ಮೈಸೂರು,ಜೂ.17(ಎಂಟಿವೈ)- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಇದ್ದರೂ ಕೇಂದ್ರ ಸರ್ಕಾರ ಕಳೆದ 10 ದಿನಗಳಿಂದ ಇಂಧನ ಬೆಲೆ ಹೆಚ್ಚಿಸುತ್ತಲೇ ಇದ್ದು, ಬಡ ಹಾಗೂ ಮಧ್ಯಮ ವರ್ಗದ ಜನರ ಜೀವನದ ಮೇಲೆ ಗದಾಪ್ರಹಾರ ಮಾಡುತ್ತಿದೆ ಎಂದು ಟೀಕಿಸಿ ಮೈಸೂರು ಕನ್ನಡ ವೇದಿಕೆ (ಮೈಕವೇ) ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮೈಸೂರು ಡಿಸಿ ಕಚೇರಿ ಬಳಿ ಪ್ರತಿಭಟಿಸಿದ ವೇದಿಕೆ ಕಾರ್ಯಕರ್ತರು, ಲಾಕ್‍ಡೌನ್ ನಿಂದಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಅಪಾರ ಸಂಖ್ಯೆಯಲ್ಲಿ ನೌಕರರಿಗೆ ಸರಿಯಾಗಿ ಸಂಬಳ ವಿತರಿಸಿಲ್ಲ. ಶ್ರಮಿಕ ವರ್ಗಕ್ಕೆ ಕೆಲಸವಿಲ್ಲದೆ, ಜೀವನ ನಿರ್ವಹಣೆಯೂ ಕಷ್ಟವಾಗಿದೆ. ವ್ಯಾಪಾರಿಗಳಿಗೆ ವಹಿವಾಟು ಇಲ್ಲದೆ ಸಂಪಾದನೆ ಇಲ್ಲದಂತಾಗಿದೆ. ಇಷ್ಟೆಲ್ಲಾ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿರುವಾಗ ತೈಲ ಬೆಲೆ ಹೆಚ್ಚಳ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೇಂದ್ರ ಸರ್ಕಾರ ತಕ್ಷಣವೇ ತೈಲ ಬೆಲೆ ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು. ವೇದಿಕೆ ಅಧ್ಯP್ಷÀ ಎಸ್.ಬಾಲಕೃಷ್ಣ, ಪÀದಾಧಿಕಾರಿಗಳಾದ ರವಿ, ಬೋಗಾದಿ ಸಿz್ದÉೀಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು, ಗೋಪಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.