್ಷೇತ್ರದ ಜಿಪಂ ಸದಸ್ಯೆ ಭಾಗ್ಯಮ್ಮ, ಮಾಜಿ ಸದಸ್ಯ ಹದಿನಾರು ನಂಜಪ್ಪ, ತಾಪಂ ಸದಸ್ಯ ದಾಸನೂರು ಪದ್ಮನಾಭ, ತಾಪಂ ಮಾಜಿ ಅಧ್ಯಕ್ಷ ಎಂ.ಟಿ.ರವಿಕುಮಾರ್, ಹಿರಿಯ ಮುಖಂಡ ಕುಪ್ಪರವಳ್ಳಿ ಮುನಿಯಪ್ಪ, ವೇದಿಕೆ ಸಂಚಾಲಕರಾದ ವಕೀಲ ಎಂ.ಶಿವ ಪ್ರಸಾದ್, ಮಳಿಯೂರು ಸಂತೋಷ್, ಕಾಡನಹÀಳ್ಳಿ ಚಿಕ್ಕಸ್ವಾಮಿ, ಹೇಮಂತ್, ಅಪ್ಪು, ಜೈರಾಮ್, ಗಿಣಿ ಸ್ವಾಮಿ, ತಿಮ್ಮರಾಜು ಹಾಗೂ ವಾಸವಿ ಶಾಂತಿಧಾಮದ ಟ್ರಸ್ಟಿ ಜಿ.ವಿ.ಮಂಜುನಾಥ ಇತರರು ಸಮಾರಂಭದಲ್ಲಿದ್ದರು.