ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ಹಲವೆಡೆ ವಿದ್ಯುತ್ ವ್ಯತ್ಯಯ

January 28, 2021

ಮೈಸೂರು,ಜ.27-ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಹೊಸ 66ಕೆವಿ ಮಾರ್ಗದ ತುರ್ತು ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಜ.29ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಹೊರಳವಾಡಿ ಫೀಡರ್‍ಗೆ ಒಳಪಡುವ ಗ್ರಾಮಗಳಾದ ಕಿರುಗುಂದ, ಸೋನಳ್ಳಿ, ಕುಪ್ಪರವಳ್ಳಿ, ಬೆಳಗುಂದ, ನಗರ್ಲೆ, ಹೊರಳವಾಡಿ, ಸರಗೂರು, ಬಸವನಪುರ, ಮುಳ್ಳೂರು, ಗೀಕಳ್ಳಿ, ಗೀಕಳ್ಳಿಹುಂಡಿ, ಆಲಂಬೂರು, ಆಲಂಬೂರು ಮಂಟಿ, ಕಲ್ಮಳ್ಳಿ ಗ್ರಾಮಗಳಲ್ಲಿರುವ ಗೃಹಬಳಕೆ ಸ್ಥಾವರಗಳಿಗೆ ಮಾತ್ರ. ಆಲಂಬೂರು ಮತ್ತು ಸೋನಳ್ಳಿ ಫೀಡರ್‍ಗೆ ಒಳಪಡುವ ಗ್ರಾಮಗಳಾದ ಸೋನಳ್ಳಿ, ಕಲ್ಮಳ್ಳಿ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ನಂಜನಗೂಡು ಸೆಸ್ಕ್ ವಿಭಾಗದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Translate »