`ಟ್ರೀ ಪಾರ್ಕ್’ ಪರಿಕಲ್ಪನೆಯಲ್ಲಿ ಹಸಿರೀಕರಣಕ್ಕೆ ಒತ್ತು
ಮೈಸೂರು

`ಟ್ರೀ ಪಾರ್ಕ್’ ಪರಿಕಲ್ಪನೆಯಲ್ಲಿ ಹಸಿರೀಕರಣಕ್ಕೆ ಒತ್ತು

July 18, 2021

ಮೈಸೂರು,ಜು.17(ಪಿಎಂ)-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿರ್ಮಿ ಸಿರುವ ಹಂಚ್ಯಾ-ಸಾತಗಳ್ಳಿ ಎ ವಲಯ ಬಡಾವಣೆಯಲ್ಲಿ `ಟ್ರೀ ಪಾರ್ಕ್’ ಪರಿಕಲ್ಪನೆ ಯಲ್ಲಿ ಹಸಿರೀಕರಣಕ್ಕೆ ಒತ್ತು ನೀಡಲಾಗಿದೆ.

ಇತ್ತೀಚೆಗೆ ಮುಡಾ ವತಿಯಿಂದ ಇಲ್ಲಿನ 10 ಎಕರೆ ಪ್ರದೇಶದಲ್ಲಿ 2 ಸಾವಿರ ಗಿಡ ಗಳನ್ನು ನೆಡಲು ಯೋಜನೆ ರೂಪಿಸಿ, ಈಗಾ ಗಲೇ ಗಿಡ ನೆಡುವ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಆಂಧ್ರಪ್ರದೇಶದ ರಾಜಮಂಡ್ರಿಯಿಂದ 150 ಗಿಡಗಳನ್ನು ತಂದು ಇಲ್ಲಿ ನೆಟ್ಟಿರುವುದು ವಿಶೇಷ. ಇವು ಗಿಡವಾಗಿದ್ದರೂ ಸುಮಾರು 10 ಅಡಿ ಎತ್ತರಕ್ಕೆ ಬೆಳೆದಿವೆ. ಸದರಿ ಪ್ರದೇಶವನ್ನು ಉದ್ಯಾನವನಕ್ಕಾಗಿ ಮೀಸಲಿರಿಸಲಾಗಿತ್ತು. ಆದರೆ ಅಭಿವೃದ್ಧಿಪಡಿಸದೇ ಆಗೇ ಬಿಡ ಲಾಗಿತ್ತು. ಇದೀಗ ಮರಗಳ ಉದ್ಯಾನವನ (ಟ್ರೀ ಪಾರ್ಕ್) ಪರಿಕಲ್ಪನೆಯಲ್ಲಿ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಹಲಸು, ಹೊಂಗೆ, ಸಂಪಿಗೆ, ಮಹಾಘನಿ, ಬೇವು, ನಾಗಲಿಂಗಪುಷ್ಪ, ಕಾಡುಬೇವು ಸೇರಿದಂತೆ ವಿವಿಧ ಜಾತಿಯ ದೀರ್ಘಕಾಲ ಉಳಿಯುವ ಹಾಗೂ ವಾತಾವರಣಕ್ಕೆ ಹೆಚ್ಚು ಆಮ್ಲ ಜನಕ ನೀಡುವ ಸಸಿಗಳನ್ನು ನೆಡಲಾಗಿದೆ.

15 ಅಡಿ ಅಂತರದಲ್ಲಿ ಸಸಿಗಳನ್ನು ನೆಡಸಲಾಗಿದ್ದು, ಮುಂದಿನ ದಿನಗಳಲ್ಲಿ ವಸತಿ ಪ್ರದೇಶ ಅಭಿವೃದ್ಧಿಯಾದ ಬಳಿಕ ಈ ಟ್ರೀ ಪಾರ್ಕ್‍ನಲ್ಲಿ ಪಾದಚಾರಿ ಮಾರ್ಗ, ಕಾರಂಜಿ, ಮಕ್ಕಳ ಆಟಿಕೆಗಳು ಸೇರಿದಂತೆ ಅನೇಕ ಸೌಲಭ್ಯ ಕಲ್ಪಿಸಲು ಮುಡಾ ಉದ್ದೇಶಿಸಿದೆ. ಇಲ್ಲಿ ಶನಿವಾರ ನಗರಾಭಿವೃದ್ಧಿ ಸಚಿವ ಭೈರತಿ ಬಸವ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಜಿ.ಟಿ. ದೇವೇಗೌಡ, ಸಂಸದ ಪ್ರತಾಪ್ ಸಿಂಹ ಸಾಂಕೇತಿಕವಾಗಿ ನಾಲ್ಕೈದು ಗಿಡಗಳನ್ನು ನೆಟ್ಟು ನೀರೆರೆದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮುಡಾ ಆಯುಕ್ತ ಡಿ.ಬಿ.ನಟೇಶ್, ಮುಡಾ ಸದಸ್ಯರಾದ ಕೆ.ಮಾದೇಶ್, ನವೀನ್, ಲಕ್ಷ್ಮೀದೇವಿ ಮತ್ತಿತರರು ಹಾಜರಿದ್ದರು.

Translate »