ನನ್ನ ಸರ್ಕಾರ ಭಾರತವನ್ನು ಪರಿವರ್ತಿಸಲಿದೆ: ಪ್ರಧಾನಿ ಮೋದಿ
ದೇಶ-ವಿದೇಶ

ನನ್ನ ಸರ್ಕಾರ ಭಾರತವನ್ನು ಪರಿವರ್ತಿಸಲಿದೆ: ಪ್ರಧಾನಿ ಮೋದಿ

April 19, 2018

ಸ್ವೀಡನ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 3 ದೇಶಗಳ 5 ದಿನಗಳ ಪ್ರವಾಸ ವನ್ನು ಮಂಗಳವಾರ ಸ್ವೀಡನ್ನಿಂದ ಆರಂಭಿಸಿದ್ದು, ನನ್ನ ಸರ್ಕಾರ ಭಾರತವನ್ನು  ಪರಿವರ್ತಿಸಲಿದೆ ಎಂದು ಮಂಗಳವಾರ ಹೇಳಿದ್ದಾರೆ.

ಸ್ವೀಡನ್ ಸ್ಟಾಕ್ಹೋಮ್ ವಿಶ್ವ ವಿದ್ಯಾಲಯದಲ್ಲಿ ಅನಿವಾಸಿಯ ಭಾರತೀಯರನ್ನು ಉದ್ದೇಶಿಸಿ ಮಾತ ನಾಡಿದ ಅವರು, ನನ್ನ ಸರ್ಕಾರ ಭಾರತವನ್ನು ಪರಿವರ್ತಿಸಲಿದೆ ಎಂದು ಹೇಳಿ ದ್ದಾರೆ. ಅಲ್ಲದೆ, ನವಭಾರತ ನಿರ್ಮಾಣಕ್ಕೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತಂತೆ ವಿವರಿಸಿದರು. ನಮ್ಮ ಸರ್ಕಾರ ತೆಗೆದು ಕೊಳ್ಳುತ್ತಿರುವ ಕ್ರಮಗಳು ಸುಧಾರಣೆಗಾಗಿ ಅಲ್ಲ, ಪರಿವರ್ತನೆಗಾಗಿ ಆಗಿದೆ. ಇದು ನಮ್ಮ ಭರವಸೆ. ನಾವು ಭಾರತವನ್ನು ಪರಿವರ್ತಿಸುತ್ತೇವೆ. ಸಾಗುವ ರಸ್ತೆಗಳು ಮುಂದಿದೆ. ಆದರೆ, ನಾವು ನಮ್ಮ ದೃಷ್ಟಿ ಹಾಗೂ ಹೃದಯದಲ್ಲಿ ಧ್ಯೇಯವನ್ನು ಹೊಂದಿದ್ದೇವೆಂದು ತಿಳಿಸಿದರು.

ಭಾರತ ಒಂದು ದೊಡ್ಡ ಬದಲಾವಣೆಯ ಮೂಲಕ ಸಾಗುತ್ತಿದೆ. ಭಾರತದ ವರ್ಚಸ್ಸು, ಸ್ವಾಭಿಮಾನ ಹಾಗೂ ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ ಸರ್ಕಾರ ಹಗಲು ರಾತ್ರಿ ಕೆಲಸ ಮಾಡುತ್ತಿದೆ. 4 ವರ್ಷಗಳ ಹಿಂದೆ ನಮಗೆ ಸಬ್ ಕಾ ಸಾಥ್ ಸಬ್ ಕಾ ವಕಾಸ್ಗೆ ಜನಾದೇಶ ಸಿಕ್ಕಿತ್ತು. ನವ ಭಾರತ ನಿರ್ಮಾಣಕ್ಕೆ ನಾವು ಶ್ರಮ ಪಡುತ್ತಿದ್ದೇವೆ. ಕಳೆದ ನಾಲ್ಕು ವರ್ಷಗಳಲ್ಲಿ ವಿಶ್ವದಲ್ಲಿ ಭಾರತದ ಬಗ್ಗೆಯಿದ್ದ ನಂಬಿಕೆ ಹಾಗೂ ವಿಶ್ವಾಸವನ್ನು ಹೆಚ್ಚಿಸಿದ್ದೇವೆ. ಇದು ವಿಶ್ವವು ಭಾರತವನ್ನು ನಂಬಿಕಸ್ಥ ದೇಶದಂತೆ ನೋಡುತ್ತಿದೆ ಎಂದಿದ್ದಾರೆ.

ಥೆರೇಸಾ ಮೇ ಭೇಟಿ: ಐದು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ಬೆಳಗ್ಗೆ ಲಂಡನ್ ನಲ್ಲಿ ಬ್ರಿಟನ್ ಪ್ರಧಾನಮಂತ್ರಿ ಥೆರೇಸಾ ಮೇ ಅವರನ್ನು ಭೇಟಿ ಮಾಡಿ ಗಡಿಯಲ್ಲಿ ಭಯೋತ್ಪಾದನೆ, ವೀಸಾ, ಮೊದಲಾದ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಬಸವೇಶ್ವರ ಪುತ್ಥಳಿಗೆ ಪುಷ್ಪ ನಮನ: ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಸವ ಜಯಂತಿ ಪ್ರಯುಕ್ತ ಲಂಡನ್ನಲ್ಲಿರುವ ವಿಶ್ವಗುರು ಬಸವೇಶ್ವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಇಂದು ಪ್ರಧಾನಿ ಮೋದಿ ಬ್ರಿಟನ್ ಸಂಸತ್ ಭವನದ ಎದುರುಗಡೆ ಥೇಮ್ಸ್ ನದಿ ದಂಡೆಯಲ್ಲಿ ಸ್ಥಾಪಿತವಾಗಿರುವ ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಲಂಡನ್ ಬಸವೇಶ್ವರ ಪ್ರತಿಷ್ಠಾನ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಿದರು. ಇದಕ್ಕೂ ಮುನ್ನ ಕನ್ನಡದಲ್ಲೇ ಬಸವ ಜಯಂತಿ ಶುಭಾಶಯ ಕೋರಿ ಟ್ವೀಟ್ ಮಾಡಿದ್ದ ಮೋದಿ, ಭಗವಾನ್ ಬಸವೇಶ್ವರರಿಗೆ ಅವರ ಜಯಂತಿಯಂದು ನಾನು ತಲೆ ಬಾಗುತ್ತೇನೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅವರು ಕೇಂದ್ರ ಸ್ಥಾನ ಅಲಂಕರಿಸುತ್ತಾರೆ. ಸಾಮಾಜಿಕ ಸೌಹಾರ್ದ, ಸಹೋದರತ್ವ, ಏಕತೆ ಹಾಗೂ ಸಹಾನುಭೂತಿಗೆ ಅವರು ನೀಡಿದ ಪ್ರಾಮುಖ್ಯತೆ ನಮಗೆ ಸದಾ ಪ್ರೇರಣೆ ಎಂದು ಹೇಳಿದರು.

Translate »